ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಇಬ್ಬರೂ ಕೂಡ ಕನ್ನಡ ಚಿತ್ರ ರಂಗದಲ್ಲಿ ಖ್ಯಾತ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಅನು ಪ್ರಭಾಕರ್ ಅವರು ರಘು ಮುಖರ್ಜಿ ಅವರನ್ನು ಏಪ್ರಿಲ್ 25 2016 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ನಂದನ ಎನ್ನುವ ಮುದ್ದಾದ ಮಗಳು ಕೂಡ ಇದ್ದಾಳೆ.
ಅನು ಪ್ರಭಾಕರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತಿ ಮತ್ತು ಮಗಳ ಜೊತೆಗೆ ಇರುವ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಇನ್ನೂ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಅವರು ಇರುವ ಮನೆ ಹೇಗಿದೆ ಎಂದು ಇಲ್ಲಿರುವ ಕೆಲ ದೃಶ್ಯಗಳಿಂದ ನೀವು ನೋಡಬಹುದು.
ಇನ್ನೂ ಅನು ಪ್ರಭಾಕರ್ ಅವರು ನವೆಂಬರ್ 9 1980 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಎಂ.ಡಿ ಪ್ರಭಾಕರ್ ಮತ್ತು ತಾಯಿಯ ಹೆಸರು ಗಾಯತ್ರಿ ಪ್ರಭಾಕರ್. ಗಾಯತ್ರಿ ಪ್ರಭಾಕರ್ ಅವರು ಕೂಡ ಕನ್ನಡದ ಖ್ಯಾತ ಹಿರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅನು ಪ್ರಭಾಕರ್ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಕೆಲ ಚಿತ್ರಗಳನ್ನು ತಮಿಳಿನಲ್ಲಿ ಸಹ ಮಾಡಿದ್ದಾರೆ.
ಮೊದಲು ಅನು ಪ್ರಭಾಕರ್ ಅವರು 1990 ರಲ್ಲಿ ಚಪಲ ಚೆನ್ನಿಗರಾಯ ಎನ್ನುವ ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಕಾಲಿಟ್ಟರು. ಇದಾದ ಮೇಲೆ ಇವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಅನು ಪ್ರಭಾಕರ್ ಅವರು ಕನ್ನಡದಲ್ಲಿ ಸುಮಾರು 50 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ಅನು ಪ್ರಭಾಕರ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ನನ್ನಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋಗೆ ಜಡ್ಜ್ ಕೂಡ ಆಗಿದ್ದರು.
ಇನ್ನು ರಘು ಮುಖರ್ಜಿ ಅವರು 18 ಆಗಸ್ಟ್ 1981 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ನಟರಾಗುವ ಮುನ್ನ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದರು. ತದನಂತರ 2003 ರಲ್ಲಿ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು.
ತದನಂತರ ಸವಾರಿ ಚಿತ್ರದಲ್ಲಿ ನಟಿಸಿ ಇವರಿಗೆ ಬೆಸ್ಟ್ ಆಕ್ಟರ್ ಆಗಿ ಫಿಲಂಫೇರ್ ಅವಾರ್ಡ್ ಕೂಡ ದೊರಕಿತು. ಇದಾದ ಮೇಲೆ ಪ್ರೇಮ ಚಂದ್ರಮ, ನೀನಿಲ್ಲದೆ, ಪಾರಿಜಾತ, ದಂಡುಪಾಳ್ಯ, ಆಕ್ರಮಣ, ಆರ್ಯನ್, ಸೂಪರ್ ರಂಗ, ಅಂಗುಲಿಮಾಲಾ, ಪ್ರೀತಿಯಲ್ಲಿ ಸಹಜ, ಜೆಸ್ಸಿ, ಮೀನಾಕ್ಷಿ, ಕಾಫಿತೋಟ, ದಯವಿಟ್ಟು ಗಮನಿಸಿ, ಇನ್ಸ್ ಪೆಕ್ಟರ್ ವಿಕ್ರಂ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ……