Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ದರ್ಶನ್ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆಯ ಅಪರೂಪದ ವಿಡಿಯೋ..!!

0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳು ಎಂದರೆ ತುಂಬಾ ಇಷ್ಟ ಎಂದು ಇಡೀ ಕರ್ನಾಟಕ ಜಗತ್ತಿಗೆ ಗೊತ್ತು. ಇದರಂತೆಯೇ ದರ್ಶನ್ ಅವರು ಮೈಸೂರಿನಲ್ಲಿ ತಮ್ಮದೇ ಆದ ಸ್ವಂತ ಪ್ರಾಣಿ ಪಕ್ಷಿಗಳ ಜೂ ಅನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಇವರಿಗೆ ಅಯ್ಯಪ್ಪಸ್ವಾಮಿ ಅಂದರೆ ತುಂಬ ಭಕ್ತಿ. ಇವರು ಅಯ್ಯಪ್ಪ ಮಾಲೆಯನ್ನು ಹಾಕಿಕೊಂಡು ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಮಾಡಿಕೊಂಡು ಬರುತ್ತಾರೆ.

ಇನ್ನು ದರ್ಶನ್ ತಮ್ಮ ಮನೆಯಲ್ಲಿ ತಮ್ಮ ಸ್ನೇಹಿತರು ಕೆಲ ಸಿನಿಮಾದ ಕಲಾವಿದರನ್ನು ಕರೆಸಿ ಕುಟುಂಬದ ಸದಸ್ಯರ ಜೊತೆಗೆ ಅಯ್ಯಪ್ಪ ಸ್ವಾಮಿಯ ಪೂಜೆಯನ್ನು ನೇರವೇರಿಸಿದ್ದಾರೆ. ಅಯ್ಯಪ್ಪ ಸ್ವಾಮಿಯ ಪೂಜೆಯನ್ನು ಮಾಡುತ್ತಿರುವ ಸಮಯದಲ್ಲಿ ದರ್ಶನ್ ಅವರು ಎಲ್ಲರ ಜೊತೆಗೆ ಅಯ್ಯಪ್ಪನ ಹಾಡನ್ನು ಹಾಡಿದ್ದಾರೆ. ಈ ಪೂಜೆಯ ಅಪರೂಪದ ವಿಡಿಯೋ ಇಲ್ಲಿದೆ ನಿಮಗಾಗಿ.

ಇನ್ನು ದರ್ಶನ್ ಅವರು ಫೆಬ್ರವರಿ 16 1977 ರಂದು ಪೊನ್ನಂಪೇಟೆ ನಲ್ಲಿ ಜನಿಸಿದರು. ಇವರ ತಂದೆಯ ಹೆಸರು ತೂಗದೀಪ ಶ್ರೀನಿವಾಸ ಮತ್ತು ತಾಯಿಯ ಹೆಸರು ಮೀನಾ ತೂಗುದೀಪ. ಇವರು ಮೊದಲು ಕಿರುತೆರೆಯ ಒಂದು ಧಾರಾವಾಹಿಯ ಮೂಲಕ ಕಾಣಿಸಿದರು. ತದನಂತರ ಮೊದಲು ಕೆಲ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದ ಮೇಲೆ 2002 ರಲ್ಲಿ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿದರು.

ಇದಾದ ಮೇಲೆ ದರ್ಶನ್ ಅವರ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇನ್ನು ಬಾಸ್ ಚಿತ್ರದಲ್ಲಿ ಇವರು ಡಬಲ್ ರೋಲ್ ನಟನೆಯನ್ನು ಮಾಡಿದ್ದು ಈ ಸಿನಿಮಾದ ಮುಖಾಂತರ ಇವರಿಗೆ ಡಿ ಬಾಸ್ ಎನ್ನುವ ಹೆಸರು ಬಂದಿತು. ಅಂದಿನಿಂದ ಇವರನ್ನು ಹೆಚ್ಚಾಗಿ ದರ್ಶನ್ ಎನ್ನುವ ಹೆಸರನ್ನು ಬಿಟ್ಟು ಡಿ ಬಾಸ್ ಎಂದೇ ಅಭಿಮಾನಿಗಳು ಕರೆಯುತ್ತಾರೆ.

ಇನ್ನೂ ಇವರು ಕೇವಲ ನಟ ಮಾತ್ರವಲ್ಲ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಜೊತೆಗೆ ಡಿಸ್ತ್ರಿಬ್ಯೂಟ್ ಕೂಡ ಮಾಡಿದ್ದಾರೆ. ಇದರ ಜತೆಗೆ ಕೆಲ ಸಿನಿಮಾಗಳಿಗೆ ಹಾಡುಗಳನ್ನು ಕೂಡ ಹಾಡಿದ್ದಾರೆ. ಇನ್ನು ದರ್ಶನ್ ಅವರು 2000 ರಂದು ಧರ್ಮಸ್ಥಳದಲ್ಲಿ ವಿಜಯಲಕ್ಷ್ಮಿ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ವಿನಿಶ್ ತೂಗುದೀಪ್ ಎನ್ನುವ ಮುದ್ದಾದ ಮಗ ಕೂಡ ಇದ್ದಾನೆ…..

Leave A Reply