ದೊಡ್ಮನೆಯಲ್ಲಿ ಇರುವ ವ್ಯಕ್ತಿಗಳ ವ್ಯಕ್ತಿತ್ವ ಹೇಗೆ ಎಂದು ಇಡೀ ಕರ್ನಾಟಕ ರಾಜ್ಯ ಅಲ್ಲ ಇಡೀ ಭಾರತ ದೇಶಕ್ಕೆ ಗೊತ್ತು. ಅದರಲ್ಲೂ ನಮ್ಮ ಡಾ.ರಾಜ್ ಕುಮಾರ್ ಅವರ ವ್ಯಕ್ತಿತ್ವ ಗುಣ ಎಲ್ಲವೂ ಕೂಡ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗುತ್ತಿತ್ತು. ಇದರ ಜೊತೆಗೆ ಅಭಿಮಾನಿಗಳ ಜೊತೆ ಮಾತನಾಡುವ ವಿಧಾನ ಅವರಿಗೆ ಕೊಡುತ್ತಿದ್ದ ಗೌರವವನ್ನು ನೋಡಿದರೆ ಎಲ್ಲರಿಗೂ ಕೂಡ ತುಂಬಾನೇ ಖುಷಿಯಾಗುತ್ತಿತ್ತು.
ಅಪ್ಪನಂತೆ ಮಕ್ಕಳು ಎಂದು ಹೇಳುತ್ತಾರೆ ಇದರಂತೆಯೇ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಕೂಡ ತಮ್ಮ ತಂದೆಯ ಹಾದಿಯಲ್ಲೇ ನಡೆಯುತ್ತಾ ದೊಡ್ಮನೆ ಮಕ್ಕಳು ಇಂದು ಎನಿಸಿಕೊಂಡಿದ್ದಾರೆ. ಇನ್ನು ಪುನೀತ್ ಅವರು ಅಕ್ಟೋಬರ್ 29 2021 ರಂದು ಹೃದಯಾಘಾತದಿಂದ ಮರಣ ಹೊಂದಿದರು. ಇವರ ಅಕಾಲಿಕ ಮರಣವು ಎಲ್ಲರಿಗೂ ಒಂದು ದೊಡ್ಡ ನಷ್ಟವನ್ನು ಉಂಟು ಮಾಡಿದೆ.
ಪುನೀತ್ ಅವರ ಸಾವಿನಿಂದ ಅಭಿಮಾನಿಗಳು ಕುಟುಂಬದವರು ಸ್ನೇಹಿತರು ಎಲ್ಲರೂ ಕೂಡ ಈಗಲೂ ಅವರ ನೆನಪಿನಲ್ಲೇ ಕೈತೊಳೆಯುತ್ತಿದ್ದಾರೆ. ಅದರಲ್ಲೂ ಅಶ್ವಿನಿ ಮತ್ತು ತಮ್ಮ ಇಬ್ಬರು ಹೆಣ್ಣು ಮಕ್ಕಳು ಕೂಡ ಪುನೀತ್ ಅವರನ್ನು ಕಳೆದುಕೊಂಡು ತುಂಬಾ ನೋವನ್ನು ಪಡುತ್ತಿದ್ದಾರೆ.
ಇನ್ನು ಅಶ್ವಿನಿ ಅವರು ಪುನೀತ್ ಅವರನ್ನು ಕಳೆದುಕೊಂಡ ಮೇಲೆ ನೋವಿನ ಜೊತೆಗೆ ಸಾಕಷ್ಟು ಧೈರ್ಯವನ್ನು ಕೂಡ ತೆಗೆದುಕೊಂಡು ತಮ್ಮ ಮಕ್ಕಳ ಜೀವನ ಮತ್ತು ಪುನೀತ್ ಅವರು ನಡೆಸುತ್ತಿದ್ದ ಶಾಲೆಯ ಮಕ್ಕಳ ಭವಿಷ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗೆಯೇ ಪುನೀತ್ ಅವರ ಪಿ.ಆರ್.ಕೆ ಪ್ರೊಡಕ್ಷನ್ಸ್ ಎನ್ನುವ ನಿರ್ಮಾಣ ಸಂಸ್ಥೆಯನ್ನು ಅಶ್ವಿನಿಯವರು ತಮ್ಮ ಹೆಗಲ ಮೇಲೆ ಹಾಕಿಕೊಂಡು ಅದರ ಕೆಲಸಗಳನ್ನು ಮಾಡುತ್ತಿದ್ದಾರೆ.
ಇನ್ನು ಪುನೀತ್ ಅವರ ಕೊನೆಯ ಚಿತ್ರ ಆಗಿರುವ ಜೇಮ್ಸ್ ಚಿತ್ರ ಬಿಡುಗಡೆಯಾಗುವ ಮುನ್ನ ಬೆಂಗಳೂರಿನಲ್ಲಿ ಇಂಟರ್ ನ್ಯಾಷನಲ್ ಫಿಲಂ ಪೆಸ್ಟಿವಲ್ ಕಾರ್ಯಕ್ರಮವನ್ನು ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಸಾಕಷ್ಟು ಕಲಾವಿದರು ಸೇರಿಕೊಂಡಿದ್ದರು.
ಅದರಲ್ಲಿ ಅಶ್ವಿನಿ ಅವರು ವೇದಿಕೆಯ ಮೇಲೆ ಕುಳಿತಿದ್ದಾಗ ನೀರನ್ನು ಕೇಳುವಾಗ ಎಷ್ಟು ಮುಗ್ಧತೆಯಿಂದ ಕೇಳುತ್ತಾರೆ ಎನ್ನುವುದನ್ನು ಈ ಕೆಳಗಿನ ವೀಡಿಯೋದಲ್ಲಿ ನೀವು ನೋಡಬಹುದು. ಇವರು ಕೇಳುವ ವಿಧಾನದಲ್ಲೇ ಗೊತ್ತಾಗುತ್ತದೆ ದೊಡ್ಮನೆ ಮಕ್ಕಳು ಹೇಗೆ ಎಂದು. ಇವರಿಗೆ ಇಷ್ಟೆಲ್ಲಾ ಹೆಸರು ಹಣ ಇದ್ದರು ಅವೆಲ್ಲವನ್ನೂ ಪಕ್ಕಕ್ಕೆ ಇಟ್ಟು ತುಂಬ ಮುಗ್ಧತೆಯಿಂದ ಕುಡಿಯುವುದಕ್ಕೆ ನೀರನ್ನು ಕೇಳಿದ್ದಾರೆ…..