ನಟಿ ಮೀನಾ ಬದುಕಿನಲ್ಲಿ ಘೋ,ರ ದು,ರಂತ, ಇವರ ಪತಿ ಹೇಗೆ ಸಾವನ್ನಪ್ಪಿದರು ಗೊತ್ತೇ ?? ಈ ಒಂದು ಸಣ್ಣ ತಪ್ಪೇ ಕಾರಣ ಆಯ್ತಾ ??
ನಟಿ ಮೀನಾ ಅವರು ಸೆಪ್ಟೆಂಬರ್ 16 1976 ರಂದು ಚೆನ್ನೈನಲ್ಲಿ ಜನಿಸಿದ್ದಾರೆ. ಇವರು ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವಿದ್ಯಾಸಾಗರ್ ಅವರನ್ನು 2009 ರಲ್ಲಿ ವಿವಾಹ ಮಾಡಿಕೊಂಡಿದ್ದರು. ಇವರಿಗೆ ನೈನಿಕಾ ಎನ್ನುವ ಮುದ್ದಾದ ಮಗಳು ಇದ್ದಾಳೆ. ನೈನಿಕಾ ಕೂಡ ದಳಪತಿ ವಿಜಯ್ ಅವರ ತೆರಿ ಸಿನಿಮಾದಲ್ಲಿ 5 ವರ್ಷ ವಯಸ್ಸಿನಲ್ಲಿದ್ದಾಗಲೇ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ನಟಿಸಿದ್ದಾರೆ.
ಇನ್ನೂ ದುಃಖದ ವಿಷಯ ಏನು ಎಂದರೆ ನಟಿ ಮೀನಾ ಅವರ ಬದುಕಿನಲ್ಲಿ ದೊಡ್ಡ ಘೋರ ದುರಂತ ನಡೆದಿದೆ. ಹೌದು ಈಗಾಗಲೇ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರ ಮರಣ ಹೊಂದಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದರೆ ಇದರ ಹಿಂದಿನ ಕಥೆ ನಿಮಗೆ ಗೊತ್ತಾ. ಸಾಮಾನ್ಯವಾಗಿ ಈ ಅಪಾರ್ಟ್ ಮೆಂಟ್ ಗಳಲ್ಲಿ ಸಾಕಷ್ಟು ವಿಧವಾದ ಪಾರಿವಾಳಗಳು ಬರುತ್ತಲೇ ಇರುತ್ತವೆ.
ಪಾರಿವಾಳಗಳು ಮನೆಗೆ ಬಂದರೆ ತಪ್ಪು ಎಂದು ಹೇಳುವುದಿಲ್ಲ ಆದರೆ ಪಾರಿವಾಳದಲ್ಲಿರುವ ಹಿಕ್ಕಿಯಿಂದ ಮನುಷ್ಯನ ಆರೋಗ್ಯಕ್ಕೆ ತುಂಬಾನೇ ಏರುಪೇರಾಗುತ್ತದೆ. ಹೌದು ಪಾರಿವಾಳ ಹಿಕ್ಕೆಯಿಂದ ಬರುವ ಗಾಳಿಯನ್ನು ಮನುಷ್ಯ ಉಸಿರಾಡಿದರೆ ಶ್ವಾಸಕೋಶಗಳಿಗೆ ತೊಂದರೆಯುಂಟಾಗುತ್ತದೆ. ಇದರಂತೆಯೇ ಪಾರಿವಾಳ ಹಿಕ್ಕೆಯಿಂದ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಮರಣ ಹೊಂದುವುದಕ್ಕೆ ಕಾರಣವಾಗಿದೆ.
ಮೊದಲು ವಿದ್ಯಾಸಾಗರ್ ಅವರು ಈ ತೊಂದರೆಯನ್ನು ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ನಂತರ ಇದು ಹೆಚ್ಚಾದಾಗ ಚಿಕಿತ್ಸೆಯನ್ನು ತೆಗೆದುಕೊಂಡಿದ್ದರು. ಆದರೆ ಕೋವಿಡ್ ಬಂದ ಕಾರಣ ಮತ್ತಷ್ಟು ಶ್ವಾಸಕೋಶಗಳಿಗೆ ಹಾನಿಯಾಯಿತು. ಇದರಿಂದ ಮತ್ತೆ ಚಿಕಿತ್ಸೆ ತೆಗೆದುಕೊಂಡು ಚೇತರಿಸಿಕೊಂಡರು. ಇದಾದ ಮೇಲೂ ಕೂಡ ಎರಡನೇ ಬಾರಿಯೂ ಕೋವಿಡ್ ಮಾರಕ ತಗುಲಿತು.
ಇದಕ್ಕೂ ಕೂಡ ಮತ್ತೆ ಚಿಕಿತ್ಸೆಯನ್ನು ತೆಗೆದುಕೊಂಡು ಅದರಿಂದ ಕೂಡ ಚೇತರಿಕೆ ಆದರು. ಆದರೆ ಶ್ವಾಸಕೋಶಗಳು ಮತ್ತಷ್ಟು ಹಾನಿಯಾಗಿದ್ದ ಕಾರಣ ಇದಕ್ಕೆ ಮತ್ತೆ ಚಿಕಿತ್ಸೆ ತೆಗೆದುಕೊಳ್ಳುವಾಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಕೇವಲ 45 ವರ್ಷಗಳಿಗೆ ನಟಿ ಮೀನಾ ಅವರು ತಮ್ಮ ಪತಿಯನ್ನು ಕಳೆದುಕೊಂಡರು.
ಹಾಗಾಗಿ ಎಲ್ಲರಿಗೂ ಹೇಳುವುದು ಒಂದೇ ಯಾವುದೇ ಚಿಕ್ಕ ಆರೋಗ್ಯ ಸಮಸ್ಯೆ ಬಂದರೂ ಕೂಡ ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಸಣ್ಣದೋ ದೊಡ್ಡದೋ ಎಂದು ಅದನ್ನು ನಿರ್ಲಕ್ಷ್ಯ ಮಾಡಿದರೆ ಹೀಗೆ ಪ್ರಾಣದ ಮೇಲೆ ಬರುತ್ತದೆ…..