ಜಹೀರ್ ಅಹ್ಮದ್ ಅವರನ್ನು ಇಮಿಟೇಟ್ ಮಾಡಿದ ಚಂದನ್ ಮತ್ತು ಕವಿತಾ, ವಿಡಿಯೋ ವೈರಲ್, ಅಬ್ಬಬ್ಬಾ ಲಾಟರಿ ಕಂಜಾಜುಲೇಸನ್ ಬ್ರದರ್ !!
ಚಂದನ್ ಕುಮಾರ್ ಅವರು ಸೆಪ್ಟೆಂಬರ್ 11 1985 ರಂದು ಜನಿಸಿದ್ದಾರೆ. ಚಂದನ್ ಅವರು ಮೊದಲು ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ರಾಧಾ ಕಲ್ಯಾಣ ಮತ್ತು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಲಕ್ಷ್ಮೀ ಬಾರಮ್ಮ ಎನ್ನುವ ಧಾರಾವಾಹಿಗಳಲ್ಲಿ ನಟಿಸಿ ತುಂಬಾನೇ ಜನಪ್ರಿಯ ಆದರು.
ಇದರ ಜೊತೆಗೆ 2010 ರಲ್ಲಿ ಪ್ಯಾಟೆ ಮಂದಿ ಕಾಡಿಗೆ ಬಂದ್ರು ಎನ್ನುವ ರಿಯಾಲಿಟಿ ಶೋನಲ್ಲಿ ಕೂಡ ಪಾಲ್ಗೊಂಡಿದ್ದರು. ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 3 ಸೀಸನ್ ನಲ್ಲೂ ಕೂಡ ಸ್ಪರ್ಧಿಯಾಗಿ ಮನೆಗೆ ಪ್ರವೇಶ ಮಾಡಿದ್ದರು. ಇನ್ನೂ ಬೆಳ್ಳಿ ತೆರೆಗೆ ಬಂದರೆ 2011 ರಲ್ಲಿ ಲೈಫು ಇಷ್ಟೇನೆ ಎನ್ನುವ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.
ಇದಾದ ಮೇಲೆ ಪರಿಣಯ, ಕತ್ತೆ, ಎರಡೊಂದ್ಲ ಮೂರು, ಲವ್ ಯೂ ಆಲಿಯಾ, ಬೆಂಗಳೂರು 560023, ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್ ಕಾಮ್ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಒಂದು ತಮಿಳು ಸಿನಿಮಾದಲ್ಲೂ ಕೂಡ ನಟಿಸಿದ್ದಾರೆ. ಇವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುಖಾಂತರ ಕಿರುತೆರೆಯಲ್ಲಿ ಜನಪ್ರಿಯ ನಟರಾಗಿ ಗುರುತಿಸಿಕೊಂಡರು.
ಇನ್ನು ಇದರಲ್ಲಿ ನಟಿ ಕವಿತಾ ಗೌಡ ಅವರು ಕೂಡ ನಟಿಸಿ ಇದರಿಂದ ತುಂಬಾನೇ ಪ್ರಖ್ಯಾತವನ್ನು ಗಳಿಸಿದರು. ಕವಿತಾ ಗೌಡ ಅವರು ಜುಲೈ 26 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಮೊದಲು ತಮಿಳಿನ ಮಹಾಭಾರತಮ್ ಎನ್ನುವ ಶೋ ಮುಖಾಂತರ ತುಂಬ ಫೇಮಸ್ ಆದರು. ಇದಾದ ಮೇಲೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರದಲ್ಲಿ ನಟಿಸಿದ್ದಾರೆ.
ಇದಾದ ಮೇಲೆ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಬೀರ್ಬಲ್ ಟ್ರೈಲಾಜಿ ಕೇಸ್ 1, ಗೋವಿಂದಾ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕೂಡ ಬಿಗ್ ಬಾಸ್ ಸೀಸನ್ 6 ರಲ್ಲಿ ಮನೆಗೆ ಪ್ರವೇಶ ಮಾಡಿ ಅದರಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದರು.
ಇನ್ನೂ ಇವರಿಬ್ಬರು ಮೇ 14 2021 ರಂದು ಬೆಂಗಳೂರಿನಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಕವಿತಾ ಮತ್ತು ಚಂದನ್ ಅವರು ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವ ಸಮಯದಲ್ಲಿ ಕೆಲ ಹಾಸ್ಯವನ್ನು ಮಾಡುತ್ತಾ ಕೊನೆಯದಾಗಿ ಜಹೀರ್ ಅಹ್ಮದ್ ಅವರನ್ನು ಎಷ್ಟು ಚೆನ್ನಾಗಿ ಇಮಿಟೇಟ್ ಮಾಡಿದ್ದಾರೆ ಎನ್ನುವುದನ್ನು ಈ ವಿಡಿಯೋ ಮುಖಾಂತರ ಇಲ್ಲಿ ನೀವು ನೋಡಬಹುದು…..