ಸೌತ್ ಇಂಡಿಯಾ ಸ್ಟಾರ್ ನಟಿ ಆಗಿರುವ ಖುಷ್ಬೂ ಅವರು ಸೆಪ್ಟೆಂಬರ್ 29 1970 ರಂದು ಮುಂಬೈನಲ್ಲಿ ಜನಿಸಿದ್ದಾರೆ. ಇವರು ಕೇವಲ ನಟಿ ಮಾತ್ರ ಅಲ್ಲ ಸಿನಿಮಾ ನಿರ್ಮಾಪಕಿ ಮತ್ತು ರಾಜಕೀಯ ವ್ಯಕ್ತಿ ಕೂಡ ಹೌದು. ಇವರು ತಮಿಳು ಕನ್ನಡ ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ.
ನಟಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.ಖುಷ್ಬೂ ಅವರು 90ರ ಸಮಯದಲ್ಲಿ ಟಾಪ್ ಲೀಡಿಂಗ್ ನಟಿಯಾಗಿ ಮಿಂಚಿದವರು. ಇನ್ನೂ ಇವರು 1986 ರಲ್ಲಿ ಕಲಿಯುಗ ಪಾಂಡವುಲು ಎನ್ನುವ ತೆಲುಗು ಚಿತ್ರದ ಮೂಲಕ ಮೊದಲನೆಯದಾಗಿ ತಮ್ಮ ಸಿನಿಮಾ ಪಯಣವನ್ನು ಶುರು.
ಮಾಡಿದರು. ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ 1988 ರಲ್ಲಿ ರವಿಚಂದ್ರನ್ ಅವರ ಜೊತೆಗೆ ರಣಧೀರ ಚಿತ್ರದಲ್ಲಿ ನಾಯಕಿ ನಟಿಯಾಗಿ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.ಈ ಸಿನಿಮಾ ಆದ ಮೇಲೆ ಅಂಜದಗಂಡು, ಯುಗಪುರುಷ, ಪ್ರೇಮ, ಹೃದಯಗೀತೆ, ತಾಳಿಗಾಗಿ, ಗಗನ, ರುದ್ರ,.
ಕಲಿಯುಗ, ಭೀಮ, ಒಂಟಿ ಸಲಗ, ಪುಂಡರ ಗಂಡ, ಅಭಿಜಿತ್, ಶಾಂತಿ ಕ್ರಾಂತಿ, ಪಾಳೆಗಾರ, ಜೀವನದಿ, ಮಹಾ ಎಡಬಿಡಂಗಿ, ಚಾಮುಂಡಿ, ಆಂಟಿ ಪ್ರೀತ್ಸೆ, ಮ್ಯಾಜಿಕ್ ಅಜ್ಜಿ, ಜನನಿ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು 5 ಭಾಷೆಗಳಲ್ಲಿ ಸುಮಾರು 200 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಖುಷ್ಬೂ ಅವರು ಬಹುತೇಕ ದೊಡ್ಡ ದೊಡ್ಡ ನಟರ ಜೊತೆಗೆ ಸಿನಿಮಾ ತೆರೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಖುಷ್ಬು ಅವರು ಸುಮಾರು 10 ಕ್ಕಿಂತ ಹೆಚ್ಚು ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ಇದರ ಜೊತೆಗೆ ತಮಿಳು ಕನ್ನಡದಲ್ಲಿ ಕೆಲ ಸೀರಿಯಲ್ ಗಳಲ್ಲೂ ಕೂಡ ನಟಿಸಿದ್ದಾರೆ. ಹಾಗೆಯೇ ಕೆಲ ಟಿವಿ.
ಶೋಗಳನ್ನು ನಿರ್ಮಾಣ ಸಹ ಮಾಡುತ್ತಿದ್ದಾರೆ. ಪ್ರಸ್ತುತ ತಮಿಳಿನಲ್ಲಿ ಮೀರಾ ಎನ್ನುವ ಕಾರ್ಯಕ್ರಮವನ್ನು ನಿರ್ಮಾಣ ಮಾಡುತ್ತಿದ್ದಾರೆ.ಇನ್ನೂ ಖುಷ್ಬೂ ಅವರು ಸುಂದರ್ ಸಿ ಎನ್ನುವವರನ್ನು 2000 ರಂದು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಅವಂತಿಕಾ ಮತ್ತು ಆನಂದಿತಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಖುಷ್ಬು ಅವರ ಮನೆಯ ಒಳಗೆ ಹೇಗಿದೆ ಎನ್ನುವುದನ್ನು ಇಲ್ಲಿ ಕೆಲ ದೃಶ್ಯಗಳಿಂದ ನೋಡಬಹುದು…..