ದಕ್ಷಿಣ ಭಾರತದ ಕೆಲ ನಟಿಯರು ತಾವು ನಟಿಸಿದ ಸಿನಿಮಾ ನಿರ್ದೇಶಕರನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. ಅಂತಹ ನಟಿಯರು ಯಾರು ಎಂದು ಇಲ್ಲಿ ನೋಡೋಣ ಬನ್ನಿ..
ನಟಿ ಸುಹಾಸಿನಿ ಅವರು ಆಗಸ್ಟ್ 15 1961 ರಂದು ಚೆನ್ನೈನಲ್ಲಿ ಜನಿಸಿದ್ದಾರೆ. ಇವರು ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸುಮಾರು ಚಿತ್ರಗಳಲ್ಲಿ ನಟಿಸಿ ಆಗಿನ ಕಾಲದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡರು. ಇನ್ನೂ ಸುಹಾಸಿನಿ ಅವರು 1988 ರಲ್ಲಿ ಖ್ಯಾತ ನಿರ್ದೇಶಕರಾದ ಮಣಿರತ್ನಂ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರಿಗೆ ನಂದನ್ ಮಣಿರತ್ನಂ ಎನ್ನುವ ಮಗ ಕೂಡ ಇದ್ದಾರೆ.
ನಟಿ ಖುಷ್ಬೂ ಅವರು ಸೆಪ್ಟೆಂಬರ್ 29 1970 ರಂದು ಮುಂಬೈನಲ್ಲಿ ಜನಿಸಿದ್ದಾರೆ. ಇವರು ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಭಾಷೆಗಳ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕೇವಲ ನಟಿ ಮಾತ್ರವಲ್ಲ ರಾಜಕೀಯ ವ್ಯಕ್ತಿ ಮತ್ತು ಸಿನಿಮಾ ನಿರ್ಮಾಪಕ ಕೂಡ ಹೌದು. ಖುಷ್ಬೂ ಅವರು 2000 ರಲ್ಲಿ ಖ್ಯಾತ ನಿರ್ದೇಶಕರಾಗಿರುವ ಸುಂದರ್ ಸಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಅವಂತಿಕಾ ಮತ್ತು ಆನಂದಿತಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ನಟಿ ರೋಜಾ ಅವರು ನವೆಂಬರ್ 17 1972 ರಂದು ತಿರುಪತಿಯಲ್ಲಿ ಜನಿಸಿದ್ದಾರೆ. ಇವರು ತೆಲುಗು ಸಿನಿಮಾಗಳ ಜೊತೆಗೆ ತಮಿಳು ಕನ್ನಡ ಮತ್ತು ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಇನ್ನೂ ರೋಜಾ ಅವರು ರಾಜಕೀಯ ವ್ಯಕ್ತಿ ಕೂಡಾ ಹೌದು. ಇವರು 2002 ರಲ್ಲಿ ಖ್ಯಾತ ನಿರ್ದೇಶಕರಾಗಿರುವ ಆರ್ ಕೆ ಸೆಲ್ವಮಣಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಅಂಶು ಮಲ್ಲಿಕಾ ಸೆಲ್ವಮಣಿ ಮತ್ತು ಕೃಷ್ಣ ಲೋಹಿತ್ ಸೆಲ್ವಮಣಿ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ನಟಿ ದೇವಯಾನಿ ಅವರು ಜೂನ್ 22 1974 ರಂದು ಮುಂಬೈನಲ್ಲಿ ಜನಿಸಿದ್ದಾರೆ. ಇವರು ತಮಿಳು ಮಲಯಾಳಂ ಮತ್ತು ತೆಲುಗು ಭಾಷೆಗಳ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ದೇವಯಾನಿ ಅವರು 2001 ರಲ್ಲಿ ನಿರ್ದೇಶಕರಾಗಿರುವ ರಾಜಕುಮಾರನ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಪ್ರಿಯಾಂಕ ಕುಮಾರನ್ ಮತ್ತು ಇನಿಯಾ ಕುಮಾರನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ನಟಿ ರಕ್ಷಿತಾ ಅವರು ಮಾರ್ಚ್ 31 1984 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಕನ್ನಡ ತೆಲುಗು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ರಕ್ಷಿತಾ ಅವರು ನಟ ಮತ್ತು ನಿರ್ದೇಶಕರಾಗಿರುವ ಪ್ರೇಮ್ ಅವರನ್ನು 2007 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಸೂರ್ಯ ಎನ್ನುವ ಮಗ ಕೂಡ ಇದ್ದಾನೆ.
ನಟಿ ರಮ್ಯಾಕೃಷ್ಣ ಅವರು ಸೆಪ್ಟೆಂಬರ್ 15 1970 ರಂದು ಚೆನ್ನೈನಲ್ಲಿ ಜನಿಸಿದ್ದಾರೆ. ಇವರು ತೆಲುಗು ತಮಿಳು ಕನ್ನಡ ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ಜನಪ್ರಿಯರಾಗಿದ್ದಾರೆ. ಇನ್ನೂ ರಮ್ಯಾಕೃಷ್ಣ ಅವರು 2003 ರಲ್ಲಿ ಖ್ಯಾತ ನಿರ್ದೇಶಕ ಆಗಿರುವ ಕೃಷ್ಣವಂಶಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ರಿತ್ವಿಕ್ ವಂಶಿ ಎನ್ನುವ ಮಗ ಕೂಡ ಇದ್ದಾರೆ.
ನಟಿ ಪ್ರಿಯಾಂಕ ಉಪೇಂದ್ರ ಅವರು ನವೆಂಬರ್ 9 1977 ರಂದು ಕೋಲ್ಕತಾದಲ್ಲಿ ಜನಿಸಿದ್ದಾರೆ. ಇವರು ಕನ್ನಡ ಚಿತ್ರಗಳ ಜೊತೆಗೆ ಬೆಂಗಾಳಿ ಹಿಂದಿ ತೆಲುಗು ತಮಿಳು ಮತ್ತು ಒಡಿಯಾ ಭಾಷೆಗಳ ಚಿತ್ರಗಳಲ್ಲೂ ಕೂಡ ಅಭಿನಯಿಸಿದ್ದಾರೆ. ಇನ್ನೂ ಇವರು 2003 ರಲ್ಲಿ ನಟ ಮತ್ತು ನಿರ್ದೇಶಕ ಆಗಿರುವ ಉಪೇಂದ್ರ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಐಶ್ವರ್ಯ ಉಪೇಂದ್ರ ಮತ್ತು ಆಯುಷ್ ಉಪೇಂದ್ರ ಎನ್ನುವ ಇಬ್ಬರು ಮಕ್ಕಳಿದ್ದಾರೆ…..