ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಫೇಮಸ್ ರಿಯಾಲಿಟಿ ಶೋ ಎಂದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಇದು ಮಾತ್ರ ಅಲ್ಲ ಜೀ ಕನ್ನಡದಲ್ಲಿ ಬಹುತೇಕ ಒಳ್ಳೊಳ್ಳೆಯ ರಿಯಾಲಿಟಿ ಶೋಗಳನ್ನು ಮಾಡುತ್ತಾರೆ. ಇನ್ನು ಈ ಬಾರಿ ಡಿಕೆಡಿ 2022 ಶೋ ಈಗಾಗಲೇ ಶುರುವಾಗಿದ್ದು ಎಂದಿನಂತೆ ಇದಕ್ಕೆ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಾರಿಮುತ್ತ ವಿಜಯ ರಾಘವೇಂದ್ರ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಜಡ್ಜ್ ಗಳಾಗುತ್ತಾರೆ.
ಹಾಗೆಯೇ ಈ ಕಾರ್ಯಕ್ರಮವನ್ನು ಎಂದಿನಂತೆ ಖ್ಯಾತ ನಿರೂಪಕಿ ಅನುಶ್ರೀ ಅವರು ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಈ ಶೋಗೆ ಗೆಸ್ಟ್ ಆಗಿ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಂದಿದ್ದರು. ಇನ್ನು ಶಿವಣ್ಣ ಮನಸ್ಸು ಹೇಗೆ ಎಂದರೆ ಅವರು ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಾರೆ. ಇವರು ಮಾತ್ರ ಅಲ್ಲ ಡಾ ರಾಜ್ ಕುಮಾರ್ ಅವರು ಇದ್ದಾಗ ಸಹ ಅಭಿಮಾನಿಗಳನ್ನು ದೇವರಂತೆ ಕಾಣುತ್ತಿದ್ದರು.
ಹಾಗೆಯೇ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಕೂಡ ಅಭಿಮಾನಿಗಳನ್ನು ತಮ್ಮ ಮನೆಯವರಂತೆ ನೋಡುತ್ತಾರೆ. ಆದರೆ ದುರದೃಷ್ಟವಶಾತ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನಾವು ಎಲ್ಲರೂ ಕಳೆದುಕೊಂಡಿದ್ದೇವೆ. ಈ ರೀತಿಯ ದೊಡ್ಡ ಮನಸ್ಸು ಎಲ್ಲರಿಗೂ ಕೂಡ ಬರುವುದಿಲ್ಲ. ಇನ್ನೂ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಸಹ ನೀವು ನೋಡುತ್ತಾನೇ ಇರುತ್ತೀರಾ.
ಇದಕ್ಕೆ ಹೇಳುವುದು ಇವರನ್ನು ದೊಡ್ಮನೆ ಮಕ್ಕಳು ಎಂದು. ಇನ್ನೂ ಡಿಕೆಡಿ ಶೋ ಗೆ ಅತಿಥಿ ಆಗಿ ಬಂದ ನಮ್ಮ ಶಿವಣ್ಣ ಅವರು ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಮರೆಯಲಾಗದ ಒಂದು ಉಡುಗೊರೆಯನ್ನು ನೀಡಿದ್ದಾರೆ. ಹೌದು ಅನುಶ್ರೀ ಅವರಿಗೆ ಒಂದು ಕೋಟ್ ಮೇಲೆ ಶಿವಣ್ಣ ಅವರು ಕೆಲ ವಾಕ್ಯಗಳನ್ನು ಬರೆದು ಆಟೋಗ್ರಾಫ್ ನೀಡಿದ್ದಾರೆ.
ಇದಾದ ಮೇಲೆ ಸ್ವತಃ ಶಿವಣ್ಣ ಅವರೇ ಅನುಶ್ರೀ ಅವರಿಗೆ ಆ ಕೋಟನ್ನು ತೊಡಗಿಸಿ ಅದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿ ಅನುಶ್ರೀ ಅವರು ಹೆಚ್ಚು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಇದು ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ……