ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರು ಸೆಪ್ಟೆಂಬರ್ 16 1976 ರಂದು ಜನಿಸಿದ್ದಾರೆ. ಇವರ ತಂದೆಯ ಹೆಸರು ದೊರೈರಾಜ್ ಮತ್ತು ತಾಯಿಯ ಹೆಸರು ರಾಜಮಲ್ಲಿಕಾ. ಇನ್ನೂ ಮೀನಾ ಅವರು ತಮಿಳು ಮಲಯಾಳಂ ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಮೀನಾ ಅವರು 1982 ರಂದು ಬಾಲನಟಿಯಾಗಿ ತಮಿಳಿನ ನೆಂಜನ್ಗಲ್ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿಕೊಂಡರು.
ಇದಾದ ಮೇಲೆ ಇವರು ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಬಾಲನಟಿಯಾಗಿ ಅಭಿನಯಿಸಿದ್ದಾರೆ. ಇವರು ಮೊತ್ತ ಬಾಲನಟಿಯಾಗಿ 20 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೀನಾ ಅವರು 90 ಮತ್ತು 2000ರ ಸಮಯದಲ್ಲಿ ಟಾಪ್ ಲೀಡಿಂಗ್ ನಟಿಯಾಗಿ ಮಿಂಚಿದವರು. ಇದಾದ ಮೇಲೆ 1990 ರಲ್ಲಿ ತೆಲುಗಿನಲ್ಲಿ ನವಯುಗಂ ಚಿತ್ರದ ಮೂಲಕ ತೆರೆಯ ಮೇಲೆ ಹೀರೋಯಿನ್ ಆಗಿ ಎಂಟ್ರಿ ನೀಡಿದರು.
ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ ಮೀನಾ ಅವರು 1995 ರಲ್ಲಿ ರವಿಚಂದ್ರನ್ ಅವರ ಜೊತೆಗೆ ಪುಟ್ನಂಜ ಚಿತ್ರದ ಮೂಲಕ ನಟಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಮೊಮ್ಮಗ, ಚೆಲುವ, ಶ್ರೀ ಮಂಜುನಾಥ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ, ಸ್ವಾತಿಮುತ್ತು, ಗೇಮ್ ಫಾರ್ ಲವ್, ಮಹಾಸಾದ್ವಿ ಮಲ್ಲಮ್ಮ, ಹೆಂಡ್ತೀರ್ ದರ್ಬಾರ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದರ ಜೊತೆಗೆ ಮೀನಾ ಅವರು ತಮಿಳು ಮತ್ತು ತೆಲುಗಿನಲ್ಲಿ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಾಗೆ ಸಾಕಷ್ಟು ಶೋಗಳಿಗೆ ಜಡ್ಜ್ ಕೂಡ ಆಗಿದ್ದರು. ಮೀನಾ ಅವರು 2009 ರಲ್ಲಿ ವಿದ್ಯಾಸಾಗರ್ ಎನ್ನುವವರನ್ನು ತಿರುಮಲದಲ್ಲಿರುವ ಆರ್ಯ ವ್ಯಾಸ ಸಮಾಜಕಲ್ಯಾಣ ಮಂಡಪಂನಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ಇನ್ನು ವಿದ್ಯಾಸಾಗರ್ ಅವರು ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನೈನಿಕ ವಿದ್ಯಾಸಾಗರ್ ಎನ್ನುವ ಏಕೈಕ ಮುದ್ದಾದ ಮಗಳು ಇದ್ದಾಳೆ. ನೈನಿಕಾ ಅವರು ಕೇವಲ 5 ವರ್ಷದ ವಯಸ್ಸಿನಲ್ಲಿದ್ದಾಗಲೇ ದಳಪತಿ ವಿಜಯ್ ಅವರ ತಮಿಳಿನ ತೇರಿ ಸಿನಿಮಾದಲ್ಲಿ ನಟಿಸಿದ್ದಾರೆ. ಇಲ್ಲಿ ನೀವು ಮೀನಾ ಮತ್ತು ವಿದ್ಯಾಸಾಗರ್ ಅವರ ಮದುವೆಯ ಕೆಲ ಸುಂದರ ಅಪರೂಪದ ದೃಶ್ಯಗಳನ್ನು ನೋಡಬಹುದು…..