ಧ್ರುವತಾರೆ ಚಿತ್ರದ ನಟಿ ಹಳ್ಳಿಯಲ್ಲಿ ಮಾಡುತ್ತಿರುವ ಕೆಲಸ ಏನು, ಗೊತ್ತೇ ?? ಅದಕ್ಕೆ ಕಣ್ರೀ ಹೇಳೋದು ಯಾವ ಕ್ಷೇತ್ರ ಕೈ ಬಿಟ್ರು ಕೃಷಿ ಕ್ಷೇತ್ರ ಕೈ ಬಿಡಲ್ಲ ಅಂತ !!
ಖ್ಯಾತ ನಟಿ ದೀಪಾ ಅವರ ಮೊದಲನೆಯ ಹೆಸರು ಉನ್ನಿ ಮೀರಿ ಎಂದು. ಇವರು ಮಲಯಾಳಂನಲ್ಲಿ ಸಾಕಷ್ಟು ಚಿತ್ರಗಳನ್ನು ನಟಿಸಿ ತುಂಬಾನೇ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕೇವಲ ಮಲಯಾಳಂನಲ್ಲಿ ಮಾತ್ರವಲ್ಲ ಕೆಲ ತೆಲುಗು ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.
ಇವರು ಮಾರ್ಚ್ 12 1962 ರಂದು ಜನಿಸಿದರು. ಇವರ ತಾಯಿಯ ಹೆಸರು ವಿಕ್ಟೋರಿಯಾ ಫರ್ನಾಂಡಿಸ್ ಮತ್ತು ತಂದೆಯ ಹೆಸರು ಅಗಸ್ಟೈನ್ ಫರ್ನಾಂಡಿಸ್ ಎಂದು. ಇವರು ಬಾಲ್ಯದಲ್ಲಿ ಇದ್ದಾಗಲೇ ಕ್ಲಾಸಿಕಲ್ ಡಾನ್ಸ್ ಅನ್ನು ಕಲಿತುಕೊಂಡಿದ್ದಾರೆ. ಇನ್ನೂ ದೀಪಾ ಅವರು 1969 ರಂದು ನವವಧು ಎನ್ನುವ ಮಲಯಾಳಂ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಬಾಲನಟಿಯಾಗಿ ಕಾಲಿಟ್ಟರು.
ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 1979 ರಲ್ಲಿ ವಿಜಯ್ ವಿಕ್ರಮ್ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ನಾನಿರುವುದೆ ನಿನಗಾಗಿ, ಇಬ್ಬನಿ ಕರಗಿತು, ಕಾಡಿನ ರಾಜ, ಧ್ರುವತಾರೆ, ತಾಯಿ ಕನಸು, ಸತಿ ಸಕ್ಕುಬಾಯಿ, ಗುರು ಜಗದ್ಗುರು ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತೆಲುಗು ಮತ್ತು ತಮಿಳಿನಲ್ಲಿ ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದು ಹಿಂದಿಯಲ್ಲೂ ಕೂಡ 2 ಚಿತ್ರಗಳಲ್ಲಿ ನಟಿಸಿದ್ದಾರೆ.
ದೀಪಾ ಅವರು ಕಾಲೇಜಿನ ಉಪಾಧ್ಯಕ್ಷರಾದ ರೆಜಾಯ್ ಎನ್ನುವವರನ್ನು 1982 ರಂದು ವಿವಾಹವಾಗಿದ್ದಾರೆ. ಇವರಿಗೆ ನಿರ್ಮಲ ರೆಜಾಯ್ ಎನ್ನುವ ಮಗಳು ಕೂಡ ಇದ್ದಾರೆ. ದೀಪಾ ಅವರು 1992 ರ ನಂತರ ಯಾವುದೇ ಸಿನಿಮಾಗಳಲ್ಲೂ ಕೂಡ ನಟಿಸಲಿಲ್ಲ. ಎಲ್ಲರಿಗೂ ಸಿನಿಮಾರಂಗ ಜೀವನದಿಂದ ಸಾಮಾನ್ಯರಂತೆ ಜೀವನ ಮಾಡುವುದಕ್ಕೆ ತುಂಬಾ ಕಷ್ಟವಾಗುತ್ತದೆ.
ಆದರೆ ಈ ನಟಿ ತನ್ನ ಸೆಲೆಬ್ರಿಟಿಯ ಜೀವನಕ್ಕೆ ಗುಡ್ ಬೈ ಹೇಳಿ ಹಳ್ಳಿಯಲ್ಲಿ ಸಾಮಾನ್ಯರಂತೆ ವಾಸಿಸುತ್ತಿದ್ದಾರೆ. ಹೌದು ತಮ್ಮ ಹಳ್ಳಿಗೆ ಹೋಗಿ ಅಲ್ಲಿರುವ ಹಳ್ಳಿಯ ಜನರು ಮತ್ತು ಬುಡಕಟ್ಟು ಜನಾಂಗದವರಿಗೆ ಮೆಡಿಕಲ್ ಕ್ಯಾಂಪ್ ಗಳನ್ನು ವ್ಯವಸ್ಥೆ ಮಾಡುವ ಸಹಾಯವನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಶಾಲೆಯಿಂದ ಹಿಂದುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.
ಹಾಗೆಯೇ ಸಾಕಷ್ಟು ಬಡವರಿಗೆ ಸಹಾಯ ಮಾಡಿಕೊಂಡು ಹಳ್ಳಿಯಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಒಂದು ಸಂದರ್ಶನದಲ್ಲಿ ಮಾಧ್ಯಮದವರು ದೀಪಾ ಅವರನ್ನು ನೀವು ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೀರಾ ಎಂದು ಕೇಳಿದಾಗ ದೀಪಾ ಅವರು ನಾನು ಸಿನಿಮಾಗಳನ್ನು ನೋಡಿ ತುಂಬಾ ವರ್ಷಗಳೇ ಆಯಿತು. ನಾನು ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದರು…..