ದಕ್ಷಿಣ ಭಾರತದ ಖ್ಯಾತ ನಟಿ ಮಾಧವಿ ಅವರ ಮೊದಲಿನ ಹೆಸರು ಕನಕ ವಿಜಯಲಕ್ಷ್ಮಿ ಎಂದು. ತದನಂತರ ಇವರು ಸಿನಿಮಾ ರಂಗಕ್ಕೆ ಬಂದ ಮೇಲೆ ಮಾಧವಿ ಎನ್ನುವ ಹೆಸರಿಗೆ ಬದಲಾಯಿಸಿಕೊಂಡರು. ಇನ್ನು ಮಾಧವಿ ಅವರು ಸೆಪ್ಟೆಂಬರ್ 14 1962 ರಂದು ಆಂಧ್ರಪ್ರದೇಶದ ಏಲೂರು ನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಗೋವಿಂದ ಸ್ವಾಮಿ ಮತ್ತು ತಾಯಿಯ ಹೆಸರು ಶಶಿರೇಖ ಸ್ವಾಮಿ.
ಮಾಧವಿ ಅವರಿಗೆ ಕೀರ್ತಿ ಕುಮಾರಿ ಮತ್ತು ಧನಂಜಯ್ ಎನ್ನುವ ಸಹೋದರಿ ಮತ್ತು ಸಹೋದರ ಕೂಡ ಇದ್ದಾರೆ. ಇವರು ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ಭರತನಾಟ್ಯ ಮತ್ತು ಕಥಕ್ ನೃತ್ಯವನ್ನು ಕಲಿತುಕೊಂಡು ಸಾವಿರಾರು ವೇದಿಕೆಗಳ ಮೇಲೆ ಪ್ರದರ್ಶನಗಳನ್ನು ನೀಡಿದ್ದಾರೆ. ಹಾಗೆಯೇ ಮಾಧವಿ ಅವರು ಹೈದರಾಬಾದ್ನಲ್ಲಿ ಸ್ಟ್ಯಾನ್ಲೆ ಗರ್ಲ್ಸ್ ಹೈಸ್ಕೂಲ್ ನಲ್ಲಿ ತಮ್ಮ ಶಾಲೆಯ ಶಿಕ್ಷಣವನ್ನು ಮಾಡಿ ಮುಗಿಸಿದ್ದಾರೆ.
ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಮಾಧವಿ ಅವರು ದಾಸರಿ ನಾರಾಯಣ ರಾವ್ ಅವರ ನಿರ್ದೇಶನದ ತೂರ್ಪು ಪಡಮರ ಎನ್ನುವ ತೆಲುಗು ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿದ್ದಾರೆ. ಈ ಸಿನಿಮಾ 1976 ರಂದು ಬಿಡುಗಡೆಯಾಗಿತ್ತು. ಇದಾದ ಮೇಲೆ ಸಾಕಷ್ಟು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಕನ್ನಡ ಮಲಯಾಳಂ ತಮಿಳು ಮತ್ತು ಹಿಂದಿ ಭಾಷೆಗಳ ಚಿತ್ರಗಳಲ್ಲೂ ನಟಿಸಿದ್ದಾರೆ.
ಇನ್ನೂ ಸ್ಯಾಂಡಲ್ವುಡ್ ನಲ್ಲಿ ನೋಡುವುದಾದರೆ 1981 ರಂದು ಘರ್ಜನೆ ಚಿತ್ರದ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಗೆ ಕಾಲಿಟ್ಟರು. ಕನ್ನಡದಲ್ಲಿ ಇವರು ಸುಮಾರು 20 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಮಾಧವಿ ಅವರು 1996 ರಂದು ಯುಎಸ್ ಮೂಲದ ರಾಲ್ಫ್ ಶರ್ಮಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ರಾಲ್ಫ್ ಶರ್ಮಾ ಅವರಿಗೆ ತಮ್ಮದೇ ಆದ ಫಾರ್ಮಸಿಟಿಕಲ್ ಕಂಪೆನಿ ಇದೆ.
ಮಾಧವಿ ಅವರು ವಿವಾಹ ಮಾಡಿಕೊಂಡ ಮೇಲೆ ಯಾವ ಸಿನಿಮಾಗಳಲ್ಲೂ ನಟಿಸುತ್ತಿಲ್ಲ ಬಳಿಕ ಪತಿಗೆ ಸಹಾಯ ಮಾಡಬೇಕೆಂದು ತಮ್ಮದೇ ಆದ ಕಂಪೆನಿಯಲ್ಲಿ ದಿ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಇವರಿಗೆ ಟಿಫನಿ ಶರ್ಮಾ,
ಪ್ರಿಸಿಲಾ ಶರ್ಮ ಮತ್ತು ಎವ್ಲಿನ್ ಶರ್ಮಾ ಎಂಬ 3 ಜನ ಹೆಣ್ಣು ಮಕ್ಕಳಿದ್ದಾರೆ. ಪ್ರಸ್ತುತ ಮಾಧವಿ ಅವರು ಯುಎಸ್ ನಲ್ಲಿ ತಮ್ಮ ಪತಿ ಮತ್ತು ಮಕ್ಕಳ ಜೊತೆಗೆ ಸುಖಮಯ ವೈವಾಹಿಕ ಜೀವನವನ್ನು ಸಾಗಿಸುತ್ತಿದ್ದಾರೆ……