Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಜನುಮದ ಜೋಡಿ ನಟಿ ಶಿಲ್ಪಾ ಮನೆ ಮೊದಲ ಬಾರಿಗೆ ನೋಡಿ..!!

0

ಮಲಯಾಳಂ ಖ್ಯಾತ ನಟಿ ಶಿಲ್ಪಾ ಅವರನ್ನು ಸಾಕಷ್ಟು ಜನರು ಚಿಪ್ಪಿ ಎಂದು ಕರೆಯುತ್ತಾರೆ. ಇವರು ಜೂನ್ 1 1975 ರಂದು ತಿರುವನಂತಪುರಂನಲ್ಲಿ ಜನಿಸಿದ್ದಾರೆ. ಇವರ ತಂದೆ ತಾಯಿಯ ಹೆಸರು ತನಕಂ ಮತ್ತು ಶಾಜಿ ಎಂದು.

ಇವರು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಚಿಪ್ಪಿ ಅವರು ತಮ್ಮ ಶಾಲೆಯ ಶಿಕ್ಷಣವನ್ನು ನಿರ್ಮಲ ಭವನ್ ನಲ್ಲಿ ಮಾಡಿ ಮುಗಿಸಿದ್ದಾರೆ ಮತ್ತು ಕಾಲೇಜು ಶಿಕ್ಷಣವನ್ನು ಮಾರ್ ಇವಾನಿಯಸ್ ಕಾಲೇಜಿನಲ್ಲಿ ಮಾಡಿ ಮುಗಿಸಿದ್ದಾರೆ. ಇನ್ನು ಸಿನಿಮಾ ರಂಗಕ್ಕೆ ಬಂದರೆ ಶಿಲ್ಪಾ ಅವರು 1992 ರಲ್ಲಿ ತಲಾಸ್ಥಾನಂ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇದು ಮಲಯಾಳಂ ಭಾಷೆಯ ಸಿನಿಮಾವಾಗಿದೆ.

ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ 1996 ರಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ಜನುಮದ ಜೋಡಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದರು. ಇದಾದ ಮೇಲೆ ಕಲ್ಯಾಣಿ, ಮುದ್ದಿನ ಕಣ್ಮಣಿ, ಲಕ್ಷ್ಮಿ ಮಹಾಲಕ್ಷ್ಮಿ, ವಿಮೋಚನೆ, ಮುಂಗಾರಿನ ಮಿಂಚು, ಚಿಕ್ಕ, ಸುವ್ವಿ ಸುವ್ವಾಲಿ, ಬಿಸಿ ರಕ್ತ, ಭೂಮಿತಾಯಿಯ ಚೊಚ್ಚಲ ಮಗ, ಪ್ರೇಮಾಚಾರಿ, ಅರುಣೋದಯ, ನಾನೇನೂ ಮಾಡ್ಲಿಲ್ಲ, ಇದು ಎಂಥಾ ಪ್ರೇಮವಯ್ಯಾ, ಖಡ್ಗ, ಧರ್ಮದೇವತೆ, ಪಾಂಡವ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದರ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕೂಡ ಒಂದೊಂದು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಶಿಲ್ಪಾ ಅವರು ಮಲಯಾಳಂನ ಖ್ಯಾತ ನಿರ್ದೇಶಕರಾದ ರಂಜಿತ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಅವಂತಿಕಾ ಎನ್ನುವ ಮಗಳು ಕೂಡ ಇದ್ದಾರೆ. ಶಿಲ್ಪಾ ಅವರು ತಮ್ಮದೇ ಆದ ಸ್ವಂತ ನಿರ್ಮಾಣ ಕೇಂದ್ರವನ್ನು ಅವರ ಪತಿಯ ನಿರ್ದೇಶನದಲ್ಲಿ ಶುರು ಮಾಡಿದರು.

ಆದರೆ ಅದರಲ್ಲಿ ಯಶಸ್ಸನ್ನು ಸಾಧಿಸಲಿಲ್ಲ. ಇದರಿಂದ ಆರ್ಥಿಕ ಸಮಸ್ಯೆಯನ್ನು ನೋಡಿದರು ತದನಂತರ ಶಿಲ್ಪಾ ಅವರು ಕೆಲ ತಮಿಳು ಮತ್ತು ಮಲಯಾಳಂ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದರು. ಇದರಿಂದ ಅವರ ಆರ್ಥಿಕ ಸಮಸ್ಯೆಯು ನೀಗಿತು. ಇದಾದ ಮೇಲೆ ಧಾರಾವಾಹಿಗಳನ್ನು ನಿರ್ಮಾಣ ಮಾಡುವುದಕ್ಕೆ ಶಿಲ್ಪಾ ಅವರು ಕೈ ಎತ್ತಿದರು.

ಇದರಲ್ಲಿ ಅವರಿಗೆ ಯಶಸ್ಸು ಲಭಿಸಿತು. ಶಿಲ್ಪಾ ಅವರು ಎಲ್ಲರ ಜೊತೆ ತುಂಬ ಸಿಂಪಲ್ ಆಗಿ ಇರುತ್ತಾರೆ. ಶೂಟಿಂಗ್ ಸೆಟ್ ನಲ್ಲಿ ಲೈಟ್ ಬಾಯ್ ನಿಂದ ಹಿಡಿದು ಎಲ್ಲರನ್ನು ತುಂಬ ಪ್ರೀತಿಯಿಂದ ನಗುನಗುತ್ತಾ ಮಾತನಾಡಿಸುತ್ತಾರೆ ಮತ್ತು ಯಾವುದೇ ಚಿಕ್ಕ ಕೆಲಸವಿದ್ದರೂ ಕೂಡ ಅದನ್ನು ಅಹಂ ಇಲ್ಲದೇ ಮಾಡುತ್ತಾರೆ…..

Leave A Reply