ಭಾವನಾ ರಾಮಣ್ಣ ಅವರ ಮೊದಲಿನ ಹೆಸರು ನಂದಿನಿ ರಾಮಣ್ಣ ಎಂದು. ತದನಂತರ ಇವರು ಸಿನಿಮಾ ರಂಗಕ್ಕೆ ಬಂದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಇವರು ಚಿಕ್ಕ ವಯಸ್ಸಿನಿಂದಲೇ ಅಂದರೆ ಹತ್ತು ವರ್ಷಗಳ ಕಾಲ ಭರತನಾಟ್ಯ ನೃತ್ಯವನ್ನು ಕಲಿತುಕೊಂಡು ಬಂದು ಸಾಕಷ್ಟು ವೇದಿಕೆಗಳ ಮೇಲೆ ಪ್ರದರ್ಶನಗಳನ್ನು ನೀಡಿದ್ದಾರೆ.
ಇನ್ನೂ ಭಾವನಾ ರಾಮಣ್ಣ ಅವರು ಆಗುಂಬೆಯಲ್ಲಿ ಜನಿಸಿದ್ದ ತುಳು ಕನ್ನಡ ತಮಿಳು ಹಿಂದಿ ಭಾಷೆಗಳಲ್ಲಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು 1996 ರಲ್ಲಿ ಮರಿ ಬಳೆ ಎನ್ನುವ ತುಳು ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು. ನಮ್ಮ ಕನ್ನಡದಲ್ಲಿ ನೋಡಿದರೆ 1997 ರಲ್ಲಿ ನೀ ಮುಡಿದ ಮಲ್ಲಿಗೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ತದನಂತರ ನಂಬರ್ 1, ಚಂದ್ರಮುಖಿ, ಪ್ರಾಣಸಖಿ, ಡಿವಿರಿ, ದೀಪಾವಳಿ, ಎಲ್ಲರ ಮನೆ ದೋಸೆನೂ, ಕುರಿಗಳು ಸಾರ್ ಕುರಿಗಳು, ರಾಷ್ಟ್ರಗೀತೆ, ಒಲವೇ ನಿನಗಾಗಿ, ಕ್ಷಮಾ, ಚೆಲ್ವಿ, ರಾಂಗ್ ನಂಬರ್, ಹಲೋ, ಪ್ರೀತಿ ಪ್ರೇಮ ಪ್ರಣಯ, ಶಾಂತಿಸಾಗರ್, ಭಗವಾನ್, ಇಂತಿ ನಿನ್ನ ಪ್ರೀತಿಯ, ವಿಮುಕ್ತಿ, ಆಪ್ತರಕ್ಷಕ, ಚಿಂಗಾರಿ, ಭಗೀರಥಿ, ಕ್ರೇಜಿಸ್ಟಾರ್, ನಿರುತ್ತರ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದರಲ್ಲಿ ಭಾವನಾ ರಾಮಣ್ಣ ಅವರಿಗೆ ಭಗೀರಥಿ ಸಿನಿಮಾಗೆ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಕೂಡ ದೊರಕಿದೆ. ಇದರ ಜೊತೆಗೆ ಇವರ ಭರತನಾಟ್ಯಂ ನೃತ್ಯಕ್ಕೆ ಕರ್ನಾಟಕ ರಾಜ್ಯದ 3 ಸ್ಟೇಟ್ ಅವಾರ್ಡ್ ಗಳು ಸಹ ದೊರಕಿವೆ. ಹಾಗೆಯೇ ಇವರು ನಟಿಸಿದ ಶಾಂತಿ ಸಿನಿಮಾ ಕೂಡ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಇಲ್ಲಿ ನೀವು ನಟಿ ಭಾವನಾ ರಾಮಣ್ಣ ಅವರ ಮನೆ ಒಳಗೆ ಹೇಗೆ ಇದೆ ಎಂದು ಕೆಲ ದೃಶ್ಯಗಳಿಂದ ನೋಡಬಹುದು…..