Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ತನ್ನನ್ನು ಅವಮಾನಿಸಿದ ನಟಿ ರೋಜಾರನ್ನು 25 ವರ್ಷದಿಂದ ಮಾತನಾಡದ ಈ ಟಾಪ್ ನಟ ಯಾರು ಗೊತ್ತಾ ಶಾಕಿಂಗ್? ಅಷ್ಟಕ್ಕೂ ಕಾರಣ ಏನು ನೋಡಿ!

0

ಟಾಲಿವುಡ್ ನಲ್ಲಿ ವಿಕ್ಟರಿ ವೆಂಕಟೇಶ್ ಅವರು ನಂಬರ್ ವನ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ನಟನಿಗೆ ರೋಜಾ ಅವರು ಅವಮಾನಿಸಿದ ಕಾರಣ ಅವರು 25 ವರ್ಷದಿಂದ ಮಾತನಾಡಿಸುತ್ತಿಲ್ಲ. ಇದಕ್ಕೆ ಕಾರಣ ಏನೆಂದು ನೋಡೋಣ. ನಟಿ ರೋಜಾ ಅವರು ತಮ್ಮ ಪತಿ ಆರ್ ಕೆ ಸೆಲ್ವಮಣಿ ನಿರ್ದೇಶನದಲ್ಲಿ ವೆಂಕಟೇಶ್ ಅವರ ಜೊತೆ ಒಂದು ಸಿನಿಮಾ ನಿರ್ಮಾಣ ಮಾಡುವುದಕ್ಕೆ ಕೈ ಜೋಡಿಸಿದ್ದರು.

ಆದರೆ ಕೆಲ ಕಾರಣಾಂತರಗಳಿಂದ ಸಿನಿಮಾ ಮಧ್ಯದಲ್ಲಿ ನಿಂತು ಹೋಯಿತು. ತದನಂತರ ವೆಂಕಟೇಶ ಅವರು ಅದೇ ಚಿತ್ರದ ಕಥೆಯನ್ನು ರೋಜಾ ಅವರ ಜೊತೆಯಲ್ಲಿ ಬಿಟ್ಟು ವಿಜಯಶಾಂತಿ ಅವರ ಜೊತೆಗೆ ಮತ್ತು ಬೇರೆ ನಿರ್ಮಾಪಕರ ಜೊತೆ ಸಿನಿಮಾವನ್ನು ಮಾಡಿದರು. ಇದರಿಂದ ರೋಜಾ ಅವರಿಗೆ ತುಂಬಾನೇ ಕೋಪ ಬಂದಿತ್ತು. ಇದರ ಕುರಿತು ವೆಂಕಟೇಶ್ ಅವರನ್ನು ಕೇಳಿದಾಗ ಇದರಲ್ಲಿ ನನ್ನದೇನೂ ತಪ್ಪಿಲ್ಲ ಇದನ್ನು ನಿರ್ಮಾಪಕರು ಮಾಡಿದ್ದಾರೆ ಎಂದು ಹೇಳಿದರು.

ತದನಂತರ ವೆಂಕಟೇಶ್ ಮತ್ತು ರೋಜಾ ಅವರು ಪೋಕಿರಿ ರಾಜಾ ಎನ್ನುವ ಚಿತ್ರದ ಶೂಟಿಂಗ್ ನಲ್ಲಿ ಮುಂಬೈಗೆ ಹೋಗಿದ್ದರು. ಅಲ್ಲಿ ರೋಜಾ ಅವರನ್ನು ಶೂಟಿಂಗ್ ಗೆ ಕರೆಸಿ 3 ದಿನಗಳ ಕಾಲ ಹೋಟೆಲ್ ರೂಮ್ ನಲ್ಲಿಯೇ ವಿಗ್ರಹದಂತೆ ಕೂರಿಸಿದ್ದರು. ಇದರಿಂದ ಕೋಪಗೊಂಡ ರೋಜಾ ಅವರು ಯಾರಿಗೂ ಹೇಳದೆ ಚೆನ್ನೈ ಗೆ ಹೊರಟು ಹೋದರು.

ನಂತರ ನಿರ್ದೇಶಕರು ಕರೆ ಮಾಡಿ ಶೂಟಿಂಗ್ ಗೆ ಬನ್ನಿ ಎಂದಾಗ ನಾನು 1 ತಿಂಗಳಿನ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ಹಾಗಾಗಿ ನಾನು ಯಾವ ಶೂಟಿಂಗ್ ಗೆ ಬರುವುದಿಲ್ಲ ಎಂದು ಹೇಳಿದರು. ಇನ್ನು ನಿರ್ಮಾಪಕರ ಕಷ್ಟವನ್ನು ಅರ್ಥ ಮಾಡಿಕೊಂಡ ವೆಂಕಟೇಶ್ ಅವರು ರೋಜಾ ಅವರಿಗೆ ಕರೆ ಮಾಡಿ ಶೂಟಿಂಗ್ ಗೆ ಬನ್ನಿ ಎಂದು ಎಷ್ಟೇ ಕೇಳಿಕೊಂಡರೂ ರೋಜಾ ಅವರು ಯಾರನ್ನೂ ಲೆಕ್ಕಿಸದೆ ನಾನು ಯಾರ ಮಾತೂ ಕೇಳುವುದಿಲ್ಲ ಒಂದು ತಿಂಗಳು ನಾನು ಬರುವುದಿಲ್ಲ ಎಂದು ಹೇಳಿದರು.

ಇದಾದ ಮೇಲೆ ಒಂದು ತಿಂಗಳಿನ ನಂತರ ರೋಜಾ ಅವರು ಬಂದು ಆ ಚಿತ್ರದಲ್ಲಿ ನಟಿಸಿದರು. ನಂತರ ರೋಜಾ ಮತ್ತು ವೆಂಕಟೇಶ್ ಅವರು ಯಾವ ಸಿನಿಮಾದಲ್ಲೂ ಕೂಡ ಜೊತೆಯಾಗಿ ನಟಿಸಲಿಲ್ಲ ಹಾಗೂ ಇಲ್ಲಿಯವರೆಗೂ ಸುಮಾರು 25 ವರ್ಷಗಳಿಂದ ಇವರಿಬ್ಬರೂ ಮಾತನಾಡುತ್ತಿಲ್ಲ. ಇದರಲ್ಲಿ ಯಾರದ್ದು ತಪ್ಪು ಎಂದು ಗೊತ್ತಿಲ್ಲ……

Leave A Reply