ಕನ್ನಡದ ಖ್ಯಾತ ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಸರ್ಜಾ ಅವರು ತಮ್ಮ ಗೆಳತಿಯ ಮದುವೆಗೆ ಹೋಗಿದ್ದರು. ಪ್ರೇರಣಾ ಅವರ ಜೊತೆಗೆ ನಟ ಧ್ರುವ ಸರ್ಜಾ ಅವರು ಕೂಡ ಹೋಗಿ ಹೊಸ ದಂಪತಿಗಳಿಗೆ ಶುಭಾಶಯಗಳನ್ನು ತಿಳಿಸಿ ಬಂದಿದ್ದಾರೆ. ಪ್ರೇರಣಾ ಮತ್ತು ಧ್ರುವ ಸರ್ಜಾ ಅವರು ಮದುವೆಯಲ್ಲಿ ಇದ್ದ ಕೆಲ ದೃಶ್ಯಗಳು ನಿಮಗಾಗಿ ಇಲ್ಲಿವೆ ನೋಡಿ..
ಇನ್ನು ಧ್ರುವ ಸರ್ಜಾ ಅವರು ಅಕ್ಟೋಬರ್ 6 1988 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ನಟ ಚಿರಂಜೀವಿ ಸರ್ಜಾ ಅವರು ಸ್ವಂತ ಸಹೋದರ ಆಗಬೇಕು. ಆದರೆ ದುರದೃಷ್ಟವಶಾತ್ ಚಿರು ಸರ್ಜಾ ಅವರು ಜೂನ್ 7 2020 ರಂದು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದರು. ಹಾಗೆಯೇ ಅರ್ಜುನ್ ಸರ್ಜಾ ಅವರು ಧ್ರುವ ಸರ್ಜಾ ಅವರಿಗೆ ಸೋದರ ಮಾವ ಆಗಬೇಕು.
ಇನ್ನು ಧ್ರುವ ಸರ್ಜಾ ಅವರು 2012 ರಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರ ಜೊತೆಗೆ ಅದ್ದೂರಿ ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿ ತೆರೆಯ ಮೇಲೆ ಕಾಣಿಸಿಕೊಂಡರು. ಈ ಸಿನಿಮಾದ ಮೂಲಕ ಇವರಿಗೆ ಎಲ್ಲರಿಂದಲೂ ಹೆಚ್ಚು ಪ್ರಶಂಸೆ ದೊರಕಿತು.
ಇದಾದ ಮೇಲೆ ರಾಧಿಕಾ ಪಂಡಿತ್ ಅವರ ಜೊತೆಗೆ ಬಹದ್ದೂರ್, ರಚಿತಾ ರಾಮ್ ಅವರ ಜೊತೆಗೆ ಭರ್ಜರಿ, ಪ್ರೇಮಬರಹ, ರಶ್ಮಿಕಾ ಮಂದಣ್ಣ ಅವರ ಜೊತೆಗೆ ಪೊಗರು ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಇದರಲ್ಲಿ ಬಹದ್ದೂರ್ ಮತ್ತು ಭರ್ಜರಿ ಚಿತ್ರಗಳಿಗೆ ಧ್ರುವ ಸರ್ಜಾ ಅವರಿಗೆ ಸೈಮಾ ಅವಾರ್ಡ್ಸ್ ಕೂಡ ದೊರಕಿದೆ.
ಧ್ರುವ ಸರ್ಜಾ ಅವರು ಇಲ್ಲಿಯವರೆಗೂ ಕೇವಲ 5 ಚಿತ್ರಗಳಲ್ಲಿ ನಟಿಸಿದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇನ್ನೂ ಇವರ ಮಾರ್ಟಿನ್ ಚಿತ್ರವು ಸದ್ಯ ಶೂಟಿಂಗ್ ಕೆಲಸದಲ್ಲಿ ಇದ್ದು ಇನ್ನೂ ತೆರೆಯ ಮೇಲೆ ಬರಲು ಸಮಯವು ಬೇಕಾಗಿದೆ.
ಹಾಗೆಯೇ ಧ್ರುವ ಸರ್ಜಾ ಅವರು ತಮ್ಮ ಬಾಲ್ಯ ವಯಸ್ಸಿನ ಸ್ನೇಹಿತೆ ಆಗಿದ್ದ ಪ್ರೇರಣೆ ಅವರನ್ನು ಡಿಸೆಂಬರ್ 9 2018 ರಂದು ನಿಶ್ಚಿತಾರ್ಥ ಮಾಡಿಕೊಂಡರು. ಇದಾದ ಮೇಲೆ ನವೆಂಬರ್ 25 2019 ರಂದು ವಿವಾಹ ಮಾಡಿಕೊಂಡರು…..