ಸಿನಿಮಾ ರಂಗ ಎಂದರೇ ಅದು ಒಂದು ರಾತ್ರಿಯಲ್ಲೇ ಸಾಮಾನ್ಯ ವ್ಯಕ್ತಿಯನ್ನು ಸ್ಟಾರ್ ಕಲಾವಿದರಾಗಿ ಮಾಡುತ್ತದೆ ಹಾಗೆಯೇ ಒಂದು ರಾತ್ರಿಯಲ್ಲೇ ಕಲಾವಿದರನ್ನು ಕೂಡ ಸಾಮಾನ್ಯ ವ್ಯಕ್ತಿಯಂತೆ ಮಾಡುತ್ತಾರೆ. ಇನ್ನು ಇದರಂತೆಯೇ ಕೆಲ ಸ್ಟಾರ್ ನಟಿಯರು ಸಿನಿಮಾಗಳಲ್ಲಿ ಮಿಂಚಿ ಈಗ ಟೀಚರ್ ಕೆಲಸ ಮಾಡುತ್ತಿದ್ದಾರೆ.
ಇವರು ಈಗ ತುಂಬ ಸಾಮಾನ್ಯ ವ್ಯಕ್ತಿಗಳಂತೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮ ಜೀವನ ಹೀಗೆ ಆಯಿತು ಎಂದು ಕೊರಗದೆ ಛಲದಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಅಂತಹ ನಟಿಯರು ಯಾರು ಎಂದು ಇಲ್ಲಿ ನೋಡೋಣ ಬನ್ನಿ..
ನಟಿ ದೇವಯಾನಿ ಅವರು ಜೂನ್ 22 1974 ರಂದು ಮುಂಬೈನಲ್ಲಿ ಜನಿಸಿದರು. ಇವರು ತಮಿಳು ಮಲಯಾಳಂ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಇವರು 1993 ರಲ್ಲಿ ಬೆಂಗಾಲಿಯಲ್ಲಿ ಶಾಟ್ ಪೂಂಚೊಂಮಿ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು.
ಹಾಗೆಯೇ ನಮ್ಮ ಕನ್ನಡದಲ್ಲಿ 1999 ರಲ್ಲಿ ಪ್ರೇಮ ಸಾಗರ ಚಿತ್ರದಲ್ಲಿ ಮೊದಲನೆಯದಾಗಿ ಸ್ಯಾಂಡಲ್ ವುಡ್ ನಲ್ಲಿ ನಟಿಸಿದ್ದಾರೆ ಮತ್ತು 2021 ರಲ್ಲಿ ಬಿಡುಗಡೆಯಾದ ಮದಗಜ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. ಹಾಗೆ ಇವರು ತಮಿಳಿನ ಕೆಲ ಧಾರಾವಾಹಿಗಳಲ್ಲೂ ಕೂಡ ಅಭಿನಯಿಸಿದ್ದಾರೆ.
ದೇವಯಾನಿ ಅವರು 2001 ರಲ್ಲಿ ನಿರ್ದೇಶಕ ರಾಜಕುಮಾರ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ದೇವಯಾನಿ ಅವರಿಗೆ ಮದುವೆಯಾದ ಮೇಲೆ ಅವಕಾಶಗಳು ಅಷ್ಟಾಗಿ ಬರಲಿಲ್ಲ. ಇದರ ಜೊತೆಗೆ ರಾಜಕುಮಾರನ್ ಅವರಿಗೂ ಕೂಡ ನಿರ್ದೇಶನದಲ್ಲಿ ಅಷ್ಟಾಗಿ ಕೈ ಹಿಡಿಯಲಿಲ್ಲ.
ಇದರಿಂದ ಇವರಿಗೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿದ್ದು ತದನಂತರ ದೇವಯಾನಿ ಅವರು ಚೆನ್ನೈನಲ್ಲಿ ಚರ್ಚ್ ಪಾರ್ಕ್ ಸ್ಕೂಲ್ ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಶೋಭನ ಅವರು ಮಾರ್ಚ್ 21 1970 ರಂದು ತಿರುವನಂತಪುರಂನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಚಂದ್ರ ಕುಮಾರ್ ಪಿಳ್ಳೈ ಮತ್ತು ತಾಯಿಯ ಹೆಸರು ಆನಂದಂ ಪಿಳ್ಳೈ. ಶೋಭನ ಅವರು ಬಾಲ್ಯ ವಯಸ್ಸಿನಲ್ಲಿ ಇದ್ದಾಗಲೇ ಒಳ್ಳೆಯ ಭರತನಾಟ್ಯಂ ನೃತ್ಯಗಾರ್ತಿ. ಇವರು ತೆಲುಗು ಮತ್ತು ತಮಿಳಿನ ಜೊತೆಗೆ ಕೆಲ ಹಿಂದಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಶೋಭನಾ ಅವರು ಚೆನ್ನೈನಲ್ಲಿ ತಮ್ಮದೇ ಆದ ಸ್ವಂತ ಡ್ಯಾನ್ಸ್ ಶಾಲೆಯನ್ನು ನಡೆಸುತ್ತಿದ್ದಾರೆ.
ನಂದಿತಾ ದಾಸ್ ಅವರು ನವೆಂಬರ್ 7 1969 ರಂದು ಮುಂಬೈನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಜಟಿನ್ ದಾಸ್ ಮತ್ತು ತಾಯಿಯ ಹೆಸರು ವರ್ಷ ದಾಸ್. ನಂದಿತಾ ದಾಸ್ ಅವರು ಸುಮಾರು ಹತ್ತು ವಿವಿಧ ಭಾಷೆಗಳಲ್ಲಿ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ನಂದಿತಾ ದಾಸ್ ಅವರಿಗೆ ಶಿಕ್ಷಕಿಯಾಗಿ ಕೂಡ ಕೆಲಸ ಮಾಡುತ್ತಿದ್ದಾರೆ ಜೊತೆಗೆ ನಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ…..