ಕನ್ನಡದ ಜನಪ್ರಿಯ ನಟ ವಿಜಯ್ ರಾಘವೇಂದ್ರ ಅವರು ಸ್ಪಂದನ ರಾಘವೇಂದ್ರ ಅವರನ್ನು ಆಗಸ್ಟ್ 26 2007 ರಂದು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಸ್ಪಂದನಾ ಅವರು ಅಸಿಸ್ಟೆಂಟ್ ಕಮೀಷನರ್ ಆಗಿರುವ ಬಿ.ಕೆ ಶಿವರಾಂ ಅವರ ಮಗಳು. ಸ್ಪಂದನ ಮತ್ತು ವಿಜಯ ರಾಘವೇಂದ್ರ ಅವರು ಇಬ್ಬರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ವಿವಾಹವಾಗಿದ್ದಾರೆ.
ಇನ್ನೂ ಸ್ಪಂದನಾ ಅವರು ತುಳು ಕುಟುಂಬಕ್ಕೆ ಸೇರಿದ್ದಾರೆ. ಹಾಗೆಯೇ ಇವರಿಗೆ ಶೌರ್ಯ ರಾಘವೇಂದ್ರ ಎನ್ನುವ ಮುದ್ದಾದ ಮಗ ಕೂಡ ಇದ್ದಾನೆ. ಇನ್ನೂ ವಿಜಯ ರಾಘವೇಂದ್ರ ಅವರ ವಿಷಯಕ್ಕೆ ಬಂದರೆ ಇವರು ಮೇ 26 1979 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಎಸ್.ಎ ಚಿನ್ನೇಗೌಡ ಮತ್ತು ತಾಯಿಯ ಹೆಸರು ಜಯಮ್ಮ.
ಇವರ ತಂದೆ ಚಿನ್ನೇಗೌಡ ಅವರು ಡಾ.ರಾಜ್ ಕುಮಾರ್ ಅವರಿಗೆ ಬಾಮೈದ ಆಗಬೇಕು. ಹಾಗಾಗಿ ಇವರು ಡಾ. ರಾಜ್ ಕುಮಾರ್ ಅವರಿಗೆ ಸಂಬಂಧಿಕರು ಆಗಬೇಕು. ಎಸ್.ಎ ಚಿನ್ನೇಗೌಡ ಅವರು ಕನ್ನಡದ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆಮ ಹಾಗೆಯೇ ವಿಜಯ ರಾಘವೇಂದ್ರ ಅವರು ಕೇವಲ 3 ವರ್ಷದ ವಯಸ್ಸಿನಲ್ಲಿದ್ದಾಗ ಚಲಿಸುವ ಮೋಡಗಳು ಚಿತ್ರದಲ್ಲಿ ಮೊದಲನೆಯದಾಗಿ ಮಾಸ್ಟರ್ ರಾಘವೇಂದ್ರ ಆಗಿ ಅಭಿನಯ ಮಾಡಿದ್ದಾರೆ.
ಈ ಚಿತ್ರವು 1982 ರಂದು ಬಿಡುಗಡೆಯಾಯಿತು. ಇದಾದ ಮೇಲೆ ಕೂಡ ಸಾಕಷ್ಟು ಚಿತ್ರಗಳಲ್ಲಿ ಬಾಲ ನಟರಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಇವರು ನಟಿಸಿದ ಚಿನ್ನಾರಿ ಮುತ್ತಾ ಸಿನಿಮಾದಿಂದ ಎಲ್ಲರೂ ಇವರನ್ನು ಬಹುತೇಕ ಚಿನ್ನಾರಿಮುತ್ತ ಎಂದೇ ಕರೆಯುತ್ತಾರೆ. ಇವರು ಸತತ 7 ಚಿತ್ರಗಳಲ್ಲಿ ಬಾಲನಟರಾಗಿ ಅಭಿನಯಿಸಿದ್ದು 2002 ರಲ್ಲಿ ನಿನಗಾಗಿ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ನೀಡಿದರು.
ತದನಂತರ ಇವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡುತ್ತಾ ಬಂದರು. ಇದರ ಜೊತೆಗೆ ಇವರು ಕೆಲ ಕನ್ನಡದ ಹಾಡುಗಳನ್ನು ಸಹ ಹಾಡಿದ್ದಾರೆ. ಹಾಗೆಯೇ ಕಿಸ್ಮತ್ ಎನ್ನುವ ಸಿನಿಮಾವನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಇನ್ನು ವಿಜಯ ರಾಘವೇಂದ್ರ.
ಅವರು ಬಿಗ್ ಬಾಸ್ ಕನ್ನಡ ಸೀಸನ್ ಒಂದರಲ್ಲಿ ಭಾಗವಹಿಸಿ ಅದರಲ್ಲಿ ವಿನ್ನರ್ ಸಹ ಆಗಿದ್ದರು. ಇದರ ಜೊತೆಗೆ ಸಾಕಷ್ಟು ರಿಯಾಲಿಟಿ ಶೋಗಳಿಗೆ ಜಡ್ಜ್ ಕೂಡ ಆಗಿದ್ದಾರೆ. ಇಲ್ಲಿ ನೀವು ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ ನಿಶ್ಚಿತಾರ್ಥ ಮತ್ತು ಮದುವೆಯ ಕೆಲ ಸುಂದರ ಕ್ಷಣಗಳನ್ನು ನೋಡಬಹುದು…..