ತಮಿಳಿನ ಖ್ಯಾತ ನಟಿ ಕೀರ್ತಿ ಪಾಂಡ್ಯನ್ ಅವರ ತಂದೆ ಯಾರು ಗೊತ್ತಾ?? ಇವರು ದಕ್ಷಿಣ ಭಾರತದ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ..!!
ತಮಿಳಿನ ಸ್ಟಾರ್ ನಟಿ ಕೀರ್ತಿ ಪಾಂಡ್ಯನ್ ಅವರು ಫೆಬ್ರವರಿ 18 1992 ರಂದು ಚೆನ್ನೈನಲ್ಲಿ ಜನಿಸಿದರು. ಇವರು 2019 ರಲ್ಲಿ ತುಂಬಾ ಮತ್ತು 2021 ರಲ್ಲಿ ಅನ್ಬಿರ್ಕಿನ್ಯಾಲ್ ಎನ್ನುವ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಪೋಸ್ಟ್ ಮ್ಯಾನ್ ಎನ್ನುವ ವೆಬ್ ಸೀರೀಸ್ ನಲ್ಲಿ ಕೂಡ ನಟಿಸಿದ್ದಾರೆ.
ಇನ್ನು ಕೀರ್ತಿ ಪಾಂಡ್ಯನ್ ಅವರು ಕೋವಿಡ್ ನ ಲಾಕ್ ಡೌನ್ ಸಮಯದಲ್ಲಿ ತಮ್ಮ ತಂದೆಯ ಜೊತೆಗೆ ಕೃಷಿ ಕೆಲಸದಲ್ಲಿ ಕೂಡ ಸಹಾಯ ಮಾಡಿದ್ದರು. ಇನ್ನೂ ಕೀರ್ತಿ ಅವರ ತಂದೆ ಕೂಡ ದಕ್ಷಿಣ ಭಾರತದ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ. ಹೌದು ಇವರ ತಂದೆಯ ಹೆಸರು ಅರುಣ್ ಪಾಂಡ್ಯನ್ ಹಾಗೆಯೇ ಕೀರ್ತಿ ಪಾಂಡ್ಯನ್ ಅವರ ತಾಯಿಯ ಹೆಸರು ವಿಜಯ ಪಾಂಡ್ಯನ್.
ಅರುಣ್ ಪಾಂಡ್ಯನ್ ಅವರು ಜುಲೈ 13 1958 ರಂದು ಜನಿಸಿದರು. ಇವರ ತಂದೆಯ ಹೆಸರು ಡಿಪಿ ಚೆಲ್ಲಯ್ಯ ಮತ್ತು ತಾಯಿಯ ಹೆಸರು ನಲ್ಲತಯಾಮಲ್ ಎಂದು. ಅರುಣ್ ಪಾಂಡ್ಯನ್ ಅವರು ತಮಿಳು ತೆಲುಗು ಹಿಂದಿ ಕನ್ನಡ ಮಲಯಾಳಂ ಭಾಷೆಗಳಲ್ಲಿ ನಟಿಸಿ ಪಂಚಭಾಷಾ ನಟರಾಗಿ ಗುರುತಿಸಿಕೊಂಡಿದ್ದಾರೆ. ಅರುಣ್ ಅವರು 1985 ರಲ್ಲಿ ತಮಿಳಿನಲ್ಲಿ ಚಿದಂಬರ ರಹಸ್ಯಂ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು.
ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ 1996 ರಲ್ಲಿ ಆಯುಧ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಹಾಯ್ ಬೆಂಗಳೂರು, ಜಾಕಿ ಚಾನ್, ಅಕ್ಕಾ, ಸೆಂಟ್ರಲ್ ಜೈಲ್, ಲೇಡಿ ಕಮೀಷನರ್, ಲೇಡಿ ಟೈಗರ್, ಯುವಶಕ್ತಿ, ಅಮರ್ ಅಕ್ಬರ್ ಆಂಟೊನಿ, ದ ಕಿಲ್ಲರ್, ಗಲಾಟೆ ಅಳಿಯಂದ್ರು, ಇಂಡಿಪೆಂಡೆನ್ಸ್ ಡೇ, ಡಾಲಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಾಗೆಯೇ ಇವರು ಸಾಕಷ್ಟು ತಮಿಳು ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ಇದರ ಜೊತೆಗೆ ಕೆಲ ಚಿತ್ರಗಳನ್ನು ಡಿಸ್ಟ್ರಿಬ್ಯೂಟ್ ಕೂಡ ಮಾಡಿದ್ದಾರೆ. ಹಾಗೆಯೇ ಅರುಣ್ ಪಾಂಡ್ಯನ್ ಅವರು ಕೆಲ ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲೂ ಕೂಡ ತೊಡಗಿಸಿಕೊಂಡಿದ್ದರು…..