Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಚೈತ್ರಾ ರಾಯ್ ತಮ್ಮ ಮಗಳ ಜೊತೆಗೆ ಇರುವ ತುಂಟಾಟ ವಿಡಿಯೋ..!!

0

ಚೈತ್ರಾ ರಾಯ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ರಾಧಾ ಕಲ್ಯಾಣ ಎನ್ನುವ ಧಾರಾವಾಹಿಯ ಮೂಲಕ ತುಂಬಾನೇ ಜನಪ್ರಿಯರಾದರು. ಈ ಧಾರಾವಾಹಿಯಲ್ಲಿ ಇವರು ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದು ಸಖತ್ ಫೇಮಸ್ ಆದರು. ಇನ್ನು ಚೈತ್ರಾ ರಾಯ್ ಅವರು ಮಾರ್ಚ್ 29 1990 ರಂದು ಮಂಗಳೂರಿನ ಕೂರ್ಗ್ ನಲ್ಲಿ ಜನಿಸಿದ್ದಾರೆ.

ಇವರ ತಂದೆಯ ಹೆಸರು ಬಿ.ಡಿ ವಾಸು ರಾಯ್ ಮತ್ತು ತಾಯಿಯ ಹೆಸರು ಗುಲಾಬಿ ಎಂದು. ಇವರು ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ತಮ್ಮ ಡಿಗ್ರಿ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಇನ್ನೂ 2009 ರಲ್ಲಿ ಕುಸುಮಾಂಜಲಿ ಎನ್ನುವ ಕನ್ನಡ ಧಾರಾವಾಹಿಯ ಮುಖಾಂತರ ಮೊದಲನೆಯದಾಗಿ ಕಿರುತೆರೆಗೆ ಕಾಲಿಟ್ಟರು.

ಇದಾದ ಮೇಲೆ ಬೊಂಬೆಯಾಟವಯ್ಯ, ರಾಧಾಕಲ್ಯಾಣ, ಗೆಜ್ಜೆಪೂಜೆ, ಬಣ್ಣದ ಬುಗುರಿ, ಪೌರ್ಣಮಿ, ನಾಗಮಣಿ, ಯುಗಾದಿ ಎನ್ನುವ ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

 

ಇವರು ಕೇವಲ ಕನ್ನಡ ದಾರಾವಾಹಿಗಳಲ್ಲಿ ಮಾತ್ರವಲ್ಲ ತೆಲುಗು ಧಾರಾವಾಹಿಗಳಲ್ಲೂ ಕೂಡ ನಟಿಸಿ ಅಲ್ಲೂ ಕೂಡ ಸಖತ್ ಫೇಮಸ್ ಆಗಿದ್ದಾರೆ. ಹೌದು ತೆಲುಗಿನಲ್ಲಿ ಇವರು ಅಷ್ಟ ಚಮ್ಮಾ ಎನ್ನುವ ಧಾರಾವಾಹಿಯ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟರು.

 

ಇದಾದ ಮೇಲೆ ಅಲಾ ಮೊದಲೈಯಿಂದಿ, ಅತ್ತೋ ಅತ್ತಮ್ಮ ಕೂತೂರೋ, ಮಹಾಲಕ್ಷ್ಮಿ, ಓಕರಿಕಿ ಒಕರು, ಮನಸ್ಸುನ್ನ ಮನಸೇ, ಅಕ್ಕ ಚೆಲ್ಲಲು ಎನ್ನುವ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

 

ಇನ್ನೂ ಚೈತ್ರಾ ರಾಯ್ ಅವರು ಪ್ರಸನ್ನ ಶೆಟ್ಟಿ ಅವರನ್ನು ಡಿಸೆಂಬರ್ 26 2016 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ 2021 ರಲ್ಲಿ ನಿಷ್ಕಾ ಶೆಟ್ಟಿ ಎನ್ನುವ ಮುದ್ದಾದ ಮಗಳು ಜನಿಸಿದ್ದಾಳೆ. ತನ್ನ ಮಗಳ ಜೊತೆಗೆ ಚೈತ್ರಾ ರೈ ಅವರು ಫೋಟೋಗಳು ಮತ್ತು ವಿಡಿಯೋಗಳನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ.

 

ಹೌದು ಚೈತ್ರಾ ಅವರು ತಮ್ಮ ಮಗಳ ಜೊತೆಗೆ ಕೆಲ ತುಂಟಾಟ ವಿಡಿಯೋಗಳನ್ನು ಹಾಕುತ್ತಾ ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಳ್ಳುತ್ತಾರೆ. ಇದರ ಜೊತೆಗೆ ತಮ್ಮ ಕುಟುಂಬದ ಫೋಟೋಗಳನ್ನು ಕೂಡ ಹಾಕಿಕೊಳ್ಳುತ್ತಾರೆ. ಚೈತ್ರಾ ರಾಯ್ ಮತ್ತು ತಮ್ಮ ಮುದ್ದಿನ ಮಗಳ ಕೆಲ ವೀಡಿಯೋಗಳನ್ನು ಇಲ್ಲಿ ನೀವು ನೋಡಬಹುದು…..

 

Leave A Reply