ನಟಿ ಮೇಘನಾ ರಾಜ್ ಅವರ ಮಗ ರಾಯನ್ ರಾಜ್ ಸರ್ಜಾ ಎಷ್ಟು ಚೆನ್ನಾಗಿ ಟಿವಿ ನೋಡಿಕೊಂಡು ಡ್ಯಾನ್ಸ್ ಮಾಡಿದ್ದಾನೆ ಗೊತ್ತಾ. ಇನ್ನು ರಾಯನ್ ಅನ್ನು ಖ್ಯಾತ ನಟಿ ಶ್ರುತಿ ಅವರ ಮಗಳು ಗೌರಿ ಶ್ರುತಿಯವರು ಎತ್ತಿಕೊಂಡು ಸಹ ಡ್ಯಾನ್ಸ್ ಮಾಡಿಸಿದ್ದಾರೆ. ಈ ವಿಡಿಯೋವನ್ನು ಮೇಘನಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ರಾಯನ್ ಡ್ಯಾನ್ಸ್ ನೋಡಿ ಬಹುತೇಕ ಅಭಿಮಾನಿಗಳು ಅದಕ್ಕೆ ಮನಸೋತಿದ್ದಾರೆ.
ಕನ್ನಡದ ಜನಪ್ರಿಯ ನಟ ಚಿರು ಸರ್ಜಾ ಅವರು ನಮ್ಮೆಲ್ಲರನ್ನು ಬಿಟ್ಟು ಈ ವರ್ಷಕ್ಕೆ 2 ವರ್ಷಗಳು ಪೂರ್ತಿಯಾಯಿತು. ಹೌದು ಚಿರು ಸರ್ಜಾ ಅವರು ಜೂನ್ 7 2020 ರಂದು ಹೃದಯಾಘಾತದಿಂದ ಸಾವನ್ನಪ್ಪಿ ಅಕಾಲಿಕ ಮರಣ ಹೊಂದಿದರು. ಇವರ ಮರಣದಿಂದ ಸಾಕಷ್ಟು ಅಭಿಮಾನಿಗಳು ಕುಟುಂಬಸ್ಥರು ತುಂಬಾನೇ ನೋವನ್ನು ಪಟ್ಟರು.
ಅದರಲ್ಲೂ ಚಿರು ಸರ್ಜಾ ಅವರ ಪತ್ನಿ ನಟಿ ಮೇಘನಾ ರಾಜ್ ಅವರು ಆ ಸಮಯದಲ್ಲಿ 4 ತಿಂಗಳ ಗರ್ಭಿಣಿಯಾಗಿದ್ದರು. ತನ್ನ ಮಗ ರಾಯನ್ ರಾಜ್ ಸರ್ಜಾ ಹುಟ್ಟಿದ ಮೇಲೆ ತಮ್ಮ ನೋವನ್ನು ಕಳೆಯುತ್ತಾ ತನ್ನ ಮಗುವಿನ ನಗುವಿನಲ್ಲಿ ತಮ್ಮ ಸಂತೋಷವನ್ನು ನೋಡುತ್ತಿದ್ದಾರೆ.
ಇನ್ನೂ ಚಿರು ಸರ್ಜಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕನಕಪುರ ಹತ್ತಿರ ಇರುವ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ಮಣ್ಣು ಮಾಡಿದ್ದಾರೆ. ಇನ್ನು ಮೊನ್ನೆಯಷ್ಟೇ ಅಂದರೆ ಜೂನ್ 7 ರಂದು ಚಿರು ಸರ್ಜಾ ಅವರ ಎರಡನೆಯ ವರ್ಷದ ಪುಣ್ಯತಿಥಿ ಸ್ಮರಣೆಯನ್ನು ಮಾಡಿಕೊಂಡರು. ಹಾಗೆಯೇ ಚಿರು ಸರ್ಜಾ ಅವರಿಗೆ ಸಮಾಧಿಯನ್ನು ಕೂಡ ಕಟ್ಟಿಸಲಾಗಿದೆ.
ಆ ದಿನ ಮೇಘನಾರಾಜ್ ಅವರ ಕುಟುಂಬದವರು ಹಾಗೂ ಚಿರು ಸರ್ಜಾ ಅವರ ಕುಟುಂಬದವರು ಎಲ್ಲರೂ ಅಲ್ಲಿಗೆ ಹೋಗಿ ಚಿರು ಅವರನ್ನು ನೆನೆದು ಭಾವುಕರಾಗಿದ್ದರು. ಇನ್ನೂ ಚಿರು ಸರ್ಜಾ ಅವರು ಬದುಕಿದ್ದಾಗ ಎಲ್ಲರ ಜೊತೆ ಸದಾ ನಗುವಿನಿಂದಲೇ ಮಾತನಾಡಿಸುತ್ತಿದ್ದರು. ಅವರು ಯಾರನ್ನು ಸಹ ಕೀಳು ಮೇಲು ಎಂದು ನೋಡುತ್ತಿರಲಿಲ್ಲ. ಎಲ್ಲರನ್ನೂ ಒಂದೇ ರೀತಿಯ ಭಾವನೆಯಿಂದ ನೋಡುತ್ತಿದ್ದರು.
ಹಾಗೆಯೇ ಚಿರು ಅವರು ಇದ್ದಾಗ ಯಾವತ್ತೂ ಕೂಡ ಅವರು ಬೇಸರದಲ್ಲಿ ಇರುತ್ತಿರಲಿಲ್ಲ ಬಳಿಕ ಖುಷಿ ಖುಷಿಯಾಗಿ ಸಂತೋಷದಿಂದ ಎಲ್ಲರ ಜೊತೆಗೆ ಬೆರೆಯುತ್ತಿದ್ದರು. ಆದರೆ ದೇವರು ಇದನ್ನು ಸಹಿಸಲಿಲ್ಲ ಅನಿಸುತ್ತದೆ ತನ್ನ ಮಗನ ಮುಖವನ್ನು ಕೂಡ ನೋಡದೆ ತಮ್ಮ ಪ್ರಾಣವನ್ನು ತ್ಯಜಿಸಿದರು…..