ಜೇಮ್ಸ್ ಸಿನಿಮಾ pre-release ಈವೆಂಟ್ ನಲ್ಲಿ ರಾಘಣ್ಣನಿಗೆ ಆಘಾತ..!! ಖಿನ್ನತೆಗೆ ಒಳಗಾದ ನಟ ಅಷ್ಟಕ್ಕೂ ಏನಾಗಿದೆ ಗೊತ್ತಾ..??
ನಮಸ್ಕಾರ ಸ್ನೇಹಿತರೆ, ಜೇಮ್ಸ್ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಇನ್ನು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಆದಕಾರಣ ಚಿತ್ರರಂಗದ ಬಹುತೇಕ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೇಮ್ಸ್ ಚಿತ್ರದ ಈ ಕಾರ್ಯಕ್ರಮವನ್ನು ಎಷ್ಟೇ ಅದ್ದೂರಿಯಾಗಿ ಮಾಡಿದರು ಅಪ್ಪು ಅವರು ಇಲ್ಲ ಎಂಬ ಅಂಧಕಾರ ಮಾತ್ರ ಎಲ್ಲರಲ್ಲೂ ಇದೆ. ಜೇಮ್ಸ್ ಸಿನಿಮಾ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತುರರಾಗಿದ್ದಾರೆ. ಜೇಮ್ಸ್ ಸಿನಿಮಾ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು ರಿಲೀಸ್ ಮಾಡಲಾಗುತ್ತಿದೆ.
ಹಾಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಚಿತ್ರತಂಡವನ್ನು ಹೊರತುಪಡಿಸಿ ಪುನೀತ್ರಾಜಕುಮಾರ್ ಅವರ ಅಭಿಮಾನಿಗಳು ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಚಿತ್ರತಂಡದ ಕಾರ್ಯಕ್ರಮದಲ್ಲಿ ರಾಜ್ ಕುಟುಂಬ ಸಹ ಪಾಲ್ಗೊಂಡಿದೆ.
ಆದರೆ ವೇದಿಕೆ ಮೇಲೆ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರು ಮಾತನಾಡುವಾಗ ಎಲ್ಲರೂ ಅವರನ್ನು ಕಂಡು ಕಣ್ಣೀರು ಹಾಕಿದರು. ಆದರೆ ಅವರು ಕೊಟ್ಟ ಮಾತು ತಪ್ಪುವಂತೆ ಮಾಡಿದ್ದು.
ಅದು ಪುನೀತ್ ರಾಜಕುಮಾರ್ ಅವರ ಮೇಲಿರುವ ಪ್ರೀತಿ, ಇನ್ನೋ ಜೇಮ್ಸ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜಕುಮಾರ್ ಅವರು ನಾನು ಭಾವುಕ ನಾಗ ಬಾರದು ಎಂದು ಅಂದುಕೊಂಡಿದ್ದೇನೆ ಎಂದು ಹೇಳುತ್ತಲೆ ಮಾತನಾಡಿದರು.
ನನಗೆ ಈಗ ಅನಿಸಿದ್ದು ಚೆನ್ನಾಗಿ ಓದುತ್ತಿದ್ದ ಗಾಡಿಯನ್ನು ಆ ದೇವರು ನಿಲ್ಲಿಸಿಬಿಟ್ಟ. ನಾನು ನೋಡಿ ಕುಂಟುತ್ತಾ ಓಡಾಡುತ್ತಿದ್ದೇನೆ ನಾನು ಇನ್ನು ಇದ್ದೇನೆ ಅಂದರೆ ಎಷ್ಟು ಬೇಜಾರಾಗುತ್ತದೆ. ನನಗೆ ಸ್ಟ್ರೋಕ್ ಆಗಿದೆ ಆರ್ಟ್ ಪ್ರಾಬ್ಲಮ್ ಇದೆ. ಇದೆಲ್ಲಾ ನೋಡಿದಾಗ ಯಾಕೆ ನಾನು ಇನ್ನೂ ಬದುಕಿರಬೇಕು ಎನಿಸಿತು.
ನಾನು ಅವನನ್ನು ನೋಡಿ ಕೊಂಡು ಹುಡುಕಿಕೊಂಡು ಹೋಗುತ್ತೇನೆ. ನಾನು ಅವನು ಇರುವ ಕಡೆ ಹೋಗುತ್ತೇನೆ. ನಾನು ಅವನು ಇರುವ ಕಡೆ ಹೋಗಲು ಸಿದ್ಧನಾಗಿದ್ದೇನೆ ಎಂದು ರಾಘವೇಂದ್ರ ರಾಜಕುಮಾರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರಿಗೆ ದುಃಖ ತಡೆಯಲಾಗಲಿಲ್ಲ.
ಕೈ ನಡುಕ ಬಂದಿತ್ತು ಆಗಾಗಿ ಮಾತನ್ನು ಅರ್ಧಕ್ಕೆ ಬಿಟ್ಟು ವೇದಿಕೆ ಮೇಲಿಂದ ಕೆಳಗೆ ಇಳಿದು ಹೇಳಿದರು. ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರು ಅಪ್ಪು ಬಗ್ಗೆ ಎಲ್ಲಿ ಮಾತನಾಡಿದರು ಭಾವುಕರಾಗುತ್ತಿದ್ದರು.
ಸಾಮಾನ್ಯ ಜನರಿಗೆ ಮತ್ತು ಅವರ ಅಭಿಮಾನಿಗಳಿಗೆ ಅಪ್ಪು ಇಲ್ಲದ ನೋವು ತುಂಬಾನೆ ಕಾಡುತ್ತಿದೆ. ಇನ್ನು ಅವರ ಕುಟುಂಬ ವರ್ಗದವರಿಗೆ ಈ ನೋವು ಬಹಳ ಗಾಢವಾಗಿ ಕಾಡುತ್ತದೆ. ಆದರೆ ವೇದಿಕೆ ಮೇಲೆ ಮಾತನಾಡಿದ ರಾಘಣ್ಣ ಅವರು ಇನ್ನು ಮುಂದೆ ಅಳುವುದಿಲ್ಲ ಅಪ್ಪು ನಮ್ಮೊಂದಿಗೆ ಇದ್ದಾನೆ ಎಂದಿದ್ದರು.
ಆದರೆ ಜೇಮ್ಸ್ ಕಾರ್ಯಕ್ರಮದಲ್ಲಿ ದುಃಖ ತಡೆಯಲಾಗದೆ ಭಾವುಕರಾದರು. ರಾಘಣ್ಣನವರು ವೇದಿಕೆಯ ಮೇಲೆ ನಿಂತು ನಾನು ಅಪ್ಪು ಬಳಿ ಹೋಗಲು ತಯಾರಾಗಿದ್ದೇನೆ ಎಂದು ಹೇಳಿ ಅಳುತ್ತಿದ್ದರು.
ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಶಿವರಾಜ್ ಕುಮಾರ್ ಅವರು ಅಳು ತಡೆಯಲಾರದೇ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು. ನಂತರ ಶಿವರಾಜ್ ಕುಮಾರ್ ಅವರು ವೇದಿಕೆ ಮೇಲೆ ಬಂದ ಮೇಲೆ ಅವರ ಕಣ್ಣೀರು ನಿಲ್ಲಲೇ ಇಲ್ಲ. ಅಳುತ್ತಲೇ ಮಾತನಾಡಿದರು.
ಈ ವೇಳೆ ಶಿವರಾಜ್ ಕುಮಾರ್ ಅವರು ರಾಮಣ್ಣನವರನ್ನು ತಪ್ಪಿಕೊಂಡು ಸಮಾಧಾನ ಮಾಡಿ ವೇದಿಕೆಯಿಂದ ಕೆಳಗಿಳಿದರು. ಇನ್ನು ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ನೋವಿನ ಸಂಗತಿಯೆ ಹೆಚ್ಚಾಯಿತು. ಇದು ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಹಾಗಾಗಿ ಬಹಳ ಸಂಭ್ರಮದಿಂದ ಈ ಕಾರ್ಯಕ್ರಮವನ್ನು ಮಾಡಿದರು.
ಎಲ್ಲರಲ್ಲಿಯೂ ದುಃಖ ಮನೆಮಾಡಿತ್ತು. ಅಲ್ಲದೆ ಜೇಮ್ಸ್ ಸಿನಿಮಾ ಮೂಲಕ ಅಪ್ಪು ಅವರನ್ನು ಬರಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ….