ಜೀ ಕನ್ನಡದಲ್ಲಿ ಹೆಚ್ಚು ಟಿ.ಆರ್.ಪಿ ಸಂಪಾದನೆ ಮಾಡಿಕೊಂಡಿರುವ ಧಾರಾವಾಹಿ ಎಂದರೆ ಜೊತೆ ಜೊತೆಯಲಿ. ಈ ಧಾರಾವಾಹಿಯಲ್ಲಿ ಅನಿರುದ್ಧ್ ಜತ್ಕರ್ ಮತ್ತು ಮೇಘನಾ ಶೆಟ್ಟಿ ಅವರು ಮುಖ್ಯರಾದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಇವರುಗಳ ಜೊತೆಗೆ ಸೋನು ಗೌಡ, ಪೃಥ್ವಿ ಅಂಬರ್, ಶಿಲ್ಪಾ ಅಯ್ಯರ್, ಅಪೂರ್ವಶ್ರೀ, ಶಿವಾಜಿರಾವ್ ಜಾಧವ್, ವಿಜಯ್ ಸೂರ್ಯ, ಮಾನಸ ಮನೋಹರ್, ವಿಜಯಲಕ್ಷ್ಮಿ ಸಿಂಗ್, ಜೈಜಗದೀಶ್ ಇನ್ನೂ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.
ಹಾಗೆಯೇ ಈ ಧಾರಾವಾಹಿಯಲ್ಲಿ ನಟಿಸಿದ ನಟಿ ರಶ್ಮಿ ಜೈರಾಜ್ ಅವರಿಗೆ ಹೆಣ್ಣು ಮಗು ಆಯಿತು. ತಮ್ಮ ಮಗುವಿನ ಜೊತೆಗೆ ಮೊದಲನೆಯ ಫೋಟೋವನ್ನು ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋಗೆ ಕ್ಯಾಪ್ಷನ್ ಆಗಿ “ನನ್ನ ಮಗಳ ಜೊತೆಗೆ ಮೊದಲನೆಯ ಫೋಟೋ ಅಪ್ಪನ ರಾಜಕುಮಾರಿ ಮತ್ತು ನನ್ನ ಪ್ರಪಂಚ” ಎಂದು ಬರೆದುಕೊಂಡಿದ್ದಾರೆ. ಇನ್ನೂ ರಶ್ಮಿ ಜೈರಾಜ್ ಅವರು ನವೆಂಬರ್ 27 2020 ರಂದು ಮೈಸೂರಿನಲ್ಲಿ ರಿಚು ಜಾಕೋಬ್ ಎನ್ನುವವರನ್ನು ನಿಶ್ಚಿತಾರ್ಥ ಮಾಡಿಕೊಂಡರು. ಇನ್ನೂ ರಿಚು ಜಾಕೋಬ್ ಅವರು ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇದಾದ ಮೇಲೆ ಫೆಬ್ರವರಿ 10 2021 ರಂದು ಚೆನ್ನೈ ನ ಚರ್ಚ್ ನಲ್ಲಿ ವಿವಾಹವಾದರು. ಆ ಸಮಯದಲ್ಲಿ ಕೋವಿಡ್ ಇದ್ದ ಕಾರಣ ಕೇವಲ ತಮ್ಮ ಬಂಧು ಮಿತ್ರರು ಆತ್ಮೀಯರ ಜೊತೆಗೆ ಮಾತ್ರ ವಿವಾಹ ಮಾಡಿಕೊಂಡರು. ಇನ್ನು ರಶ್ಮಿ ಜೈರಾಜ್ ಅವರು ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ ನಟಿಸಿ ತುಂಬಾನೇ ಜನಪ್ರಿಯರಾಗಿದ್ದಾರೆ.
ಇನ್ನು ರಶ್ಮಿ ಜಯರಾಜ್ ಅವರು ಅಕ್ಟೋಬರ್ 9 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ತಮ್ಮ ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿಯೇ ಮಾಡಿ ಮುಗಿಸಿದ್ದಾರೆ. ಇನ್ನೂ ರಶ್ಮಿ ಜೈರಾಜ್ ಅವರು ಕಿರಣ್ ಅವರ ನಿರ್ದೇಶನದ ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಇದರ ಜೊತೆಗೆ ಮದುಮಗಳು, ಜಸ್ಟ್ ಮಾತ್ ಮಾತಲ್ಲಿ ಮತ್ತು ಕೆಲ ತಮಿಳು ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಪ್ರಸ್ತುತ ರಶ್ಮಿ ಜಯರಾಜ್ ಅವರು ತಮಿಳಿನಲ್ಲಿ ಪ್ರಸಾರವಾಗುತ್ತಿರುವ ನಾಮ್ ಇರುವಾರ್ ನಾಮಕ್ಕೂ ಇರುವಾರ್ ಮತ್ತು ಸೆಲ್ವಮಗಲ್ ಎನ್ನುವ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಕನ್ನಡದಲ್ಲಿ ದೇವಯಾನಿ ಧಾರವಾಹಿಯಲ್ಲಿ ಕೂಡ ಅಭಿನಯಿಸುತ್ತಿದ್ದಾರೆ…..