Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಚಿಕ್ಕ ವಯಸ್ಸಿನಲ್ಲೇ ನಟನೆ ಪ್ರಾರಂಭಿಸಿ ಇಂದು ಸ್ಟಾರ್ ಆರ್ಟಿಸ್ಟ್ ಗಳಾಗಿ ಮಿಂಚಿದ ಕಲಾವಿದರು..!! ಮೊದಲ ಬಾರಿಗೆ ಇಲ್ಲಿದ್ದಾರೆ ನೋಡಿ!

0

ಕನ್ನಡ ಇಂಡಸ್ಟ್ರಿಯ ಕನಸಿನ ರಾಣಿ ಮಾಲಾಶ್ರೀ ಅವರು ಮೊದಲು ತಮ್ಮ ಸಿನಿಮಾ ಕೆರಿಯರ್ ಅನ್ನು ತಮಿಳಿನ ನೀಲಾ ಮಲರ್ಗಲ್ ಎನ್ನುವ ಚಿತ್ರದ ಮೂಲಕ ಶುರು ಮಾಡಿಕೊಂಡರು. ಈ ಚಿತ್ರದಲ್ಲಿ ಮಾಲಾಶ್ರೀ ಅವರು ಬಾಲನಟಿಯಾಗಿ ಚಿಕ್ಕ ಹುಡುಗನ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ತದನಂತರ ತೆಲುಗಿನಲ್ಲಿ 3 ಸಿನಿಮಾಗಳು ಮತ್ತು ತಮಿಳಿನಲ್ಲಿ 3 ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ.

ಇನ್ನು ನಾಯಕಿಯಾಗಿ ನೋಡಿದರೆ ಮಾಲಾಶ್ರೀಯವರು ರಾಘವೇಂದ್ರ ರಾಜ್ ಕುಮಾರ್ ಅವರ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ನಾಯಕಿ ನಟಿಯಾಗಿ ಕಾಣಿಸಿಕೊಂಡರು. ಹೀಗೆ ಮಾಲಾಶ್ರೀ ಅವರು ತಮಿಳು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸುಮಾರು 90 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್ ಅವರು ಬಾಲ ನಟಿಯಾಗಿ ಮೊದಲು ಹಾಲಿವುಡ್ ನ ದಿ ಮಂಕಿ ಹೂ ನ್ಯೂ ಟೂ ಮಚ್ ಎನ್ನುವ ಚಿತ್ರದಲ್ಲಿ ಮೊದಲನೆಯದಾಗಿ ಕಾಣಿಸಿಕೊಂಡರು. ಇದಾದ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಸಹಾಯಕ ನಟಿಯಾಗಿ 7 ಓ ಕ್ಲಾಕ್ ಚಿತ್ರದಲ್ಲಿ ಅಭಿನಯಿಸಿದ್ದು ತದನಂತರ ಮಲಯಾಳಂನಲ್ಲಿ ಆಕಾಶಂ ಗೋಪುರಂ ಎನ್ನುವ ಚಿತ್ರದ ಮೂಲಕ ನಾಯಕ ನಟಿಯಾಗಿ ಕಾಣಿಸಿಕೊಂಡರು. ಹೀಗೆ ನಿತ್ಯಾ ಮೆನನ್ ಅವರು ಕನ್ನಡ ತಮಿಳು ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಸುಮಾರು 50 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ನಟ ಸುನೀಲ್ ರಾವ್ ಅವರು ಏಳು ಸುತ್ತಿನ ಕೋಟೆ ಎನ್ನುವ ಕನ್ನಡ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಂಡು ಸುಮಾರು 8 ಕನ್ನಡ ಚಿತ್ರಗಳಲ್ಲಿ ಬಾಲನಟರಾಗಿ ಅಭಿನಯಿಸಿದ್ದಾರೆ. ಇದಾದ ಮೇಲೆ ನಾಯಕನ ಪಾತ್ರದಲ್ಲಿ ಎಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ತೆರೆಯ ಮೇಲೆ ಎಂಟ್ರಿ ಕೊಟ್ಟರು.

ಕನ್ನಡದ ಖ್ಯಾತ ನಟಿ ಸುಧಾರಾಣಿ ಅವರು ರಂಗನಾಯಕಿ ಚಿತ್ರದಲ್ಲಿ ಆರತಿ ಅವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ನಟಿಸಿದ್ದು ಕನ್ನಡದಲ್ಲಿ ಸುಮಾರು 6 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಇದಾದ ಮೇಲೆ ಶಿವರಾಜಕುಮಾರ್ ಅವರ ಜೊತೆಗೆ ಆನಂದ್ ಚಿತ್ರದ ಮೂಲಕ ಹೀರೋಯಿನ್ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು.

ಸ್ಯಾಂಡಲ್ ವುಡ್ ಕ್ವೀನ್ ಅಮೂಲ್ಯ ಅವರು ವಿಷ್ಣುವರ್ಧನ್ ಅವರ ಅಭಿನಯದ ಪರ್ವ ಚಿತ್ರದ ಮೂಲಕ ಬಾಲ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದಾದ ಮೇಲೆ ಸುಮಾರು 11 ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡರು.

ಕನ್ನಡದ ಜನಪ್ರಿಯ ನಟ ವಿಜಯ ರಾಘವೇಂದ್ರ ಅವರು ಚಲಿಸುವ ಮೋಡಗಳು ಮತ್ತು ಪರುಶರಾಮ ಚಿತ್ರಗಳಲ್ಲಿ ಬಾಲನಟರಾಗಿ ನಟಿಸಿದ್ದಾರೆ. ಇದಾದ ಮೇಲೆ ನಿನಗಾಗಿ ಚಿತ್ರದ ಮೂಲಕ ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಸಿಂಹದ ಮರಿ ಸೈನ್ಯ ಎನ್ನುವ ಚಿತ್ರದ ಮೂಲಕ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಇದಾದ ಮೇಲೆ ಹೀರೋ ಆಗಿ ಪ್ರೇಮದ ಜ್ಯೋತಿ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಇವರು ಮೊತ್ತ ಎಲ್ಲಾ ಭಾಷೆಗಳಲ್ಲಿ ಸುಮಾರು 150 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ದಿವಂಗತ ಪುನೀತ್ ರಾಜ್ ಕುಮಾರ್ ಅವರು ಪ್ರೇಮದ ಕಾಣಿಕೆ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಂಡ ಸುಮಾರು 14 ಚಿತ್ರಗಳಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟನೆ ಮಾಡಿದ್ದಾರೆ. ಇದಾದ ಮೇಲೆ ಅಪ್ಪು ಚಿತ್ರದ ಮೂಲಕ ಪುನೀತ್ ಅವರು ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು…..

Leave A Reply