ನಟಿ ಅಮೂಲ್ಯ ಮತ್ತು ಜಗದೀಶ್ ಆರ್ ಚಂದ್ರ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹೌದು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಅಮೂಲ್ಯ ಅವರ ಮಡಿಲಿಗೆ ಮುದ್ದು ಕಂದಮ್ಮ ಆಗಮನ ಆಗಲಿದೆ. ಈ ಖುಷಿಯ ವಿಚಾರವನ್ನು ಈಗಾಗಲೇ ಅಮೂಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲನೆಯ ಮೆಟರ್ನಿಟಿ ಫೋಟೋಶೂಟ್ ನ ಫೋಟೋ ಹಾಕಿ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು.
ಇದಾದ ಮೇಲೆ ಅಮೂಲ್ಯ ಅವರಿಗೆ ಶಾಸ್ತ್ರೀಯ ಸಂಪ್ರದಾಯಿಕವಾಗಿ ಸೀಮಂತವನ್ನು ಸಹ ಮಾಡಿದರು. ಅಮೂಲ್ಯ ಅವರ ಸೀಮಂತ ಕಾರ್ಯಕ್ರಮಕ್ಕೆ ಸಾಕಷ್ಟು ಕನ್ನಡ ಇಂಡಸ್ಟ್ರಿಯ ಕಲಾವಿದರು, ಬಂಧುಮಿತ್ರರು ಹಾಗೂ ರಾಜಕಾರಣಿಯ ವ್ಯಕ್ತಿಗಳು ಬಂದು ಆಶೀರ್ವಾದ ಮಾಡಿ ಹೋಗಿದ್ದಾರೆ.
ಇನ್ನೂ ಅಮೂಲ್ಯ ಅವರು ಸೆಪ್ಟೆಂಬರ್ 14 1993 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಮೊದಲು ಬಾಲನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2002 ರಲ್ಲಿ ಪರ್ವ ಎನ್ನುವ ಚಿತ್ರದ ಮೂಲಕ ಅಮೂಲ್ಯ ಅವರು ಬಾಲ ನಟಿಯಾಗಿ ತೆರೆಯ ಮೇಲೆ ಎಂಟ್ರಿ ನೀಡಿದರು.
ಇದಾದ ಮೇಲೆ ಸಾಕಷ್ಟು ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದ ಮೇಲೆ 2007 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕಿ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದಾದ ಮೇಲೆ ಕೂಡ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ನಿಮಗೆ ಗೊತ್ತಿರುವ ಹಾಗೆ ಅಮೂಲ್ಯ ಅವರು ಮೇ 12 2017 ರಂದು ರಾಜಕೀಯ ವ್ಯಕ್ತಿ ಆಗಿರುವ ಜಗದೀಶ್ ಆರ್ ಚಂದ್ರ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಅಮೂಲ್ಯ ಅವರು ಮದುವೆ ಮಾಡಿಕೊಂಡ ಮೇಲೆ ಯಾವ ಸಿನಿಮಾಗಳಲ್ಲೂ ನಟಿಸುತ್ತಿಲ್ಲ.
ಇನ್ನು ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಕೇಕ್ ಕಟ್ ಮಾಡಿ ಸಾಕಷ್ಟು ಕನ್ನಡ ಇಂಡಸ್ಟ್ರಿಯ ಕಲಾವಿದರನ್ನು ಆಗಮನ ಮಾಡಿದ್ದರು. ಇದರಲ್ಲಿ ರಾಧಿಕಾ ಪಂಡಿತ್, ಶ್ರುತಿ, ಸುಧಾರಾಣಿ, ಗೋಲ್ಡನ್ ಸ್ಟಾರ್ ಗಣೇಶ್, ಪ್ರೇಮ್, ಮಾಳವಿಕಾ, ಅನಿರುದ್ಧ್ ಜತ್ಕರ್, ಭಾರತಿ ವಿಷ್ಣುವರ್ಧನ್, ಕೀರ್ತಿ ವಿಷ್ಣುವರ್ಧನ್ ಇನ್ನೂ ಸಾಕಷ್ಟು ಕನ್ನಡದ ಕಲಾವಿದರು ಬಂದಿದ್ದರು……