Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಟಿ ತಾರಾ ಅವರ ತಾಯಿಯ ಹುಟ್ಟು ಹಬ್ಬದ ಆಚರಣೆ, ಹೇಗಿತ್ತು ನೋಡಿ ಇಲ್ಲಿದೆ ವಿಡಿಯೋ !!

0

ಕನ್ನಡದ ಜನಪ್ರಿಯ ಸ್ಟಾರ್ ನಟಿ ತಾರಾ ಅವರು ತಮ್ಮ ತಾಯಿ ಪುಷ್ಪಾ ಅವರ ಹುಟ್ಟುಹಬ್ಬವನ್ನು ಮಗನ ಜೊತೆಗೆ ಆಚರಣೆ ಮಾಡಿದ್ದಾರೆ. ತಮ್ಮ ತಾಯಿಯ ಹುಟ್ಟು ಹಬ್ಬದ ಆಚರಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದಾರೆ.

ಇನ್ನು ತಾರಾ ಅವರ ಮೊದಲಿನ ಹೆಸರು ಅನುರಾಧ. ತದನಂತರ ಇವರು ಸಿನಿಮಾ ರಂಗಕ್ಕೆ ಬಂದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಇನ್ನೂ ಇವರು ಮಾರ್ಚ್ 4 1973 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಎಂ.ತ್ಯಾಗರಾಜು. ತಾರಾ ಅವರು ತಮಿಳು ಕನ್ನಡ ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು.

 

ಇವರು ಮೊದಲು 1984 ರಲ್ಲಿ ತಮಿಳಿನ ಎಂಗೆಯುಮ್ ಒರು ಗಂಗೈ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿದರು. ನಮ್ಮ ಕನ್ನಡದಲ್ಲಿ 1985 ರಲ್ಲಿ ತುಳಸೀದಳ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ಹಾಗೆಯೇ ತೆಲುಗಿನಲ್ಲಿ 1986 ರಲ್ಲಿ ಸಂಕೀರ್ತನ ಎನ್ನುವ ಚಿತ್ರದ ಮೂಲಕ ಟಾಲಿವುಡ್ ಗೆ ಪ್ರವೇಶ ಮಾಡಿದರು.

ಹೀಗೆ ಇವರು ಸುಮಾರು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಅದರಲ್ಲೂ ನಮ್ಮ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯ ಮಾಡಿದ್ದಾರೆ ಎಂದು ಹೇಳಬಹುದು. ಇನ್ನೂ ತಾರಾ ಅವರು ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಆಗಿದ್ದ ರಾಜ ರಾಣಿ ಮತ್ತು ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಿಗೆ ಜಡ್ಜ್ ಕೂಡ ಆಗಿದ್ದರು. ರಾಜ ರಾಣಿ ಕಾರ್ಯಕ್ರಮದಲ್ಲಿ ತಾರಾ ಅವರ ಜೊತೆಗೆ ಮಜಾ ಟಾಕೀಸ್ ಸೃಜನ್ ಅವರು ಕೂಡ ಜಡ್ಜ್ ಆಗಿದ್ದರು.

ಹಾಗೆಯೇ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಸೃಜನ್ ಲೋಕೇಶ್ ಮತ್ತು ಅನು ಪ್ರಭಾಕರ್ ಅವರು ಕೂಡ ಜಡ್ಜ್ ಆಗಿದ್ದರು. ಇದರ ಜೊತೆಗೆ ತಾರಾ ಅವರು ಕೆಲ ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲೂ ಕೂಡ ತೊಡಗಿಸಿಕೊಂಡಿದ್ದರು.ಇನ್ನು ತಾರಾ ಅವರು ಸಿನಿಮಾಟೋಗ್ರಾಫರ್ ಆಗಿರುವ ಎಚ್ ಸಿ ವೇಣು ಗೋಪಾಲ್ ಅವರನ್ನು 2005 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಶ್ರೀಕೃಷ್ಣ ಎನ್ನುವ ಮಗ ಕೂಡ ಇದ್ದಾನೆ…..

Leave A Reply