ಗಂಡನಿಗೆ ಡೈವೋರ್ಸ್ ಕೊಟ್ಟ ನಿರೂಪಕಿ ಚೈತ್ರ ವಾಸುದೇವನ್, ನಿಜಕ್ಕೂ ಏನಾಗಿತ್ತು ಅಂತ ಸುಂದರ ಸಂಸಾರಕ್ಕೆ, ನಿಜ ಸತ್ಯ ಇಲ್ಲಿದೆ.
Chaitra Vasudevan: Why Chaitra vasudevan gave divorce to her husband.
Chaitra Vasudevan: ಕನ್ನಡ ಕಿರುತೆರೆಯಲ್ಲಿ ಬಹಳ ಹೆಸರುವಾಸಿಯಾಗಿರುವ ಚೈತ್ರ ವಾಸುದೇವನವರು ಬಿಗ್ ಬಾಸ್ ಹಾಗೂ ಧಾರಾವಾಹಿಗಳ ಜೊತೆಗೆ ನಿರೂಪಣೆಯಲ್ಲೂ ಕೂಡ ಬಹಳ ಹೆಸರುವಾಸಿಯಾಗಿದ್ದರು(Anchor Chaitra Vasudevan). ಇವರಿಗೆ ಮದುವೆ ಸಹ ಆಗಿತ್ತು ಆದರೆ ಇವರ ಜೀವನದಲ್ಲಿ ಆಕಸ್ಮಾತಾಗಿ ಬಿರುಕು ಉಂಟಾಗಿದ್ದು ಇವರ ಪತಿ ಆಗಿರುವ ಸತ್ಯ ನಾಯ್ಡು ಅವರಿಗೆ ಡೈವೋರ್ಸ್ ಕೂಡ ಈಗಾಗಲೇ ನೀಡಿದ್ದಾರೆ.(Chaitra vasudevan husband sathya naidu).
ಚೈತ್ರ ವಾಸುದೇವನ್ ಅವರು ತಾನು ತನ್ನ ಗಂಡನಿಗೆ Divorce ಕೊಟ್ಟಿರುವ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ವಿಷಯ ಕುರಿತು ಹಂಚಿಕೊಂಡಿದ್ದಾರೆ. ಅದೇನೆಂದರೆ ಎಲ್ಲರಿಗೂ ನಮಸ್ಕಾರ ಹಲವಾರು ತಿಂಗಳುಗಳಿಂದ ಸಾಕಷ್ಟು ಬಾರಿ ಯೋಚಿಸಿದ ನಂತರ ನಾನು ನನ್ನ ವಿಚ್ಛೇದನ ಜೀವನ ಕುರಿತಾಗಿ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ ಸತ್ಯ ಮತ್ತು ನಾನು ಬೇರೆ ಬೇರೆಯಾಗಿದ್ದೇವೆ.
ನಿಮ್ಮಲ್ಲಿ ಈ ದ್ವೇಷ ಬೇಡ ಎಂದು ನಾನು ವಿನಂತಿಸಿಕೊಳ್ಳುತ್ತೇನೆ ನಾನು ಈ ಸ್ಥಿತಿಯಿಂದ ಬರಲು ತುಂಬಾನೇ ಕಷ್ಟ ಪಡುತ್ತಿದ್ದೇನೆ. ನಾನು ಮಾಡುತ್ತಿರುವ ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯನ್ನು ಸಹಾಯ ಮಾಡುತ್ತದೆ. ನಾನು ಇವೆಂಟ್ ಮತ್ತು ಟಿವಿ ಮಾಧ್ಯಮಗಳಲ್ಲಿ ಬರೋಬ್ಬರಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನು ಮುಂದೆ ಸಹ ಮುಂದುವರೆಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಕಾಯುತಿದ್ದೇನೆ ಎಂದು ಚೈತ್ರ ವಾಸುದೇವನ್ ಅವರು ಬರೆದುಕೊಂಡಿದ್ದಾರೆ.
ಇವರ ಪತಿ ಆಗಿದ್ದ ಸತ್ಯ ನಾಯ್ಡು ಅವರು ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದು ಖಾಸಗಿ ಕಂಪನಿ ಒಂದರಲ್ಲಿ ಚೈತ್ರ ಅವರನ್ನು ನೋಡಿ ಮೆಚ್ಚಿಕೊಂಡಿದ್ದರು. ಚೈತ್ರ ಮತ್ತು ಸತ್ಯ ನಾಯ್ಡು ಅವರು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈ ದಂಪತಿಗಳು ಇದೀಗ ತಮ್ಮ 6 ವರ್ಷದ ದಾಂಪತ್ಯ ಜೀವನವನ್ನು ಮುರಿದುಕೊಂಡಿದ್ದಾರೆ. ಚೈತ್ರ ಅವರು ದಕ್ಷಿಣ ಭಾರತದ ಫೇಮಸ್ ವಿಡಿಯೋ ಜಾಕಿ ಕೂಡ ಆಗಿ ಅಷ್ಟೇ ಅಲ್ಲದೆ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧೆ ಕೂಡ ಆಗಿದ್ದರು. ಇವರಿಬ್ಬರ ನಡುವೆ ಆಗಿರುವ ಮನಸ್ತಾಪದಿಂದ ಇವರಿಬ್ಬರೂ ಕೂಡ ಈಗ ಬೇರೆ ಬೇರೆಯಾಗಿದ್ದಾರೇ. ಇನ್ನು ಚೈತ್ರ ವಾಸುದೇವನ್ ಅವರ ವಯಸ್ಸುಸದ್ಯಕ್ಕೆ 30 ವರ್ಷವಾಗಿದೆ, ಚೈತ್ರ ವಾಸುದೇವನ್ ಅವರು ಜೂನ್ 21, 1993 ರಲ್ಲಿ ಜನಿಸಿದರು. (Chaitra vasudevan age and date of birth, 21st june 1993, as of now Chaitra vasudevan age is 30 years).