Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಂಗೆ ಹಾರಾನ್ ಹೊಡಿತಿಯ ಗುದ್ದುದ್ರೆ ನೋಡು, ದೊಡ್ಡಣ್ಣನ ಕಾರಿನ ಹಾರನ್ ಕೇಳಿ ಪ್ರೀತಿಯಿಂದ ರೇಗಿದ ಅಭಿಷೇಕ್, ನೋಡಿ ಈ ವೈರಲ್ ವಿಡಿಯೋ !!

0

ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮ ನಮ್ಮ ಕನ್ನಡ ಸಿನಿ ಇಂಡಸ್ಟ್ರಿಗೆ ಹಿರಿಯ ನಟರಲ್ಲಿ ಒಬ್ಬರು ಎಂದು ಹೇಳಬಹುದು. ಇವರ ಮೊದಲಿನ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಎಂದು. ತದನಂತರ ಸಿನಿಮಾ ರಂಗಕ್ಕೆ ಬಂದ ಮೇಲೆ ಅಂಬರೀಶ್ ಎನ್ನುವ ಹೆಸರಿಗೆ ಬದಲಾಯಿಸಿಕೊಂಡರು.

ಇನ್ನು ಅಂಬರೀಶ್ ಅವರು ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಇವರ ಪತ್ನಿ ಸುಮಲತಾ ಅವರು ಕೂಡ ನಾನಾ ಭಾಷೆಗಳಲ್ಲಿ ನಾಯಕಿ ನಟಿ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಪ್ರಸ್ತುತ ಸುಮಲತಾ ಅವರು ಅಂಬರೀಷ್ ಅವರು ನಿಧನ ಆದಮೇಲೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ತ್ರಿಮೂರ್ತಿಗಳು ಎಂದು ಕರೆಯುತ್ತಾರೆ. ಇನ್ನು ಅಂಬರೀಶ್ ಮತ್ತು ಸುಮಲತಾ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಷ್ ಅವರು ಯಾವುದೋ ಒಂದು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಲ್ಲಿ ಮನೆಗೆ ಹಿಂದಿರುಗುವ ಸಮಯದಲ್ಲಿ ದೊಡ್ಡಣ್ಣ ಅವರು ಕಾರಿನಲ್ಲಿ ಕುಳಿತುಕೊಂಡು ಅಭಿಷೇಕ್ ತಮ್ಮ ಕಾರ್ ಮುಂದೆ ಬಂದಾಗ ಹಾರನ್ ಮಾಡಿದರು. ಇದನ್ನು ಕೇಳಿ ಪ್ರೀತಿಯಿಂದ ಅಭಿಷೇಕ್ ಅವರು ನನಗೆ ಹಾರನ್ ಮಾಡ್ತೀರಾ ಎಂದು ರೇಗಿದರು. ಇದರ ವಿಡಿಯೋವನ್ನು ನೀವು ಇಲ್ಲಿ ಗಮನಿಸಬಹುದು.

ಇನ್ನೂ ಅಭಿಷೇಕ್ ಅಂಬರೀಶ್ ಅವರು ಅಕ್ಟೋಬರ್ 3 1993 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಅಮರ್ ಮತ್ತು ಬ್ಯಾಡ್ ಮ್ಯಾನರ್ಸ್ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಮರ್ ಚಿತ್ರವನ್ನು ನಾಗಶೇಖರ್ ಅವರು ನಿರ್ದೇಶನ ಮಾಡಿದ್ದಾರೆ ಮತ್ತು ಅಭಿಷೇಕ್ ಅಂಬರೀಷ್ ಅವರ ಜೊತೆಗೆ ತಾನ್ಯ ಹೋಪ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಹಾಗೆಯೇ ಬ್ಯಾಡ್ ಮ್ಯಾನರ್ಸ್ ಚಿತ್ರವನ್ನು ದುನಿಯಾ ಸೂರಿ ಅವರು ನಿರ್ದೇಶನ ಮಾಡಿದ್ದಾರೆ ಮತ್ತು ಇದರಲ್ಲಿ ಅಭಿಷೇಕ್ ಅವರ ಜೊತೆಗೆ ರಚಿತಾ ರಾಮ್ ಮತ್ತು ಪ್ರಿಯಾಂಕ ಅವರು ನಾಯಕಿ ನಟಿಯರಾಗಿ ಅಭಿನಯಿಸಿದ್ದಾರೆ……

Leave A Reply