Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಟಿ ರಂಜನಿ ರಾಘವನ್ ಅವರ ಮನೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ಇಲ್ಲಿದೆ ನೋಡಿ!!

0

ಕಿರುತೆರೆಯ ನಟಿ ರಂಜನಿ ರಾಘವನ್ ಅವರು ಮಾರ್ಚ್ 29 1994 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಪುಟ್ಟಗೌರಿ ಮದುವೆ ಎನ್ನುವ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟರು. ಇದಾದ ಮೇಲೆ ಮಲಯಾಳಂನಲ್ಲಿ ಕೂಡ ಒಂದು ಧಾರಾವಾಹಿಯಲ್ಲಿ ನಟಿಸಿದ್ದಾರೆ. ನಂತರ ಇಷ್ಟ ದೇವತೆ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಇವರು ಕೇವಲ ನಟಿ ಮಾತ್ರ ಅಲ್ಲ ರೈಟರ್ ಮತ್ತು ಕ್ರಿಯೇಟಿವ್ ಡೈರೆಕ್ಟರ್ ಕೂಡ ಹೌದು. ಪ್ರಸ್ತುತ ಕನ್ನಡತಿ ಸೀರಿಯಲ್ ನಲ್ಲಿ ನಾಯಕಿ ನಟಿಯಾಗಿ ಕಿರಣ್ ರಾಜ್ ಅವರ ಜೊತೆಗೆ ಅಭಿನಯ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ರಂಜನಿ ರಾಘವನ್ ಅವರು ಭುವನೇಶ್ವರಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆ ಇದರಲ್ಲಿ ರಂಜನಿ ರಾಘವನ್ ಅವರು ಕನ್ನಡ ಲೆಕ್ಚರರ್ ಆಗಿ ಅಭಿನಯಿಸುತ್ತಿದ್ದಾರೆ.

ಈ ಸೀರಿಯಲ್ ನಲ್ಲಿ ಕಿರಣ್ ರಾಜ್, ರಂಜನಿ ರಾಘವನ್, ಸಾರಾ ಅಣ್ಣಯ್ಯ, ಚಿತ್ಕಲಾ ಬಿರಾದಾರ್, ರವಿಕುಮಾರ್ ಇನ್ನೂ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ. ಇನ್ನೂ ಕನ್ನಡತಿ ಧಾರಾವಾಹಿಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನವರಿ 27 2020 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಈ ಧಾರಾವಾಹಿಯನ್ನು ಯಶ್ವಂತ್ ಪಾಂಡು ಅವರು ನಿರ್ದೇಶನ ಮಾಡುತ್ತಿದ್ದಾರೆ ಮತ್ತು ಸಿನಿಮಾ ನಿರ್ದೇಶಕರಾದ ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಸಿನಿಮಾಗೆ ಬಂದರೆ 2017 ರಲ್ಲಿ ರಾಜಹಂಸ ಚಿತ್ರದಲ್ಲಿ ಮೊದಲನೆಯದಾಗಿ ನಟಿಸುತ್ತಾರೆ.

ತದನಂತರ ಠಕ್ಕರ್, ಸತ್ಯಂ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಹಕೂನ ಮಟಾಟ ಎನ್ನುವ ವೆಬ್ ಸಿರೀಸ್ ನಲ್ಲೂ ಕೂಡ ಅಭಿನಯಿಸಿದ್ದಾರೆ.

ಈ ಸೀರಿಸ್ ನಲ್ಲಿ ರಂಜನಿ ರಾಘವನ್ ಅವರ ಜೊತೆಗೆ ವಿಜಯ ರಾಘವೇಂದ್ರ, ಚಂದನ, ಕಿಶೋರ್ ಇನ್ನು ಮುಂತಾದ ಕಲಾವಿದರು ಕೂಡ ಅಭಿನಯ ಮಾಡಿದ್ದಾರೆ ಇದರ ಜೊತೆಗೆ ಪೌರ್ಣಮಿ ತಿಂಕಲ್ ಎನ್ನುವ ಮಲಯಾಳಂ ಧಾರಾವಾಹಿಯಲ್ಲೂ ಕೂಡ ಅಭಿನಯಿಸಿದ್ದಾರೆ.

ನಟಿ ರಂಜನಿ ರಾಘವನ್ ಅವರ ಮನೆಯ ಒಳಾಂಗಣ ಮತ್ತು ಹೊರಾಂಗಣ ಹೇಗಿದೆ ಎಂದು ನೀವು ಇಲ್ಲಿ ಕೆಲ ದೃಶ್ಯಗಳಿಂದ ನೋಡಬಹುದು…..

Leave A Reply