Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಟಿ ಅನು ಪ್ರಭಾಕರ್ ಮನೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ಇಲ್ಲಿದೆ ನೋಡಿ!!

0

ಕನ್ನಡದ ಖ್ಯಾತ ನಟಿ ಅನು ಪ್ರಭಾಕರ್ ಅವರು ನವೆಂಬರ್ 9 1980 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಎಂ.ವಿ ಪ್ರಭಾಕರ್ ಮತ್ತು ತಾಯಿಯ ಹೆಸರು ಗಾಯತ್ರಿ ಪ್ರಭಾಕರ್ ಎಂದು. ಇವರ ತಾಯಿ ಕೂಡ ಆಗಿನ ಕಾಲದಲ್ಲಿ ಜನಪ್ರಿಯ ನಟಿಯಾಗಿದ್ದರು. ಅನು ಪ್ರಭಾಕರ್ ಅವರು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನೂ ಅನು ಪ್ರಭಾಕರ್ ಅವರು ಬೆಂಗಳೂರಿನಲ್ಲಿರುವ ಮಲ್ಲೇಶ್ವರಂ ನ ನಿರ್ಮಲಾ ರಾಣಿ ಹೈಸ್ಕೂಲಿನಲ್ಲಿ ತಮ್ಮ ಶಾಲೆಯ ಶಿಕ್ಷಣವನ್ನು ಮಾಡಿ ಮುಗಿಸಿದ್ದಾರೆ. ಇವರು ಸೋಶಿಯಾಲಜಿ ನಲ್ಲಿ ಮಾಸ್ಟರ್ ಡಿಗ್ರಿ ಮಾಡುತ್ತಿರುವ ಸಮಯದಲ್ಲಿ ಇವರಿಗೆ ನಟಿಸುವುದಕ್ಕೆ ಅವಕಾಶಗಳು ಬಂದವು. ಹಾಗಾಗಿ ಓದನ್ನು ಮಧ್ಯದಲ್ಲಿ ಬಿಟ್ಟು ಸಿನಿಮಾ ರಂಗಕ್ಕೆ ತಮ್ಮ ಪಯಣವನ್ನು ಶುರು ಮಾಡಿದರು.

ಅನು ಪ್ರಭಾಕರ್ ಅವರು 1999 ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗೆ ಹೃದಯಾ ಹೃದಯಾ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ನಾಯಕಿ ನಟಿಯಾಗಿ ಅಭಿನಯ ಮಾಡಿದರು. ಇದಾದ ಮೇಲೆ ಸ್ನೇಹಲೋಕ, ಸೂರಪ್ಪ, ಯಾರಿಗೆ ಸಾಲುತ್ತೆ ಸಂಬಳ, ಕನಸುಗಾರ, ಜಮೀನ್ದಾರು, ತವರಿಗೆ ಬಾ ತಂಗಿ, ಪ್ರೀತಿ ಪ್ರೇಮ ಪ್ರಣಯ, ವರ್ಷ, ಪ್ರಾರಂಭ, ಮುಸ್ಸಂಜೆ ಮಾತು, ಭಾಗ್ಯದ ಬಳೆಗಾರ, ಸಕ್ಕರೆ, ಆಟಗಾರ, ರತ್ನನ್ ಪರ್ಪಂಚ, ಜೇಮ್ಸ್ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

 

ಅನು ಪ್ರಭಾಕರ್ ಅವರು ಕೆಲ ಟಿವಿ ಶೋಗಳನ್ನು ಕೂಡ ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದಾರೆ. ಇನ್ನೂ ಅನು ಪ್ರಭಾಕರ್ ಅವರು ಕನ್ನಡದ ಖ್ಯಾತ ನಟ ರಘು ಮುಖರ್ಜಿ ಅವರನ್ನು 2016 ರಲ್ಲಿ ವಿವಾಹ ಮಾಡಿಕೊಂಡರು. ಇವರಿಗೆ ನಂದಿತಾ ಎನ್ನುವ ಮುದ್ದಾದ ಮಗಳು ಕೂಡ ಇದ್ದಾರೆ.

ರಘು ಮುಖರ್ಜಿ ಅವರು ಕನ್ನಡದ ಖ್ಯಾತ ನಟ ಮತ್ತು ಮಾಡೆಲ್ ಕೂಡ ಆಗಿದ್ದರು. ಇವರು ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ತದನಂತರ ಸವಾರಿ, ನೀನಿಲ್ಲದೆ, ಪಾರಿಜಾತ, ಆಕ್ರಮಣ, ಸೂಪರ್ ರಂಗ, ಜೆಸ್ಸಿ, ಕಾಫಿತೋಟ, ಇನ್ಸ್ ಪೆಕ್ಟರ್ ವಿಕ್ರಂ ಇನ್ನೂ ಕೆಲ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿ ಅನು ಪ್ರಭಾಕರ್ ಅವರ ಮನೆ ಹೇಗಿದೆ ಎಂದು ಇಲ್ಲಿ ನೋಡಬಹುದು…..

Leave A Reply