ಸುಬ್ರಹ್ಮಣ್ಯ ಅವರು ಕಳೆದ ವರ್ಷ 12 ಆಗಸ್ಟ್ 2021 ರಲ್ಲಿ ಕೃತಿಕಾ ಎನ್ನುವವರನ್ನು ವಿವಾಹ ಮಾಡಿಕೊಂಡರು. ಈಗ ಇವರ ಪತ್ನಿ ಗರ್ಭಿಣಿಯಾಗಿದ್ದು ಬಂಧುಮಿತ್ರರು ಸ್ನೇಹಿತರು ಸೇರಿ ಕೃತಿಕಾ ಅವರಿಗೆ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ. ಇದರ ಕೆಲ ದೃಶ್ಯಗಳನ್ನು ನೀವು ಇಲ್ಲಿ ನೋಡಬಹುದು.
ಇನ್ನೂ ಹೇಮಂತ್ ಅವರು ದೊಡ್ಡ ಗಾಯಕರಾಗಿದ್ದು ಇವರ ತಂದೆಯ ಹೆಸರು ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ತಾಯಿಯ ಹೆಸರು ರತ್ನ ಶಾಸ್ತ್ರಿ. ಇವರ ತಂದೆ ರಿಟೈರ್ಡ್ ಎಕನಾಮಿಕ್ಸ್ ಪ್ರೊಫೆಸರ್ ಆಗಿದ್ದರೆ ತಾಯಿ ಕ್ಲಾಸಿಕಲ್ ಸಿಂಗರ್ ಆಗಿದ್ದಾರೆ. ಇನ್ನೂ ಇವರಿಗೆ ಚೇತನಾ ಕಷ್ಟ ಎನ್ನುವ ಸಹೋದರಿ ಕೂಡ ಇದ್ದಾರೆ.
ಹೇಮಂತ್ ಅವರಿಗೆ ಈಗ 38 ವರ್ಷಗಳಾಗಿದ್ದು ಬೆಂಗಳೂರಿನ ಲೋಕಲ್ ಪ್ರೈವೇಟ್ ಶಾಲೆಯಲ್ಲಿ ತಮ್ಮ ಶಾಲೆಯ ಶಿಕ್ಷಣವನ್ನು ಮುಗಿಸಿದ್ದಾರೆ ಮತ್ತು ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಹಾಗೆಯೇ ಹೇಮಂತ್ ಅವರು ಆರ್ ಕೆ ಶ್ರೀಕಂಠನ್ ಅವರ ಬಳಿ ಕರ್ನಾಟಿಕ್ ಕ್ಲಾಸಿಕಲ್ ಮ್ಯೂಸಿಕ್ ಅನ್ನು ಕಲಿತುಕೊಂಡಿದ್ದಾರೆ.
ಹೇಮಂತ್ ಅವರು 1998 ರಲ್ಲಿ ವಿ ಮನೋಹರ್ ಅವರ ಸಂಗೀತ ನಿರ್ದೇಶನದ ಮಿಸ್ಟರ್ ಪುಟ್ಟಸ್ವಾಮಿ ಎನ್ನುವ ಕನ್ನಡ ಚಿತ್ರದಲ್ಲಿ ಬಾ ಬಾರೇ ಮತ್ತು ಯಾರವಳು ಯಾರವಳು ಎನ್ನುವ ಹಾಡುಗಳನ್ನು ಹಾಡಿ ತಮ್ಮ ಗಾಯನವನ್ನು ಶುರು ಮಾಡಿಕೊಂಡರು.
ತದನಂತರ ಪ್ರೀತ್ಸೆ ಪ್ರೀತ್ಸೆ, ಚಕೋರಿ ಚಕೋರಿ, ಧರ್ಮ ಜ್ಯೋತಿ ಮಂಗಳ ಶ್ಲೋಕ, ಓಂ ಅಕ್ಷರಾಯ ನಮಃ, ಬಕರಾ ಬಕರಾ, ಪ್ರಾಬ್ಲಂ ಪ್ರಾಬ್ಲಂ, ಡೇಂಜರ್, ಹೇ ಬೆಳದಿಂಗಳೇ, ಸುವ್ವಿ ಸುವ್ವಾಲಿ, ಭೂಮಿ ಈ ಭೂಮಿ ಮೇಲೆ, ಲವಕುಶ, ಪಂಚರಂಗಿ ಹಾಡುಗಳು, ಜೂನಿಯರ್ ದೇವದಾಸ, ಗಂಡುಮೆಟ್ಟಿದ, ಗೆಲ್ಲುವೆ ಗೆಲ್ಲುವೆ, ಕಬಡ್ಡಿ ಕಬಡ್ಡಿ ಇನ್ನೂ ಸಾಕಷ್ಟು ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ.
ಇನ್ನೂ ಇವರಿಗೆ ಜನಪದ ಹಾಡಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಕಲ್ಲರಳಿ ಹೂವಾಗಿ ಹಾಡಿಗೆ ಫಿಲ್ಮ್ ಫೇರ್ ಅವಾರ್ಡ್ ಪ್ರಶಸ್ತಿ, ಸುವ್ವಿ ಸುವ್ವಾಲಿ ಹಾಡಿಗೆ ಕರ್ನಾಟಕ ಚಿತ್ರ ರಸಿಕರ ಸಂಘ ಪ್ರಶಸ್ತಿ, ಪ್ರೀತ್ಸೆ ಪ್ರೀತ್ಸೆ ಹಾಡಿಗೆ ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ ಅವಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ.