Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಜನುಮದ ಜೋಡಿ ನಟಿ ಶಿಲ್ಪಾ ಅವರ ಮನೆ ಹೇಗಿದೆ ಗೊತ್ತಾ?? ಎಷ್ಟು ಅದ್ದೂರಿಯಾಗಿದೆ ನೋಡಿ!!

0

ದಕ್ಷಿಣ ಭಾರತದ ಖ್ಯಾತ ನಟಿ ಶಿಲ್ಪಾ ಅವರನ್ನು ಬಹುತೇಕ ಜನರು ಚಿಪ್ಪಿ ಎಂದೇ ಕರೆಯುತ್ತಾರೆ. ಇವರು ಚಿಪ್ಪಿ ಎನ್ನುವ ಹೆಸರಿನಲ್ಲಿ ಫೇಮಸ್ ಎಂದು ಹೇಳಬಹುದು. ಇವರು ಜೂನ್ 1 1975 ರಂದು ತಿರುವನಂತಪುರಂ ನಲ್ಲಿ ಜನಿಸಿದ್ದಾರೆ.

ಇವರ ತಂದೆ ತಾಯಿಯ ಹೆಸರು ತನಕಂ ಮತ್ತು ಶಾಜಿ ಎಂದು. ಶಿಲ್ಪಾ ಅವರು ಮಲಯಾಳಂ ನಲ್ಲಿ 1992 ರಲ್ಲಿ ತಲಾಸ್ಥಾನಂ ಎನ್ನುವ ಚಿತ್ರದ ಮೂಲಕ ಸಿನಿಮಾ ಜೀವನಕ್ಕೆ ಕಾಲಿಟ್ಟರು.

ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 1996 ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಜೊತೆಗೆ ಜನುಮದ ಜೋಡಿ ಚಿತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕೆ ಇವರಿಗೆ ಫಿಲ್ಮ್ ಫೇರ್ ಅವಾರ್ಡ್ ಕೂಡ ದೊರಕಿದೆ.

ತದನಂತರ ಕಲ್ಯಾಣಿ, ಮುದ್ದಿನ ಕಣ್ಮಣಿ, ಲಕ್ಷ್ಮಿ ಮಹಾಲಕ್ಷ್ಮಿ, ವಿಮೋಚನೆ, ಮುಂಗಾರಿನ ಮಿಂಚು, ಚಿಕ್ಕ, ಸುವ್ವಿ ಸುವ್ವಾಲಿ, ಬಿಸಿರಕ್ತ, ಭೂಮಿತಾಯಿಯ ಚೊಚ್ಚಲ ಮಗ, ಮೇಘ ಬಂತು ಮೇಘ, ಪ್ರೇಮಾಚಾರಿ, ಅರುಣೋದಯ, ನಾನೇನೂ ಮಾಡಲಿಲ್ಲ, ಇದು ಎಂಥಾ ಪ್ರೇಮವಯ್ಯಾ, ಖಡ್ಗ, ಧರ್ಮದೇವತೆ, ಪಾಂಡವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದರ ಜೊತೆಗೆ ತಮಿಳು ಮತ್ತು ತೆಲುಗಿನಲ್ಲಿ ಕೂಡ ಒಂದೊಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಚಿಪ್ಪಿ ಅವರು 2001 ರಂದು ಮಲಯಾಳಂನ ಖ್ಯಾತ ನಿರ್ದೇಶಕರಾದ ಎಮ್ ರಂಜಿತ್ ಅವರನ್ನು ವಿವಾಹ ಮಾಡಿಕೊಂಡರು. ವಿವಾಹ ಮಾಡಿಕೊಂಡ ಮೇಲೆ ತಮ್ಮದೇ ಆದ ಒಂದು ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದರು. ಆದರೆ ಶಿಲ್ಪಾ ಅವರಿಗೆ ಇದರಲ್ಲಿ ಅಷ್ಟಾಗಿ ಯಶಸ್ಸು ಸಿಗಲಿಲ್ಲ.

ಇದರಿಂದ ಸ್ವಲ್ಪ ಮಟ್ಟಿಗೆ ಹಣವನ್ನು ಕಳೆದುಕೊಂಡರು. ತದನಂತರ ಮಲಯಾಳಂನ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿಕೊಂಡರು. ಇದರಿಂದ ಇವರಿಗೆ ಆರ್ಥಿಕ ಸಮಸ್ಯೆಯು ಸ್ವಲ್ಪ ಕಡಿಮೆಯಾಯಿತು. ಇದಾದ ಮೇಲೆ ಮತ್ತೆ ಧಾರಾವಾಹಿಗಳನ್ನು ನಿರ್ಮಾಣ ಮಾಡುವುದಕ್ಕೆ ಶುರು ಮಾಡಿಕೊಂಡರು. ಈಗ ದೇವರು ಚಿಪ್ಪಿ ಅವರ ಕೈಯನ್ನು ಹಿಡಿದರು.

ಪ್ರಸ್ತುತ ಶಿಲ್ಪಾ ಅವರು ತಮಿಳಿನಲ್ಲಿ ಒಂದು ಮತ್ತು ಮಲಯಾಳಂನಲ್ಲಿ ಒಂದು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ಶಿಲ್ಪಾ ಅವರು ಅಷ್ಟು ದೊಡ್ಡ ನಿರ್ಮಾಪಕಿಯಾಗಿದ್ದರು ಕೂಡ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡುತ್ತಾರಂತೆ. ಇದರ ಜೊತೆಗೆ ಲೈಟ್ ಬಾಯ್ ನಿಂದ ಹಿಡಿದು ಎಲ್ಲರನ್ನು ತುಂಬ ಅಕ್ಕರೆಯಿಂದ ಮಾತನಾಡಿಸುತ್ತಾರಂತೆ.

ಇನ್ನು ಶಿಲ್ಪಾ ಅವರಿಗೆ ಅವಂತಿಕಾ ಎನ್ನುವ ಮಗಳು ಕೂಡ ಇದ್ದಾಳೆ. ಮಗಳು ನೋಡುವುದಕ್ಕೆ ಥೇಟ್ ಸ್ವಲ್ಪ ಶಿಲ್ಪಾ ರೀತಿಯಲ್ಲೇ ಇದ್ದಾರೆ. ಇನ್ನು ಶಿಲ್ಪಾ ಮತ್ತು ರೆಂಜಿತ್ ಅವರು ತಿರುವನಂತಪುರಂನಲ್ಲಿ ತಮ್ಮ ಕನಸಿನ ಮನೆಯನ್ನು ಕಟ್ಟಿಸಿಕೊಂಡು ಅಲ್ಲಿ ವಾಸ ಮಾಡುತ್ತಿದ್ದಾರೆ. ಇವರ ಮನೆಯ ಕೆಲ ದೃಶ್ಯಗಳನ್ನು ನೀವು ಇಲ್ಲಿ ನೋಡಬಹುದು……

Leave A Reply