Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಯ ಒಳಾಂಗಣ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ಇಲ್ಲಿದೆ ನೋಡಿ!!

0

ಕನ್ನಡದ ಫೇಮಸ್ ಸ್ಟಾರ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಜುಲೈ 2 1980 ರಂದು ನೆಲಮಂಗಲದಲ್ಲಿ ಜನಿಸಿದ್ದಾರೆ. ಇವರ ತಂದೆ ಹೆಸರು ಕಿಶನ್ ಬಾಲ್ ಮತ್ತು ತಾಯಿಯ ಹೆಸರು ಸುಲೋಚನಾ ಬಾಲ್ ಎಂದು. ಇವರಿಗೆ ಮಹೇಶ್ ಮತ್ತು ಉಮೇಶ್ ಎನ್ನುವ ಇಬ್ಬರು ಸಹೋದರರು ಕೂಡ ಇದ್ದಾರೆ. ಇದರಲ್ಲಿ ಮಹೇಶ್ ಅವರು ಕೂಡ ನಮಕ್ ಹರಾಮ್ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನು ಗಣೇಶ್ ಅವರು ನೆಲಮಂಗಲದ ಬಸವೇಶ್ವರ ಇಂಗ್ಲಿಷ್ ಸ್ಕೂಲ್ ನಲ್ಲಿ ತಮ್ಮ ಶಾಲೆಯ ಶಿಕ್ಷಣವನ್ನು ಮುಗಿಸಿದ್ದಾರೆ. ಇವರು ಕಾಲೇಜಿನಲ್ಲಿ ಓದುತ್ತಿರುವ ಸಮಯದಲ್ಲಿ ಸಾಕಷ್ಟು ಡ್ರಾಮಾ ಗಳನ್ನು ಮಾಡುತ್ತಿದ್ದರು. ಇನ್ನು ಇವರು ಎಲೆಕ್ಟ್ರಾನಿಕ್ಸ್ ಅಲ್ಲಿ ಡಿಪ್ಲೊಮೋ ಪದವಿಯನ್ನು ಮಾಡಿ ಮುಗಿಸಿದ್ದಾರೆ.

ತದನಂತರ ಇವರಿಗೆ ನಟನೆಯಲ್ಲಿ ತುಂಬಾ ಆಸಕ್ತಿ ಇದ್ದ ಕಾರಣ ರಂಗಸಂಪದ ಮತ್ತು ರಂಗ ಶಿಕ್ಷಣ ಕೇಂದ್ರ ಎನ್ನುವ ಥಿಯೇಟರ್ ಸಂಸ್ಥೆಗೆ ಸೇರಿ ಅಲ್ಲಿ ಸದಾರಮೆ ಕಾಡದ ನೀರು ಹೀಗೆ ಸಾಕಷ್ಟು ಡ್ರಾಮಾಗಳಲ್ಲಿ ನಟಿಸಿದ್ದಾರೆ. ಗಣೇಶ್ ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ಇವರು ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತದನಂತರ ಉದಯ ಟಿವಿ ವಾಹಿನಿಯಲ್ಲಿ ಜನಪ್ರಿಯ ಶೋ ಆಗಿದ್ದ ಕಾಮಿಡಿ ಟೈಮ್ ಎನ್ನುವ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು.

ಇದಾದ ಮೇಲೆ ನಿರ್ದೇಶಕರಾದ ಬಿಸುರೇಶ ಅವರು 2002 ರಲ್ಲಿ ಬಿಡುಗಡೆಯಾಗಿದ್ದ ಟಪೋರಿ ಚಿತ್ರದಲ್ಲಿ ಗಣೇಶ್ ಅವರಿಗೆ ವಿಲನ್ ಪಾತ್ರದಲ್ಲಿ ನಟಿಸುವುದಕ್ಕೆ ಅವಕಾಶ ಕೊಟ್ಟರು. ತದನಂತರ ಇನ್ನೂ ಕೆಲ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿ 2006 ರಲ್ಲಿ ಚೆಲ್ಲಾಟ ಚಿತ್ರದ ಮೂಲಕ ಇವರು ನಾಯಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ತದನಂತರ ಬಂದ ಮುಂಗಾರು ಮಳೆ ಚಿತ್ರವು ಸೂಪರ್ ಡೂಪರ್ ಹಿಟ್ ಕೂಡ ಆಯಿತು.

ಇದಾದ ಮೇಲೆ ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ, ಅರಮನೆ, ಬೊಂಬಾಟ್, ಸಂಗಮ, ಸರ್ಕಸ್, ಮಳೆಯಲಿ ಜೊತೆಯಲಿ, ಖುಷಿಖುಷಿಯಾಗಿ, ಮುಂಗಾರು ಮಳೆ 2, ಸುಂದರಾಂಗ ಜಾಣ, ಪಟಾಕಿ ಹೀಗೆ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರ ತ್ರಿಬಲ್ ರೈಡಿಂಗ್, ಗಾಳಿಪಟ 2, ದಿ ಸ್ಟೋರಿ ಆಫ್ ರಾಯಗಡ ಚಿತ್ರಗಳು ಇನ್ನೂ ತೆರೆಯ ಮೇಲೆ ಬರಲು ಕಾಯುತ್ತಿವೆ.

ಹಾಗೆಯೇ ಇದರ ಜೊತೆಗೆ ಸೂಪರ್ ಮಿನಿಟ್ ಎನ್ನುವ ಕಾರ್ಯಕ್ರಮವನ್ನು ಕೂಡ ನಿರೂಪಣೆ ಮಾಡಿದ್ದರು. ಪ್ರಸ್ತುತ ಗಣೇಶ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಇನ್ನೂ ಗಣೇಶ್ ಅವರು 2008 ರಲ್ಲಿ ಶಿಲ್ಪಾ ಗಣೇಶ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.

ಇವರಿಗೆ ಚಾರಿತ್ರ್ಯ ಗಣೇಶ್ ಮತ್ತು ವಿಹಾನ್ ಗಣೇಶ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇಲ್ಲಿ ನೀವು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಯ ಒಳಾಂಗಣ ಹೇಗಿದೆ ಎಂದು ನೋಡಬಹುದು…..

Leave A Reply