ಜೀ ಕನ್ನಡ ವಾಹಿನಿಯಲ್ಲಿ ಜೊತೆ ಜೊತೆಯಲ್ಲಿ ಧಾರಾವಾಹಿ ಒಂದು ಒಳ್ಳೆಯ ಟಿ.ಆರ್.ಪಿಯನ್ನು ಹೊಂದಿದೆ ಎಂದು ಹೇಳಬಹುದು. ಇನ್ನು ಈ ಧಾರಾವಾಹಿಯನ್ನು ಸಾಕಷ್ಟು ವೀಕ್ಷಕರು ನೋಡಿ ಅದರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇದರಲ್ಲಿ ಸಾಕಷ್ಟು ಕಲಾವಿದರು ಅಭಿನಯ ಮಾಡುತ್ತಿದ್ದು ರಶ್ಮಿ ಜಯರಾಜ್ ಅವರು ಕೂಡ ಒಬ್ಬರು ಎಂದು ಹೇಳಬಹುದು.
ಇನ್ನು ನಟಿ ರಶ್ಮಿ ಜಯರಾಜ್ ಅವರ ಮೂಲತಃ ಕರ್ನಾಟಕದ. ಇವರು ಕಿರುತೆರೆ ಲೋಕಕ್ಕೆ ಹೆಸರು ಮಾಡಿರುವ ವಿಧಿ ಧಾರಾವಾಹಿಯ ಮುಖಾಂತರ ತಮಿಳು ಕಿರುತೆರೆ ಲೋಕಕ್ಕೆ ಎಂಟ್ರಿ ನೀಡಿದರು. ಇದರ ಜೊತೆಗೆ ಇನ್ನೂ ಕೆಲ ತಮಿಳು ಧಾರಾವಾಹಿಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಹಾಗೆಯೇ ನಮ್ಮ ಕನ್ನಡದಲ್ಲಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ.
ಇನ್ನು ರಶ್ಮಿ ಜಯರಾಜ್ ಅವರು ಫೆಬ್ರವರಿ 10 2021 ರಂದು ಚೆನ್ನೈನಲ್ಲಿ ಚರ್ಚ್ ನಲ್ಲಿ ರಿಚು ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಹಾಗೆಯೇ ನವೆಂಬರ್ 27 2020 ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಮೇಲೆ ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ತಾವು ತಾಯಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಅನೌನ್ಸ್ ಮಾಡಿದ್ದರು.
ಇದಾದ ಮೇಲೆ ರಶ್ಮಿ ಜಯರಾಜ್ ಅವರಿಗೆ ಅದ್ದೂರಿಯಾಗಿ ಸೀಮಂತದ ಕಾರ್ಯಕ್ರಮವನ್ನು ಕೂಡ ಮಾಡಿದರು. ಇನ್ನೂ ತಮ್ಮ ಸೀಮಂತದಲ್ಲಿ ಹಸಿರು ಸೀರೆ ಕೆಂಪು ಡಿಸೈನರ್ ಬ್ಲೌಸ್ ನಲ್ಲಿ ಮಿಂಚಿ ಅವರು ಕುಳಿತಿರುವ ಜಾಗವನ್ನು ಬಿಳಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಿದ್ದರು. ಇದಾದ ಮೇಲೆ ಇವರು ಪಿಂಕ್ ಡಿಸೈನರ್ ಗೌನ್ ಧರಿಸಿ ಬೇಬಿ ಬಂಪ್ ಫೋಟೋ ಶೂಟನ್ನು ಮಾಡಿಸಿ ಅದರ ಕೆಲ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದಾದ ಮೇಲೆ ಇವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇನ್ನೂ ರಶ್ಮಿ ಜಯರಾಜ್ ರಿಚು ಮತ್ತು ಅವರ ಕುಟುಂಬದವರು ತಮ್ಮ ಮಗಳಿಗೆ ಅರೀನಾ ರಿಚು ಎನ್ನುವ ಹೆಸರನ್ನು ಇಟ್ಟು ನಾಮಕರಣ ಮಾಡಿ ಈ ಕಾರ್ಯಕ್ರಮದ ಮುಖಾಂತರ ಅಭಿಮಾನಿಗಳಿಗೆ ತಮ್ಮ ಮಗಳ ಮುಖವನ್ನು ತೋರಿಸಿದ್ದಾರೆ. ಇನ್ನು ರಶ್ಮಿ ಜಯರಾಜ್ ಅವರ ಪುಟ್ಟ ಮಗಳು ನೋಡುವುದಕ್ಕೆ ತುಂಬಾ ಕ್ಯೂಟ್ ಆಗಿದ್ದಾಳೆ…..