ಕನ್ನಡದ ಖ್ಯಾತ ನಟ ಉಪೇಂದ್ರ ಅವರ ಪತ್ನಿ ನಟಿ ಪ್ರಿಯಾಂಕ ಉಪೇಂದ್ರ ಅವರ ಮನೆಯಲ್ಲಿ ವಿಶೇಷವಾಗಿ ಲಕ್ಷ್ಮೀ ಪೂಜೆಯನ್ನು ನಡೆಸಿದ್ದಾರೆ. ಹೌದು ಇವರು ಆಗಾಗ ದೇವರಿಗೆ ಈ ರೀತಿಯ ಪೂಜೆಗಳನ್ನು ಸಲ್ಲಿಸುತ್ತಾ ಬರುತ್ತಾರೆ. ಉಪೇಂದ್ರ ಅವರ ಕುಟುಂಬಕ್ಕೆ ದೇವರ ಮೇಲೆ ಹೆಚ್ಚು ಭಕ್ತಿ ಇದೆ ಎಂದು ಇವುಗಳನ್ನು ನೋಡಿದರೆ ಗೊತ್ತಾಗುತ್ತದೆ.
ಹೌದು ತಮ್ಮ ಮನೆಯಲ್ಲಿ ನಡೆಸಿದ ಪೂಜೆಗೆ ಸಾಕಷ್ಟು ಬಂಧು ಮಿತ್ರರು ಮತ್ತು ಸ್ನೇಹಿತರನ್ನು ಕರೆದಿದ್ದರು. ಇನ್ನೂ ಪ್ರಿಯಾಂಕ ಉಪೇಂದ್ರ ಅವರ ಮನೆಗೆ ಬಂದ ಮುತ್ತೈದೆಗಳಿಂದ ಆಶೀರ್ವಾದವನ್ನು ಪಡೆದು ಕೆಲವು ವಿಡಿಯೋ ತುಣುಕುಗಳನ್ನು ಮತ್ತು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಇವುಗಳನ್ನು ಇಲ್ಲಿ ನೀವು ನೋಡಬಹುದು.
ಇನ್ನೂ ಪ್ರಿಯಾಂಕ ಉಪೇಂದ್ರ ಅವರು ನವೆಂಬರ್ 9 1977 ರಂದು ಕೋಲ್ಕತಾದಲ್ಲಿ ಜನಿಸಿದ್ದಾರೆ. ಈಗ ಇವರಿಗೆ 44 ವರ್ಷಗಳಾಗಿವೆ. ಇವರಿಗೆ ವಿವೇಕ್ ತ್ರಿವೇದಿ ಎನ್ನುವ ಸಹೋದರ ಕೂಡ ಇದ್ದಾರೆ. ಪ್ರಿಯಾಂಕಾ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೆಂಗಾಲಿ ಹಿಂದಿ ತೆಲುಗು ತಮಿಳು ಮತ್ತು ಒಡಿಯಾ ಭಾಷೆಗಳಲ್ಲಿ ಕೂಡ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇವರು 1997 ರಲ್ಲಿ ಬೆಂಗಾಳಿಯಲ್ಲಿ ಬಿಡುಗಡೆಯಾದ ಯೋಧ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ 2001 ರಲ್ಲಿ ವಿಷ್ಣುವರ್ಧನ್ ಅವರ ಜೊತೆಗೆ ಕೋಟಿಗೊಬ್ಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಹೆಚ್2ಓ, ರೌಡಿ ಅಳಿಯ, ಮಲ್ಲ, ಪಂಚರಂಗಿ, ಶ್ರೀಮತಿ, ಕ್ರೇಜಿ ಸ್ಟಾರ್, ಉಪ್ಪಿ 2, ಪ್ರಿಯಾಂಕಾ, ಮಮ್ಮಿ, ಸೆಕೆಂಡ್ ಹಾಫ್, ದೇವಕಿ, 1980 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನೂ ಇವರ ಸಾಕಷ್ಟು ಕನ್ನಡ ಚಿತ್ರಗಳು ಪ್ರಸ್ತುತ ಶೂಟಿಂಗ್ ಮತ್ತು ಪ್ರೊಡಕ್ಷನ್ ಕೆಲಸವನ್ನು ಮುಗಿಸಿಕೊಂಡು ತೆರೆಯ ಮೇಲೆ ಬರಲು ಕಾಯುತ್ತಿವೆ. ಇನ್ನು ಪ್ರಿಯಾಂಕಾ ಉಪೇಂದ್ರ ಅವರು 2003 ರಲ್ಲಿ ಉಪೇಂದ್ರ ಅವರನ್ನು ವಿವಾಹ ಮಾಡಿಕೊಂಡರು. ಇವರಿಗೆ ಐಶ್ವರ್ಯ ಉಪೇಂದ್ರ ಮತ್ತು ಆಯುಷ್ ಉಪೇಂದ್ರ ಎನ್ನುವ ಇಬ್ಬರು ಮಕ್ಕಳಿದ್ದಾರೆ……