ನಟಿ ಮಂಜುಳಾ ಅವರು ನವಂಬರ್ 8 1954 ರಂದು ತುಮಕೂರಿನಲ್ಲಿ ಜನಿಸಿದ್ದರು. ಇವರು ಕನ್ನಡದಲ್ಲಿ ಅಲ್ಲದೆ ತಮಿಳು ಮತ್ತು ತೆಲುಗಿನಲ್ಲಿ ಸೇರಿ ಸುಮಾರು 100 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರು ಸೆಪ್ಟೆಂಬರ್ 12 1986 ರಂದು ಕೇವಲ 22 ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಆಕಸ್ಮಿಕ ಬೆಂಕಿಯ ಅಪಘಾತದಲ್ಲಿ ಸಾವನ್ನಪ್ಪಿದರು.
ಕಲ್ಪನಾ ಅವರು ಕನ್ನಡ ಅಲ್ಲದೆ ಪರಭಾಷೆಗಳಲ್ಲೂ ಕೂಡ ಅಭಿನಯಿಸಿದ್ದಾರೆ. ಇವರು ಜುಲೈ 18 1943 ರಂದು ಜನಿಸಿದರು. ಇವರು ಮೇ 12 1979 ರಂದು ಕೇವಲ 36 ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಮರಣ ಹೊಂದಿದರು.
ಮೋನಾಲ್ ಅವರು ದಕ್ಷಿಣ ಭಾರತದ ಖ್ಯಾತ ನಟಿ ಸಿಮ್ರಾನ್ ಅವರಿಗೆ ತಂಗಿಯಾಗಬೇಕು. ಇವರು ಜನವರಿ 26 1981 ರಂದು ಜನಿಸಿದ್ದರು. ಇನ್ನು ಇವರು ಏಪ್ರಿಲ್ 14 2002 ರಂದು ಕೇವಲ 21 ವರ್ಷದ ವಯಸ್ಸಿನಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರು.
ಸಾವಿತ್ರಿ ಅವರು ಪಂಚ ಭಾಷೆಯ ನಟಿಯಾಗಿದ್ದು ಇವರು ಡಿಸೆಂಬರ್ 6 1936 ರಂದು ಜನಿಸಿದ್ದರು. ಇವರು ಡಿಸೆಂಬರ್ 26 1981 ರಂದು ಅನಾರೋಗ್ಯ ಸಮಸ್ಯೆಗಳಿಂದ 46 ವಯಸ್ಸಿನಲ್ಲಿದ್ದಾಗಲೇ ಮರಣ ಹೊಂದಿದರು.
ನಿವೇದಿತಾ ಜೈನ್ ಅವರು ಜೂನ್ 9 1979 ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇವರು ಜೂನ್ 10 1998 ರಂದು ಮಹಡಿಯ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದು ಕೇವಲ 19 ವಯಸ್ಸಿನಲ್ಲಿ ಇದ್ದಾಗಲೇ ಸಾವನ್ನಪ್ಪಿದರು.
ರೇಖಾ ಸಿಂಧು ಅವರು ಸಾಕಷ್ಟು ಕನ್ನಡ ಮತ್ತು ತಮಿಳು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಇದರ ಜೊತೆಗೆ ಇವರು ನಟಿ ಮತ್ತು ಮಾಡೆಲ್ ಕೂಡ ಹೌದು. ಇವರು ಬೆಂಗಳೂರು ಮತ್ತು ಚೆನ್ನೈ ಹೈವೇನಲ್ಲಿ ಕಾರಿನ ಅಪಘಾತದಲ್ಲಿ ಮೇ 5 2017 ರಂದು ಕೇವಲ 23 ವಯಸ್ಸಿನಲ್ಲಿದ್ದಾಗಲೇ ಮರಣ ಹೊಂದಿದರು.
ಸಿಲ್ಕ್ ಸ್ಮಿತಾ ಅವರು ಡಿಸೆಂಬರ್ 2 1960 ರಂದು ಜನಿಸಿದ್ದರು. ಇವರು ಸೆಪ್ಟೆಂಬರ್ 23 1996 ರಂದು 36 ವಯಸ್ಸಿನಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರು.
ರಚನಾ ಅವರು 1994 ರಲ್ಲಿ ಜನಿಸಿದ್ದರು. ಇವರು ಕೂಡ ರಸ್ತೆಯ ಅಪಘಾತದಲ್ಲಿ ಆಗಸ್ಟ್ 24 2017 ರಂದು 23 ವಯಸ್ಸಿನಲ್ಲಿದ್ದಾಗಲೇ ಮರಣ ಹೊಂದಿದರು.
ಶೋಭಾ ಅವರು ಸೆಪ್ಟೆಂಬರ್ 26 1962 ರಂದು ಜನಿಸಿದ್ದರು. ಇವರು ಮೇ 1 1980 ರಂದು ಆತ್ಮಹತ್ಯೆ ಮಾಡಿಕೊಂಡು 18 ವಯಸ್ಸಿನಲ್ಲಿದ್ದಾಗಲೇ ಮರಣ ಹೊಂದಿದರು.
ಜಯಶ್ರೀ ರಾಮಯ್ಯ ಅವರು ಬಿಗ್ ಬಾಸ್ ಕನ್ನಡ ಸೀಸನ್ ಮೂರರಲ್ಲಿ ಕಂಟೆಸ್ಟೆಂಟ್ ಆಗಿ ಮನೆಗೆ ಪ್ರವೇಶ ಮಾಡಿ ಭಾಗವಹಿಸಿದ್ದರು. ಇವರು ಜನವರಿ 25 2021 ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು 30 ವಯಸ್ಸಿನಲ್ಲಿದ್ದಾಗಲೇ ಸಾವನ್ನಪ್ಪಿದರು.
ಮೊನಿಷಾ ಉನ್ನಿ ಅವರು ಜನವರಿ 24 1971 ರಂದು ಜನಿಸಿದ್ದರು. ಇವರು ಡಿಸೆಂಬರ್ 5 1992 ರಂದು 22 ವಯಸ್ಸಿನಲ್ಲಿದ್ದಾಗಲೇ ಸಾವನ್ನಪ್ಪಿದರು.
ಚಂದನ ಅವರು ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಇವರು 29 ವಯಸ್ಸಿನಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡು ಮರಣ ಹೊಂದಿದರು.
ಪ್ರತ್ಯೂಷಾ ಅವರು ಆಗಸ್ಟ್ 29 1981 ರಂದು ಜನಿಸಿದ್ದರು. ಇವರು ಫೆಬ್ರವರಿ 23 2002 ರಂದು ಆತ್ಮಹತ್ಯೆ ಮಾಡಿಕೊಂಡು ಕೇವಲ 20 ವಯಸ್ಸಿನಲ್ಲಿದ್ದಾಗಲೇ ಸಾವನ್ನಪ್ಪಿದರು.
ಹೇಮಶ್ರೀ ಅವರು 1982 ರಲ್ಲಿ ಜನಿಸಿದ್ದರು. ಇವರು ಅಕ್ಟೋಬರ್ 9 2012 ರಂದು ಅಂದರೆ 29 ವಯಸ್ಸಿನಲ್ಲಿದ್ದಾಗಲೇ ಸಾವನ್ನಪ್ಪಿದರು. ಆದರೆ ಇವರದ್ದು ನಿಗೂಢ ಸಾವು ಎಂದು ಹೇಳಲಾಗಿದೆ.
ಮೆಬೀನಾ ಮೈಕೆಲ್ ಅವರು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ ನಾಲ್ಕರಲ್ಲಿ ಭಾಗವಹಿಸಿದ್ದರು.ಇವರಿಗೂ ಕೂಡ ರಸ್ತೆಯ ಕಾರಿನ ಅಪಘಾತದಿಂದ ಕೇವಲ 22 ವಯಸ್ಸಿನಲ್ಲಿದ್ದಾಗಲೇ ಮರಣ ಹೊಂದಿದರು.
ಸೌಂದರ್ಯ ಅವರು ಜುಲೈ 18 1972 ರಂದು ಜನಿಸಿದ್ದರು. ಇವರು ಏಪ್ರಿಲ್ 17 2004 ರಂದು ವಿಮಾನ ಅಪಘಾತದಲ್ಲಿ 31 ವರ್ಷ ವಯಸ್ಸಿನಲ್ಲಿದ್ದಾಗಲೇ ಮರಣ ಹೊಂದಿದರು……