ಕನ್ನಡದ ಜನಪ್ರಿಯ ನಟಿ ಕಾರುಣ್ಯ ರಾಮ್ ಅವರ ಸೌಂದರ್ಯಕ್ಕೆ ಮನ ಸೋಲದೆ ಇರುವವರು ಯಾರೂ ಇಲ್ಲ. ಇವರು ಕೇವಲ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿದರೂ ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಇನ್ನು ಇವರು ಆಗಸ್ಟ್ 10 1993 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಈಗ ಇವರಿಗೆ 28 ವರ್ಷಗಳಾಗಿವೆ. ಇವರ ತಂದೆಯ ಹೆಸರು ಬಿ ಸಿ ರಾಮಚಂದ್ರ ಗೌಡ ಮತ್ತು ತಾಯಿಯ ಹೆಸರು ಪ್ರೇಮಾ ಗೌಡ.
ಇನ್ನು ನಟಿ ಕಾರುಣ್ಯ ರಾಮ್ ಅವರು 2010 ರಲ್ಲಿ ಬಿಡುಗಡೆಯಾದ ಸೀನಾ ಎನ್ನುವ ಕನ್ನಡ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರುಮಾಡಿದರು. ಇದಾದ ಮೇಲೆ ಮತ್ತೊಂದು ಮದುವೇನಾ ಚಿತ್ರದಲ್ಲಿ ನಟಿಸಿ ಈ ಚಿತ್ರದ ಮೂಲಕ ಇವರು ಬಹು ಜನಪ್ರಿಯರಾದರು.
.
ತದನಂತರ ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು, ಎರಡು ಕನಸು, ಕೇಫ್ ಗ್ಯಾರೇಜ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಮನೆ ಮಾರಾಟಕ್ಕಿದೆ ಎನ್ನುವ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತಮಿಳಿನಲ್ಲಿ ಕೂಡ 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಇವರ ಮುಂಬರುವ ಚಿತ್ರಗಳಾದ ರೈಮೋ ಮತ್ತು ಪೆಟ್ರೋಮ್ಯಾಕ್ಸ್ ಚಿತ್ರಗಳು ಸದ್ಯ ಶೂಟಿಂಗ್ ಕೆಲಸದಲ್ಲಿ ಇದೆ.
ಇನ್ನು ಕಾರುಣ್ಯ ರಾಮ್ ಅವರು 2016 ರಲ್ಲಿ ಕಲರ್ಸ್ ಕನ್ನಡ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ 4 ರಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದರು. ಇದಾದ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಟ್ಟಿರುವ ಮತ್ತು ನಿರೂಪಣೆ ಮಾಡಿದ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿ ಕೂಡ ಒಂದು ಬಾರಿ ಭಾಗವಹಿಸಿದ್ದರು.
ಇನ್ನೂ ಇವರಿಗೆ ಮನೆ ಮಾರಾಟಕ್ಕಿದೆ ಎನ್ನುವ ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ಸೈಮಾ ಅವಾರ್ಡ್ಸ್ ಕೂಡಾ ದೊರಕಿದೆ. ಇನ್ನೂ ವಿಶೇಷವೆಂದರೆ ಕಾರುಣ್ಯ ರಾಮ್ ಅವರು ಇತ್ತೀಚೆಗೆ ತಮ್ಮ ಹೊಸ ಮನೆಯ ಗೃಹಪ್ರವೇಶವನ್ನು ಮಾಡಿದ್ದಾರೆ. ಈ ವಿಡಿಯೋವನ್ನು ಕಾರುಣ್ಯ ರಾಮ್ ಅವರು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ನಟಿ ಕಾರುಣ್ಯ ರಾಮ್ ಅವರ ಸುಂದರವಾದ ಮನೆಯ ವಿಡಿಯೋವನ್ನು ನೋಡಬಹುದು…..