Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಟಿ ಜಯಪ್ರದಾ ಅವರ ಮನೆ ಹೇಗಿದೆ ಗೊತ್ತಾ??ಮೊದಲ ಬಾರಿಗೆ ಇಲ್ಲಿದೆ ನೋಡಿ!!

0

ಆಗಿನ ಕಾಲದ ಜನಪ್ರಿಯ ನಟ ನಟಿಯರು ಸಾಕಷ್ಟು ಜನ ಇದ್ದಾರೆ. ಅದರಲ್ಲಿ ನಟಿ ಜಯಪ್ರದಾ ಅವರು ಕೂಡ ಒಬ್ಬರು ಎಂದು ಹೇಳಬಹುದು. ಸೌತ್ ಇಂಡಿಯಾ ಸ್ಟಾರ್ ನಟಿ ಜಯಪ್ರದಾ ಅವರು 70 80 90ರ ಸಮಯದಲ್ಲಿ ಫೇಮಸ್ ನಟಿಯಾಗಿ ಮಿಂಚಿದರು. ಇವರು ಏಪ್ರಿಲ್ 3 1962 ರಂದು ರಾಜಮಂಡ್ರಿಯಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಕೃಷ್ಣ ರಾವ್ ಮತ್ತು ತಾಯಿಯ ಹೆಸರು ನೀಳವೇಣಿ ಎಂದು.

ಜಯಪ್ರದಾ ಅವರು ತೆಲುಗು ಹಿಂದಿ ತಮಿಳು ಮಲಯಾಳಂ ಬೆಂಗಾಳಿ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಜಯಪ್ರದಾ ಅವರು 1974 ರಲ್ಲಿ ತೆಲುಗಿನಲ್ಲಿ ಭೂಮಿಕೋಸಂ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ನಟಿಸಿ ಬೆಳ್ಳಿತೆರೆಯ ಮೇಲೆ ಕಾಣಿಸಿದರು. ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 1977 ರಲ್ಲಿ ಸನಾದಿ ಅಪ್ಪಣ್ಣ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.

ತದನಂತರ ಹುಲಿಯ ಹಾಲಿನ ಮೇವು, ಕವಿರತ್ನ ಕಾಳಿದಾಸ, ಏಕಲವ್ಯ, ಆತ್ಮಬಂಧನ, ಹಿಮಪಾತ, ಪ್ರೇಮಗೀತೆ, ಶಬ್ದವೇದಿ, ಶ್ರೀರೇಣುಕಾದೇವಿ, ಈ ಬಂಧನ, ರಾಜ್ ದ ಶೋ ಮ್ಯಾನ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಜಯಪ್ರದಾ ಅವರು ಕೊನೆಯದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎನ್ನುವ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ.

ಇದಾದ ಮೇಲೆ ಇವರು ಕನ್ನಡ ಭಾಷೆಯಲ್ಲಿ ಯಾವುದೇ ಸಿನಿಮಾಗಳಲ್ಲಿ ಕೂಡ ನಟಿಸುತ್ತಿಲ್ಲ. ಆದರೆ ಬೇರೆ ಭಾಷೆಗಳಲ್ಲಿ ಜಯಪ್ರದಾ ಅವರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರು 1994 ರಲ್ಲಿ ತೆಲುಗು ದೇಶಂ ಪಾರ್ಟಿ ಗೆ ಸೇರಿಕೊಂಡರು. ತದನಂತರ ರಾಂಪುರ್ ನಲ್ಲಿ 2004 ರಿಂದ 2014 ರವರೆಗೂ ಎಂ.ಪಿ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಜಯಪ್ರದಾ ಅವರು 1986 ರಲ್ಲಿ ಶ್ರೀ ಕಾಂತ್ ನಹತಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರು ಇಬ್ಬರು ಗಂಡು ಮಕ್ಕಳನ್ನು ದತ್ತು ಪಡೆದುಕೊಂಡು ಸಾಕಿಕೊಳ್ಳುತ್ತಿದ್ದಾರೆ. ಇಲ್ಲಿ ಜಯಪ್ರದಾ ಅವರ ಮನೆ ಹೇಗಿದೆ ಎಂದು ಕೆಲ ದೃಶ್ಯಗಳಿಂದ ನೋಡಬಹುದು…..

Leave A Reply