Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಜಗ್ಗೇಶ್ ಅವರ ಮನೆ ನೋಡಿದ್ದೀರಾ ಮನೆಯ ಒಳಾಂಗಣ ಸೂಪರ್ ಆಗಿದೆ..!!

0

ನವರಸ ನಾಯಕ ಜಗ್ಗೇಶ್ ಅವರ ಹಾಸ್ಯವನ್ನು ನೋಡಿದರೆ ಎಂತಹ ನೋವಿನಲ್ಲಿದ್ದರೂ ನಿಜಕ್ಕೂ ಮುಖದಲ್ಲಿ ನಗು ಬರುತ್ತದೆ. ಏಕೆಂದರೆ ಇವರ ಹಾಸ್ಯದ ಪಾತ್ರಗಳು ಹಾಗೇ ಇರುತ್ತವೆ. ಇವರು ಕೇವಲ ನಟ ಮಾತ್ರವಲ್ಲ ನಿರ್ದೇಶಕ ಮತ್ತು ನಿರ್ಮಾಪಕ ಕೂಡ ಹೌದು. ಇವರು ಮಾರ್ಚ್ 17 1963 ರಂದು ಮಾಯಸಂದ್ರದಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಶಿವಲಿಂಗಪ್ಪ ಮತ್ತು ತಾಯಿಯ ಹೆಸರು ನಂಜಮ್ಮ.

ಇವರು ನಟರಾಗು ಮುನ್ನ ಸಾಕಷ್ಟು ಕಷ್ಟಗಳನ್ನು ನೋಡಿಕೊಂಡು ಬಂದಿದ್ದಾರೆ. ಒಂದು ಚಿಕ್ಕ ರೂಮಿನಲ್ಲಿ ವಾಸ ಮಾಡಿಕೊಂಡು ಅಲ್ಲಿ ಅಡುಗೆ ಮಾಡಿಕೊಳ್ಳುತ್ತಾ ಈಗ ಇಷ್ಟರ ಮಟ್ಟಿಗೆ ಬೆಳೆದಿದ್ದಾರೆ ಎಂದರೆ ಎಷ್ಟು ಕಷ್ಟಪಟ್ಟಿರಬೇಕು ಎಂದು ಗೊತ್ತಾಗುತ್ತದೆ. ಇನ್ನೂ ಜಗ್ಗೇಶ್ ಅವರು 1982 ರಂದು ಇಬ್ಬನಿ ಕರಗಿತು ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿದರು.

ಇದಾದ ಮೇಲೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಜಗ್ಗೇಶ್ ಅವರು ಸೈ ಟು ಡ್ಯಾನ್ಸ್, ಕಾಮಿಡಿ ಕಿಲಾಡಿಗಳು, ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್, ಕನ್ನಡದ ಕಣ್ಮಣಿ ಎನ್ನುವ ರಿಯಾಲಿಟಿ ಶೋಗಳಿಗೆ ಜಡ್ಜ್ ಕೂಡ ಆಗಿದ್ದಾರೆ. ಇದರ ಜೊತೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹೋಸ್ಟ್ ಕೂಡ ಮಾಡಿದ್ದಾರೆ.

ಇನ್ನು ಜಗ್ಗೇಶ್ ಅವರು 1984 ರಂದು ಪರಿಮಳ ಎಂಬುವವರನ್ನು ವಿವಾಹವಾಗಿದ್ದಾರೆ. ಇವರಿಗೆ ಯತಿರಾಜ್ ಮತ್ತು ಗುರುರಾಜ್ ಎನ್ನುವ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಹಾಗೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೋಮಲ್ ಅವರು ಜಗ್ಗೇಶ್ ಅವರಿಗೆ ಸಹೋದರ. ಇವರು ಕೂಡ ಹಾಸ್ಯ ನಟರಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಮಹಾದೇವಿ ಮತ್ತು ವಿಜಯಲಕ್ಷ್ಮಿ ಎನ್ನುವ ಸಹೋದರಿಯರು ಕೂಡ ಇದ್ದಾರೆ.

ಇನ್ನು ಜಗ್ಗೇಶ್ ಅವರು ಸಾಕಷ್ಟು ಜನರಿಗೆ ಯಾರಿಗೂ ಗೊತ್ತಿಲ್ಲದ ಹಾಗೆ ಸಹಾಯ ಕೂಡ ಮಾಡುತ್ತಾರೆ. ಹಾಗೆಯೇ ಜಗ್ಗೇಶ್ ಅವರ ಮನೆಯನ್ನು ನೀವು ಇಲ್ಲಿ ನೋಡಬಹುದು. ಜಗ್ಗೇಶ್ ಅವರ ಪತ್ನಿ ಪರಿಮಳಾ ಅವರು ಮನೆಯ ಒಳಾಂಗಣದ ಡಿಸೈನನ್ನು ಬದಲಾವಣೆ ಮಾಡಿಸಿದ್ದಾರೆ. ಅವರ ಪತ್ನಿಯ ಯೋಚನೆಯ ತಕ್ಕಂತೆ ಜಗ್ಗೇಶ್ ಅವರ ಮನೆಯ ಒಳಾಂಗಣ ಇದೆ. ಇವರ ಮನೆಯ ಕೆಲ ದೃಶ್ಯಗಳು ಇಲ್ಲಿವೆ ನೋಡಿ…..

Astro

Leave A Reply