ಕನ್ನಡದ ಖ್ಯಾತ ನಟಿ ಅಮೂಲ್ಯ ಅವರಿಗೆ ಇಬ್ಬರು ಅವಳಿ ಜವಳಿ ಗಂಡು ಮಕ್ಕಳು ಹುಟ್ಟಿದ್ದಾರೆ. ಇನ್ನು ಇವರ ಮಕ್ಕಳಿಗೆ ಈಗ 3 ತಿಂಗಳು ತುಂಬಿದ್ದು ಇದರ ಸಲುವಾಗಿ ಇವರು ದೇವಸ್ಥಾನದಲ್ಲಿ ಒಂದು ವಿಶೇಷ ಪೂಜೆಯನ್ನು ಮಾಡಿಸಿದ್ದಾರೆ. ಅಮೂಲ್ಯ ಅವರ ಜೊತೆಗೆ ಅವರ ಪತಿ ಜಗದೀಶ್ ತಾಯಿ ಅತ್ತೆ ಇತರರು ಸೇರಿ ಎಲ್ಲರೂ ಪೂಜೆಯಲ್ಲಿ ಭಾಗಿಯಾಗಿದ್ದರು. ಇದರ ಫೋಟೋಗಳನ್ನು ಇಲ್ಲಿ ನೀವು ನೋಡಬಹುದು.
ಇನ್ನೂ ಅಮೂಲ್ಯ ಅವರ ಇಬ್ಬರು ಮಕ್ಕಳು ಇದೇ ವರ್ಷ ಮಾರ್ಚ್ 1 ಅಂದರೆ ಶಿವರಾತ್ರಿ ಹಬ್ಬದ ದಿನ ಜನಿಸಿದರು. ಇದರಿಂದ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಇಬ್ಬರೂ ಕೂಡ ಹೆಚ್ಚು ಸಂತಸವನ್ನು ಪಟ್ಟಿದ್ದಾರೆ. ಇನ್ನು ಅಮೂಲ್ಯ ಅವರು ಹೆರಿಗೆ ಆಗುವ ಮುನ್ನ ಮೆಟರ್ನಿಟಿ ಫೋಟೊಶೂಟ್ ಅನ್ನು ತುಂಬ ಸೊಗಸಾಗಿ ಮಾಡಿಸಿ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಇದರ ಜೊತೆಗೆ ಸಾಂಪ್ರದಾಯಿಕವಾಗಿ ಕೂಡ ಸೀಮಂತ ಶಾಸ್ತ್ರವನ್ನು ಮಾಡಿಕೊಂಡಿದ್ದರು.
ಇನ್ನು ಅಮೂಲ್ಯ ಅವರು ಸೆಪ್ಟೆಂಬರ್ 14 1993 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿಯ ಹೆಸರು ಜಯಲಕ್ಷ್ಮಿ. ಇನ್ನೂ ಇವರಿಗೆ ದೀಪಕ್ ಅರಸ್ ಎನ್ನುವ ಸಹೋದರ ಕೂಡ ಇದ್ದಾರೆ. ಅಮೂಲ್ಯ ಅವರು ಮೊದಲು ಬಾಲನಟಿಯಾಗಿ 2002 ರಲ್ಲಿ ಪರ್ವ ಚಿತ್ರದ ಮೂಲಕ ತೆರೆಯ ಮೇಲೆ ಎಂಟ್ರಿ ನೀಡಿದರು.
ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿ ತದನಂತರ ಲೀಡಿಂಗ್ ನಟಿಯಾಗಿ 2007 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಚೆಲುವಿನ ಚಿತ್ತಾರ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿದರು. ತದನಂತರ ಚೈತ್ರದ ಚಂದ್ರಮ, ಪ್ರೇಮಿಸಂ, ನಾನು ನನ್ನ ಕನಸು, ಮನಸಾಲಜಿ, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ, ರಾಮ್ ಲೀಲ, ಮದುವೆಯ ಮಮತೆಯ ಕರೆಯೋಲೆ, ಕೃಷ್ಣ ರುಕ್ಕು, ಮಾಸ್ತಿಗುಡಿ, ಮುಗುಳು ನಗೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಾಗೆಯೇ ಅಮೂಲ್ಯ ಅವರು ಮೇ 12 2017 ರಲ್ಲಿ ರಾಜಕೀಯ ವ್ಯಕ್ತಿ ಆಗಿರುವ ಜಗದೀಶ್ ಆರ್ ಚಂದ್ರ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಅಮೂಲ್ಯ ಅವರು ವಿವಾಹ ಮಾಡಿಕೊಂಡ ಮೇಲೆ ಯಾವ ಸಿನಿಮಾಗಳಲ್ಲಿ ಕೂಡ ನಟನೆ ಮಾಡುತ್ತಿಲ್ಲ…..