ಡಾಕ್ಟರ್ ಪದವಿಯನ್ನು ಪಡೆದುಕೊಂಡು, ಸಿನೆಮಾ ರಂಗಕ್ಕೆ ಬಂದ ನಟಿಯರು ಇವರೇ ನೋಡಿ, ಟಾಪ್ ನಟಿಯರು ಲಿಸ್ತ್ನಲ್ಲಿ ಇದ್ದರೆ !!
ನಮ್ಮ ಕನ್ನಡದ ಯಾವ ನಟಿಯರು ನಟನೆ ಮೇಲೆ ಆಸಕ್ತಿ ಇದ್ದ ಕಾರಣ ತಾವು ಓದುತ್ತಿದ್ದ ಡಾಕ್ಟರ್ ಪದವಿಯನ್ನು ತೊರೆದು ಸಿನಿಮಾ ರಂಗಕ್ಕೆ ಬಂದಿದ್ದಾರೆ ಎಂದು ನೋಡೋಣ ಬನ್ನಿ.
ಐಂದ್ರಿತಾ ರೇ ಅವರು ಏಪ್ರಿಲ್ 16 1985ರಂದು ಜನಿಸಿದ್ದಾರೆ. ಇವರು ಮೆರವಣಿಗೆ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇನ್ನೂ ಐಂದ್ರಿತಾ ರೇ ಅವರು ತಮ್ಮ ತಂದೆಯಂತೆಯೇ ಡೆಂಟಿಸ್ಟ್ ಪದವಿಯನ್ನು ಮಾಡಿ ಮುಗಿಸಿ ಪ್ರಸ್ತುತ ಇವರು ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಸೌಂದರ್ಯ ಅವರು ಈಗ ನಮ್ಮ ಜೊತೆ ಇಲ್ಲದೆ ಇರಬಹುದು ಆದರೆ ಇವರು ಮಾಡಿರುವ ಅದ್ಭುತ ಪಾತ್ರಗಳು ನಮ್ಮಲ್ಲಿ ಸದಾ ಇರುತ್ತದೆ. ಸೌಂದರ್ಯ ಅವರು ಕನ್ನಡದಲ್ಲಿ ಗಂಧರ್ವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು. ಇನ್ನೂ ಸೌಂದರ್ಯ ಅವರು ಮೊದಲನೇ ವರ್ಷದ ಎಂಬಿಬಿಎಸ್ ಪದವಿಯನ್ನು ಓದುತ್ತಿರುವಾಗಲೇ ಡಾಕ್ಟರ್ ಪದವಿಯನ್ನು ತೊರೆದು ನಟನೆಯ ಕಡೆಗೆ ಬಂದರು.
ಶ್ರೀ ಲೀಲಾ ಅವರು ಜುಲೈ 14 2001 ರಂದು ಜನಿಸಿದ್ದಾರೆ. ಇವರು ಕಿಸ್ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿದರು. ಇವರು ಓದಿನ ಜೊತೆಗೆ ಈಗ ಕೊನೆಯ ವರ್ಷದ ಎಂಬಿಬಿಎಸ್ ಪದವಿಯನ್ನು ಓದುತ್ತಿದ್ದಾರೆ.
ಅಪೂರ್ವ ಅರೋರಾ ಅವರು ಜೂನ್ 5 1996 ರಂದು ಜನಿಸಿದ್ದಾರೆ. ಇವರು ಟೀನೇಜ್ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇನ್ನೂ ಇವರು ಸೈಕಾಲಜಿ ಪದವಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ಸಾಯಿ ಪಲ್ಲವಿ ಅವರು ಸೌತ್ ಇಂಡಿಯಾದ ಫೇಮಸ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಇವರು ಮೇ 9 1992 ರಂದು ಜನಿಸಿದ್ದಾರೆ. ಇವರು ಎಂಬಿಬಿಎಸ್ ಪದವಿಯನ್ನು ಮುಗಿಸಿ ಈಗ ನಟನೆಯಲ್ಲಿ ತುಂಬಾ ಬಿಸಿ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ.
ಅಪೂರ್ವ ಗೌಡ ಅವರು ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ನಟಿಸಿ ಈ ಸಿನಿಮಾದ ಮುಖಾಂತರವೇ ಖ್ಯಾತ ನಟಿಯಾಗಿ ಗುರುತಿಸಿಕೊಂಡರು. ಇನ್ನೂ ಇವರು ಕೂಡ ವೈದ್ಯಕೀಯ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ಶ್ರುತಿ ಹಾಸನ್ ಅವರು ಜನವರಿ 28 1986 ರಂದು ಜನಿಸಿದ್ದಾರೆ. ಇವರು ಕೂಡ ಸೈಕಾಲಜಿ ಪದವಿಯನ್ನು ಓದಿ ಮುಗಿಸಿದ್ದಾರೆ.ಜಾನ್ವಿ ಜ್ಯೋತಿ ಅವರು ಪ್ರಸ್ತುತ ರಾಜರಾಣಿ ಸೀಸನ್ 2 ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕಾನೂರಾಯಣ, ಆರನೇ ಮೈಲಿ ಇನ್ನೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಕ್ಕೂ ಮುನ್ನ ಇವರು 1 ವರ್ಷದ ಕಾಲ ಡೆಂಟಿಸ್ಟ್ ಆಗಿ ವೈದ್ಯಕೀಯ ಕೆಲಸವನ್ನು ಮಾಡಿದ್ದಾರೆ…..