ಟಿವಿ ಮಾಧ್ಯಮಗಳಲ್ಲಿ ನ್ಯೂಸ್ ಚಾನಲ್ ಆಗಿರಬಹುದು ಅಥವಾ ಎಂಟರ್ ಟೈನ್ ಮೆಂಟ್ ಚಾನೆಲ್ ಆಗಿರಬಹುದು ಅದಕ್ಕೆ ಹಿನ್ನಲೆ ಧ್ವನಿ ತುಂಬಾ ಮುಖ್ಯವಾಗಿರುತ್ತದೆ. ಹಾಗಾದರೆ ಬನ್ನಿ ಟಿವಿ ಮಾಧ್ಯಮಗಳಲ್ಲಿ ಫೇಮಸ್ ಆಗಿರುವ ಅಂತಹ ಧ್ವನಿಗಳು ಯಾರದ್ದು ಎಂದು ತಿಳಿದುಕೊಳ್ಳೋಣ..
ರವಿ ಬಡಿಕ್ಕಲ್ಲಾ ಅವರು ಆರ್.ಜೆ, ಆ್ಯಂಕರ್, ಪ್ರೊಡ್ಯೂಸರ್, ವಾಯ್ಸ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಇವರು ಕಲರ್ಸ್ ಕನ್ನಡ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಗೆ ಹಿನ್ನೆಲೆ ಧ್ವನಿಯನ್ನು ಇವರೇ ನೀಡಿದ್ದಾರೆ. ಈ ಹಿನ್ನೆಲೆ ಧ್ವನಿಯಿಂದ ಇವರು ಎಲ್ಲೆಡೆ ಸಖತ್ ಜನಪ್ರಿಯರಾಗಿದ್ದಾರೆ ಎಂದು ಹೇಳಬಹುದು. ಇದರ ಜೊತೆಗೆ ಬೇರೆ ಕಾರ್ಯಕ್ರಮಗಳ ಪ್ರೋಮೋಗೆ ಕೂಡ ತಮ್ಮ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.
ರಾಜೇಶ್ ಶೆಟ್ಟಿ ಅವರ ಧ್ವನಿಯನ್ನು ಮಾಂತ್ರಿಕ ಧ್ವನಿ ಎಂದು ಹೇಳಬಹುದು. ಪ್ರತಿ ಭಾನುವಾರ ದಿನದಂದು ಟಿವಿ 9 ನಲ್ಲಿ ಪ್ರಸಾರವಾಗುತ್ತಿರುವ ಹೀಗೂ ಉಂಟೇ ಕಾರ್ಯಕ್ರಮಕ್ಕೆ ಹಿನ್ನೆಲೆ ಧ್ವನಿಯನ್ನು ಇವರೇ ನೀಡುತ್ತಾರೆ. ಇದರ ಜತೆಗೆ ರಾಜೇಶ್ ಅವರು ಎಂಟಕ್ಕಿಂತ ಹೆಚ್ಚು ಭಾಷೆಗಳಲ್ಲಿ ತನ್ನ ಕಂಠದಾನವನ್ನು ಮಾಡಿದ್ದಾರೆ.
ಜೀ ಕನ್ನಡದಲ್ಲಿ ಹೆಚ್ಚು ಜನಪ್ರಿಯ ಆಗಿರುವ ಹಿನ್ನೆಲೆ ಧ್ವನಿ ಯಾರದ್ದು ಎಂದರೆ ಅದು ಚೇತನ್ ಸೊಲಗಿ ಅವರದ್ದು. ಕೇವಲ ಹಿನ್ನೆಲೆ ಧ್ವನಿಯನ್ನು ಮಾತ್ರವಲ್ಲ ಜೀ ಕನ್ನಡದಲ್ಲೂ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.
ಶಿವರಾಜ್ ಕೆ ಆರ್ ಪೇಟೆ ಅವರು ಸಿನಿಮಾದಲ್ಲಿ ಮಾತ್ರ ನಟಿಸುವುದಿಲ್ಲ ಇವರು ಟಿವಿ 9 ನಲ್ಲಿ ಬರುವ ಕಾಮಿಡಿ ರೋಸ್ಟ್ ನೀವು ಹೇಳಿದ್ದು ನಾವು ಕೇಳಿದ್ದು ಕಾರ್ಯಕ್ರಮಕ್ಕೆ ಹಿನ್ನೆಲೆ ಧ್ವನಿಯನ್ನು ಇವರೇ ನೀಡುವುದು.
ಜೀವನ್ ಬಡಿಗೇರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುತ್ತಿದ್ದು ಇದರಲ್ಲಿ ಎಲ್ಲ ಕಾರ್ಯಕ್ರಮಗಳಿಗೂ ಮತ್ತು ಪ್ರೋಮೋಗಳಿಗೆ ಇವರೇ ತಮ್ಮ ಹಿನ್ನೆಲೆ ಧ್ವನಿಯನ್ನು ನೀಡುವುದು.
ಎಸ್ ಎಸ್ ಮನೋಜ್ ಶರ್ಮಾ ಅವರ ಧ್ವನಿ ಕಲರ್ಸ್ ಕನ್ನಡ ಸಿನಿಮಾ ವಾಹಿನಿಯಲ್ಲಿ ಚಿರಪರಿಚಿತವಾಗಿರುತ್ತದೆ. ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುವ ಎಲ್ಲ ಪ್ರೋಮೋಗಳಿಗೆ ಹಿನ್ನೆಲೆ ಧ್ವನಿಯನ್ನು ನೀಡುತ್ತಾರೆ…..