ನಟನೆ ಎಂದು ಬಂದಾಗ ಪಾತ್ರದಲ್ಲಿ ಜೀವಿಸುವ ನಟ ಫಹಾದ್ ಫಾಸಿಲ್ ಅವರು ಆರಂಭದಲ್ಲಿ ಅನುಭವಿಸಿದ ಅವಮಾನ ಎಂತಹದ್ದು ನಿಮಗೆ ತಿಳಿದಿದೆಯೇ..!!
ಫಹಾದ್ ಫಾಸಿಲ್ ಮಲಯಾಳಂ ನ ಅದ್ಭುತ ನಟರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಅದ್ಭುತ ನಟನೆಯ ಮೂಲಕವೇ ಎಲ್ಲರಮನೆ ಮಾತಾಗಿರುವ ಈ ನಟನ ನಟನೆ ಅಂತಿಂತಹದ್ದಲ್ಲ. ಪಾತ್ರ ಯಾವುದೇ ಇರಲಿ ಪಾತ್ರದೊಳಗೆ ಜೀವುಸುವ ಈ ನಟ ಆಸ್ಕರ್ ತರಬಲ್ಲ ನಟರ ಸಾಲಿಗೆ ಇಂದು ಸೇರಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ ಎಂದರೆ ಅದು ಸುಲಭದ ಮಾತಲ್ಲ. ಇತ್ತೀಚೆಗೆ ತೆರೆಕಂಡ ಪುಷ್ಪ ಹಾಗೂ ವಿಕ್ರಂ ಸಿನಿಮಾಗಳಲ್ಲಿನ ಇವರ ನಟನೆ ಎಲ್ಲರ ಹುಬ್ಬೇರುವಂತೆ ಮಾಡಿವೆ.
ಫಹಾದ್ ಫಾಸಿಲ್ ಅವರು ತಾನೊಬ್ಬ ನಟನಾಗಬೇಕೆಂದು ಕನಸು ಕಂಡವರಲ್ಲ. ಆದರೆ ತಂದೆಯ ಒತ್ತಾಯದ ಮೇರೆಗೆ ಬಣ್ಣ ಹಚ್ಚಿ ಅವಮಾನಗಳನ್ನು ಅನುಭವಿಸಿ ಈತ ನಟನಾಗಲು ಯೋಗ್ಯನಲ್ಲ ಎಂದು ಆಡಿಕೊಂಡವರ ಮುಂದೆ ಇಂದು ಅದೇ ಜನರ ಮುಂದೆ ತಾನೊಬ್ಬ ಅದ್ಭುತ ನಟ ಎಂದು ಸಾಬೀತುಪಡಿಸಿ ಬಿದ್ದ ಜಾಗದಲ್ಲೇ ಎದ್ದು ನಿಂತಿದ್ದಾರೆ.
ಫಹಾದ್ ಫಾಸಿಲ್ ಮಲಯಾಳಂ ನ ನಿರ್ದೇಶಕ ಹಾಗು ನಿರ್ಮಾಪಕರೂ ಆದ ಫಾಸಿಲ್ ಅವರ ಮಗ. ತಂದೆ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೂ ಸಹ ಇವರಿಗೆ ಚಿತ್ರರಂಗದ ಬಗ್ಗೆ ಯಾವ ರೀತಿಯ ಆಸಕ್ತಿ ಇರಲಿಲ್ಲ. ಬದಲಾಗಿ ತಮ್ಮ ಪಾಡಿಗೆ ತಾವು ವಿದ್ಯಾಭ್ಯಾಸದ ಕಡೆ ಗಮನ ಇಟ್ಟಿದ್ದರು. ಆದರೆ ಇವರ ತಂದೆ ಫಾಸಿಲ್ ಅವರಿಗೆ ತಮ್ಮ ಮಗನನ್ನು ಸಿನಿಮಾ ಕ್ಷೇತ್ರಕ್ಕೆ ತಂದು ನಾಯಕನಟನನ್ನಾಗಿ ಮಾಡಬೇಕೆಂಬ ಹಂಬಲ.
ಅದರಂತೆಯೇ 2002 ರಲ್ಲಿ ತಮ್ಮ ಮಗನನ್ನು ನಾಯಕನನ್ನಾಗಿ ಮಾಡಿ ತಾವೇ ನಿರ್ದೇಶಕರಾದರು. ಆಗಿನ್ನು ಫಹಾದ್ ಅವರಿಗೆ 19 20 ರ ವಯಸ್ಸು. ಆದರೆ ಈ ಸಿನಿಮಾ ಸೋತು ಸುಣ್ಣವಾಗಿ ಇದರಲ್ಲಿ ಫಹಾದ್ ಅವರ ನಟನೆ ನೋಡಿದ ಮಂದಿ ಈತ ನಾಯಕನಾಗಲು ಯೋಗ್ಯನಲ್ಲ ಎಂದು ಇವರ ನಟನೆ ನೋಡಿ ಮಾತನಾಡಲು ಆರಂಭಿಸಿದರು. ಆದರೆ ಇದರಲ್ಲಿ ತಮ್ಮ ತಂದೆಯ.
ತಪ್ಪೇನು ಇಲ್ಲ ಬದಲಾಗಿ ನಾನು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಕ್ಯಾಮೆರಾ ಮುಂದೆ ಬಂದು ತಪ್ಪು ಮಾಡಿದೆ ಎಂದು ಅಲ್ಲಾ ತಪ್ಪನ್ನು ತನ್ನ ಮೇಲೆ ಹಾಕಿಕೊಂಡರು.ಇದಾದ ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಕ್ಕೆ ತೆರಳಿದ ಫಹಾದ್ ಅವರು ವಿದ್ಯಾಭ್ಯಾಸದ ಜೊತೆಗೆ ಸಿನಿಮಾ ತರಬೇತಿ ತೆಗೆದುಕೊಂಡರು ಎಂಬ ವದಂತಿಯೂ ಸಹ ಇದೆ. ಆದರೆ ಅಮೇರಿಕಾದಿಂದ ಹಿಂದಿರುಗಿದ ಫಹಾದ್ ಅವರು ಮತೆ ಸಿನಿಮಾಕ್ಕೆ ಕಾಲಿಟ್ಟರು.
ಆದರೆ ಈ ಹಿಂದಿನಂತೆ ಸಾಧಾರಣವಾದ ನಟನೆ ಫಹಾದ್ ಅವರದ್ದಾಗಿರಲಿಲ್ಲ. ಇವರ ನಟನೆ ನೋಡಿದ ಪ್ರತಿಯೊಬ್ಬರೂ ಸಹ ಎದ್ದು ನಿಂತಿ ಚಪ್ಪಾಳೆ ತಟ್ಟುವಂತೆ ನಟನೆ ಮಾಡಿದ್ದರು.ಇದಾದ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಒಂದಾದ ಬಳಿಕ ಒಂದರಂತೆ ತಮ್ಮನ್ನು ಚಿತ್ರರಂಗದಲ್ಲಿ ತೊಡಗಿಸಿಕೊಂಡ ಫಹಾದ್ ಅವರು ಹಿಟ್ ಚಿತ್ರಗಳನ್ನು ನೀಡುತ್ತಾ ಬಂದು ಯಶಸ್ಸಿನ ಕುದುರೆಯನ್ನು ಏರಿದ್ದರು. ತಮ್ಮ ಹಲವು ಚಿತ್ರಗಳ ನಟನೆಗೆ ಕೇರಳ ಸ್ಟೇಟ್ ಅವಾರ್ಡ್ ಸಹ ಪಡೆದ ಇವರು ತದನಂತರ ಮತ್ತೆ ಸೋಲನ್ನು.
ಅನುಭವಿಸಬೇಕಾಯಿತು. ಆದರೆ ನಂತರ 2018 ರ ಬಳಿಕ ಮತ್ತೆ ಯಶಸ್ಸಿನ ದಾರಿಗೆ ಮರಳಿದ ಇವರು ಇಂದು ಭಾಷೆಗಳ ಗಡಿಯನ್ನು ದಾಟಿ ಮಲಯಾಳಂ ಅಲ್ಲದೇ ತಮಿಳು ತೆಲುಗು ಕ್ಷೇತ್ರಗಳಲ್ಲಿಯೂ ಸಹ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಪುಷ್ಪ ಚಿತ್ರದಲ್ಲಿನ ಪೋಲೀಸ್ ಪಾತ್ರ ನೋಡಿದ ಪ್ರತಿಯೊಬ್ಬರೂ ಸಹ ಅವರ ನಟನೆಗೆ ಮಾರುಹೋಗಿದ್ದಾರೆ. ಇನ್ನು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಟಿಸಬೇಕಿದ್ದ ಪವನ್ ಕುಮಾರ್ ನಿರ್ದೇಶನದ ದ್ವಿತ್ವ ಚಿತ್ರದಲ್ಲಿ ಫಹಾದ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ…..