Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ತಾಯಿಯಾಗುತ್ತಿರುವ ಅಮೂಲ್ಯ ಅವರಿಗೆ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರು ಏನನ್ನು ಗಿಫ್ಟ್ ನೀಡಿದ್ದಾರೆ ಗೊತ್ತಾ.. ಸಖತ್ ದುಬಾರಿ ಗಿಫ್ಟ್..!!

0

ಕನ್ನಡದ ಖ್ಯಾತ ನಟಿ ಅಮೂಲ್ಯ ಅವರು ಸೆಪ್ಟೆಂಬರ್ 14 1993 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಬಾಲನಟಿಯಾಗಿ ಸಿನಿ ರಂಗಕ್ಕೆ ಕಾಲಿಟ್ಟು ಬಾಲನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅಮೂಲ್ಯ ಅವರು ಕೇವಲ 6 ವರ್ಷಗಳು ಇದ್ದಾಗಲೇ ಸುಪ್ತ ಮನಸ್ಸಿನ ಸಪ್ತಸ್ವರಗಳು ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಇವರು ಶಾಲೆಯಲ್ಲಿ ಓದುತ್ತಿರಬೇಕಾದರೆ ಭರತನಾಟ್ಯವನ್ನು ಕಲಿತುಕೊಂಡಿದ್ದಾರೆ ಜೊತೆಗೆ ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಕೂಡ ಪಡೆದುಕೊಂಡಿದ್ದಾರೆ. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಯುಸಿ ಪದವಿಯನ್ನು ಮಾಡಿ ಮುಗಿಸಿದ್ದಾರೆ ಮತ್ತು ಅದೇ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಕೂಡ ಮಾಡಿದ್ದಾರೆ.

ಅಮೂಲ್ಯ ಅವರು 2001 ರಲ್ಲಿ ವಿಷ್ಣುವರ್ಧನ್ ಅವರ ಅಭಿನಯದ ಪರ್ವ ಚಿತ್ರದ ಮೂಲಕ ಮೊದಲನೆಯದಾಗಿ ಬಾಲನಟಿಯಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿದರು. ಇದಾದ ಮೇಲೆ ಚಂದು, ಲಾಲಿಹಾಡು, ಮಹಾರಾಜ, ಮಂಡ್ಯ, ಸುಂಟರಗಾಳಿ, ಸಜಿನಿ, ನಮ್ಮ ಬಸವ, ತನನಂ ತನನಂ, ಕಲ್ಲರಳಿ ಹೂವಾಗಿ, ತಿಮ್ಮಾ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಕೇವಲ 13 ವರ್ಷದಲ್ಲೇ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕಿ ನಟಿಯಾಗಿ ಕಾಣಿಸಿದರು. ಇದಾದ ಮೇಲೆ ಚೈತ್ರದ ಚಂದ್ರಮ, ಪ್ರೇಮಿಸಂ, ನಾನು ನನ್ನ ಕನಸು, ಮನಸಾಲಜಿ, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ, ರಾಮ್ ಲೀಲಾ, ಮದುವೆಯ ಮಮತೆಯ ಕರೆಯೋಲೆ, ಕೃಷ್ಣ ರುಕ್ಕು, ಮಾಸ್ತಿಗುಡಿ, ಮುಗುಳುನಗೆ ಚಿತ್ರಗಳಲ್ಲಿ ನಟಿಸಿದ್ದಾರೆ.

ಅಮೂಲ್ಯ ಅವರು 2017 ರಲ್ಲಿ ರಾಜಕೀಯ ವ್ಯಕ್ತಿಯಾಗಿರುವ ಜಗದೀಶ್ ಚಂದ್ರ ಅವರನ್ನು ವಿವಾಹವಾಗಿದ್ದಾರೆ. ಇತ್ತೀಚೆಗೆಯಷ್ಟೇ ಅಮೂಲ್ಯ ಅವರು ತಾಯಿಯಾಗುತ್ತಿದ್ದೇನೆ ಎಂಬ ಖುಷಿಯ ವಿಚಾರವನ್ನು ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಮುಂದಿನ ವರ್ಷದ ಮಾರ್ಚ್ ತಿಂಗಳಿನಲ್ಲಿ ತಮ್ಮ ಮಗುವಿನ ನಿರೀಕ್ಷೆಯಲ್ಲಿ ದಂಪತಿಗಳು ಇದ್ದಾರೆ. ಇನ್ನು ಅಮೂಲ್ಯ ಅವರು ತಾಯಿ ಆಗುತ್ತಿರುವ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರು ಇಬ್ಬರೂ ಹೋಗಿ ಅಮೂಲ್ಯ ಅವರಿಗೆ ದುಬಾರಿ ಉಡುಗೊರೆಯನ್ನು ನೀಡಿ ಬಂದಿದ್ದಾರೆ.

ಹೌದು ದರ್ಶನ್ ಅವರು 5 ಲಕ್ಷ ರೂ ಬೆಲೆ ಬಾಳುವ ಬೆಳ್ಳಿಯ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿ ಅಮೂಲ್ಯ ಅವರು ತುಂಬಾನೇ ಭಾವುಕರಾದರು. ದರ್ಶನ್ ಅವರು ಅಮೂಲ್ಯ ಅವರಿಗೆ ಒಳ್ಳೆಯ ಉಡುಗೊರೆಯನ್ನು ನೀಡಿದ್ದಾರೆ…..

Leave A Reply