ಕನ್ನಡ ಚಿತ್ರರಂಗದ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದ ರಘುವೀರ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ. ಇವರು 1990 ರಲ್ಲಿ ಬಿಡುಗಡೆಯಾದ ಅಜಯ್ ವಿಜಯ್ ಇನ್ನು ಚಿತ್ರದ ಮೂಲಕ ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇನ್ನು ರಘುವೀರ್ ಅವರು ಕೇವಲ ನಟ ಮಾತ್ರ ಅಲ್ಲ ಇವರು ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.
ಹೌದು ಚೈತ್ರದ ಪ್ರೇಮಾಂಜಲಿ ಸಿನಿಮಾ 1992 ರಲ್ಲಿ ಬಿಡುಗಡೆಯಾಯಿತು. ಇನ್ನು ಈ ಚಿತ್ರವು ಆಗ ಸೂಪರ್ ಡೂಪರ್ ಹಿಟ್ ಸಾಧಿಸಿತು ಎಂದು ಹೇಳಬಹುದು. ಹಾಗೆ ಈ ಸಿನಿಮಾದಲ್ಲಿ ಇರುವ ಎಲ್ಲಾ ಹಾಡುಗಳು ಕೂಡ ತುಂಬಾನೇ ಚೆನ್ನಾಗಿದೆ. ತದನಂತರ ಮೌನ ಹೋರಾಟ, ಶೃಂಗಾರ ಕಾವ್ಯ, ತುಂಗಭದ್ರಾ, ಕಾವೇರಿ ತೀರದಲ್ಲಿ, ನವಿಲೂರ ನೈದಿಲೆ ಹೀಗೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇನ್ನು ರಘುವೀರ್ ಅವರು ಮೇ 17 1963 ರಲ್ಲಿ ರಂದು ಜನಿಸಿದ್ದರು. ಹಾಗೆ ಇವರು ಕೆಲ ಅನಾರೋಗ್ಯ ಸಮಸ್ಯೆಗಳಿಂದ ಕೇವಲ 51 ವರ್ಷಕ್ಕೆ ಅಂದರೆ ಮೇ 8 2014 ರಂದು ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದರು. ಇನ್ನು ಇವರು ಸಿಂಧು ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದರು. ಹಾಗೆ ಇವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ.
ಇನ್ನು ಇವರ ಮಗಳಾಗಿರುವ ಶ್ರೇಯಾ ಅವರು ಈಗ ಕನ್ನಡಿಗರ ಮುಂದೆ ಬಂದಿದ್ದಾರೆ. ಹೌದು ರಘುವೀರ್ ಅವರು ಶೃಂಗಾರ ಕಾವ್ಯ ಸಿನಿಮಾಸ ನಟಿ ಸಿಂಧೂ ಅವರ ಜೊತೆ ಪ್ರೀತಿಯಲ್ಲಿ ಬಿದ್ದು 1995 ರಲ್ಲಿ ವಿವಾಹವಾದರು. 10 ವರ್ಷಗಳ ಕಾಲ ಇವರ ದಾಂಪತ್ಯ ಜೀವನವು ತುಂಬಾನೇ ಸೊಗಸಾಗಿತ್ತು. ಆದರೆ ದುರದೃಷ್ಟವಶಾತ್ ಸಿಂಧು ಅವರು ಅನಾರೋಗ್ಯದಿಂದ ನಿಧನರಾದರು.
ನಂತರ ತಮ್ಮ ಸಂಬಂಧಿಕರೇ ಆಗಿದ್ದ ಗೌರಿ ಅವರನ್ನು ರಘುವೀರ್ ಅವರು ಎರಡನೆಯ ಮದುವೆಯಾದರು. ಇನ್ನು ತಾಯಿಯ ಅಗಲಿಕೆ ನಂತರ ಶ್ರೇಯಾ ಅವರು ತಮ್ಮ ಅಜ್ಜಿಯ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಈಗ ಶ್ರೇಯ ರಘುವೀರ್ ಅವರು ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಸಹಜವಾಗಿ ಎಲ್ಲಾ ಕನ್ನಡ ಅಭಿಮಾನಿಗಳಿಗೂ ಕಾಡುತ್ತಿರುತ್ತದೆ.
ಶ್ರೇಯಾ ಅವರು ಚಿಕ್ಕ ವಯಸ್ಸಿನಿಂದಲೂ ತಮ್ಮ ಅಜ್ಜ ಅಜ್ಜಿಯ ಮನೆಯಲ್ಲಿ ಅಂದರೆ ಚೆನ್ನೈನಲ್ಲಿ ಇದ್ದರು. ಇನ್ನು ಕೆಲ ಸಮಯದಲ್ಲಿ ಮಾತ್ರ ಬೆಂಗಳೂರಿನಲ್ಲಿ ಇದ್ದರು. ಇವರು ಚೆನ್ನೈನಲ್ಲಿ ತಮ್ಮ ಶಾಲೆಯ ಶಿಕ್ಷಣವನ್ನು ಮುಗಿಸಿ ನಂತರ ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಓದಿ ರೆಹಮಾನ್ ಅವರ ಮ್ಯೂಸಿಕ್ ಕಾಲೇಜಿನಲ್ಲಿ ಕೆಲಸ ಸಹ ಮಾಡಿದ್ದರು.
ಇನ್ನೂ ಶ್ರೇಯಾ ಅವರು ತಮಿಳು ಇಂಡಸ್ಟ್ರಿಯ ಯುವ ನಿರ್ದೇಶಕರಾಗಿರುವ ಅಶ್ವಿನ್ ಅವರ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಈ ದಂಪತಿಗೆ ಒಂದು ಮಗು ಸಹ ಇದೆ. ಇವರಿಬ್ಬರದು ಪ್ರೇಮ ವಿವಾಹ ಆಗಿದ್ದು ಶ್ರೇಯ ಕುಟುಂಬಕ್ಕೆ ಮೊದಲಿನಿಂದಲೂ ಅಶ್ವಿನ್ ಅವರು ಪರಿಚಯರಾಗಿದ್ದರು……