Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ದೇವಸ್ಥಾನದಲ್ಲಿ ಕಸಗುಡಿಸುತ್ತಿರುವ ಈ ಕನ್ನಡದ ಖ್ಯಾತ ನಟಿ ಯಾರು ಗೊತ್ತಾ..!!

0

ಕೆಲ ನಟಿಯರು ದೊಡ್ಡ ಹೆಸರನ್ನು ಪಡೆದುಕೊಂಡರೆ ಅವರು ತಮ್ಮದೇ ಆದ ರೇಂಜ್ ನಲ್ಲಿ ಇರುತ್ತಾರೆ. ಆದರೆ ಕೆಲ ನಟಿಯರು ಮಾತ್ರ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಾರೆ. ಹೌದು ಅದರಲ್ಲಿ ಕನ್ನಡದ ಖ್ಯಾತ ನಟಿ ಆಗಿರುವ ಕೃತಿ ಖರಬಂದ ಅವರು ಕೂಡ ಒಬ್ಬರು. ಹೌದು ಈಕೆ ಇಷ್ಟು ದೊಡ್ಡ ನಟಿಯಾಗಿದ್ದರೂ ಕೂಡ ಸಾಮಾನ್ಯರಂತೆ ತಮ್ಮ ಜೀವನವನ್ನು ಮಾಡುತ್ತಾರೆ.

ಹೌದು ಕೃತಿ ಖರಬಂದ ಅವರು ಕನ್ನಡದಲ್ಲಿ ತುಂಬಾನೇ ಜನಪ್ರಿಯರಾದರು. ಏಕೆಂದರೆ ಇವರಿಗೆ ಕನ್ನಡದಲ್ಲಿ ಭಾರೀ ಯಶಸ್ಸು ಲಭಿಸಿತು. ಇದರ ಜೊತೆಗೆ ಇವರಿಗೆ ಕನ್ನಡ ಭಾಷೆಯ ಮೇಲೆ ಕೂಡ ತುಂಬಾ ಅಭಿಮಾನವಿದೆ. ಪ್ರಸ್ತುತ ಕೃತಿ ಖರಬಂದ ಅವರು ಬಾಲಿವುಡ್ ಸಿನಿಮಾಗಳನ್ನು ಮಾಡುವುದರಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಗೂಗ್ಲಿ ಚಿತ್ರದಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ.

ಕೃತಿ ಖರಬಂದ ಅವರು 2009 ರಲ್ಲಿ ತೆಲುಗಿನ ಬೋನಿ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು. ಇದಾದ ಮೇಲೆ ನಮ್ಮ ಕನ್ನಡದಲ್ಲಿ 2010 ರಂದು ಚಿರು ಸರ್ಜಾ ಅವರ ಜೊತೆಗೆ ಚಿರು ಚಿತ್ರದಲ್ಲಿ ಮೊದಲನೆಯದಾಗಿ ಸ್ಯಾಂಡಲ್ ವುಡ್ ನಲ್ಲಿ ನಟಿಸಿದರು. ಇದಾದ ಮೇಲೆ ಪ್ರೇಮ್ ಅಡ್ಡಾ, ಗಲಾಟೆ, ಗೂಗ್ಲಿ, ತಿರುಪತಿ ಎಕ್ಸ್ ಪ್ರೆಸ್, ಸೂಪರ್ ರಂಗ, ಬೆಳ್ಳಿ, ಮಿಂಚಾಗಿ ನೀ ಬರಲು, ಮಾಸ್ತಿಗುಡಿ, ದಳಪತಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಕೃತಿ ಖರಬಂದ ಅವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 30 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಕೃತಿ ಖರಬಂದ ಅವರು ಯಾವುದೋ ಒಂದು ಸಿನಿಮಾ ಶೂಟಿಂಗ್ ಗೆ ಹೋಗಿದ್ದರು. ಶೂಟಿಂಗ್ ಪಕ್ಕದಲ್ಲಿಯೇ ಒಂದು ದೇವಸ್ಥಾನವಿತ್ತು. ಹಾಗಾಗಿ ತಮ್ಮ ಸಮಯವನ್ನು ಬಿಡುಮಾಡಿಕೊಂಡು ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದಾರೆ.

ಇದರ ಜೊತೆಗೆ ದೇವಸ್ಥಾನದಲ್ಲಿ ಕಸವನ್ನು ಕೂಡ ಗುಡಿಸಿದ್ದಾರೆ. ಹಾಗೆಯೇ ಒಂದು ದಿನ ಪೂರ್ತಿ ಅಲ್ಲಿಗೆ ಬಂದ ಭಕ್ತಾದಿಗಳಿಗೆ ಪ್ರಸಾದವನ್ನು ಕೂಡ ಬಡಿಸಿದ್ದಾರೆ. ಇದನ್ನು ಅಲ್ಲಿಗೆ ಬಂದ ಭಕ್ತಾದಿಗಳು ಫೋಟೋವನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ತುಂಬಾನೇ ವೈರಲ್ ಆಗಿದೆ.

ಬೇರೆ ಸ್ಟಾರ್ ನಟಿಯರು ಆಗಿದ್ದರೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದು ಪೋಸ್ ನೀಡುತ್ತಿದ್ದರು. ಆದರೆ ಈ ನಟಿ ಮಾತ್ರ ದೇವಸ್ಥಾನವನ್ನು ಶುಚಿ ಮಾಡಿ ಅಲ್ಲಿಗೆ ಬಂದ ಭಕ್ತಾದಿಗಳಿಗೆ ಊಟವನ್ನು ನೀಡಿ ಇಷ್ಟು ದೊಡ್ಡ ಸ್ಟಾರ್ ನಟಿ ಆಗಿದ್ದರೂ ಕೂಡ ಸಾಮಾನ್ಯರೆಂದು ರುಜು ಮಾಡಿಕೊಂಡರು…..

Leave A Reply