ಖ್ಯಾತ ನಟ ದುನಿಯಾ ವಿಜಯ್ ಅವರು ತೆಲುಗಿನಲ್ಲಿ ವಿಲನ್ ಪಾತ್ರದಲ್ಲಿ ಮೊದಲನೆಯದಾಗಿ ನಟಿಸುತ್ತಿದ್ದಾರೆ.. ಅಷ್ಟಕ್ಕೂ ಆ ಸಿನಿಮಾ ಯಾವುದು ?? ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ, ಕನ್ನಡ ದಲ್ಲೀ ಇಷ್ಟು ಸಿಗಲ್ಲ !!
ನಟ ದುನಿಯಾ ವಿಜಯ್ ಅವರ ಪ್ರತಿಭೆಯನ್ನು ಎಷ್ಟು ಹೊಗಳಿದರೂ ಕೂಡ ಕಡಿಮೆಯಾಗಲಾರದು. ಏಕೆಂದರೆ ಇವರು ನೋಡುವುದಕ್ಕೆ ಕಪ್ಪು ಬಣ್ಣದಲ್ಲಿ ಇದ್ದರೂ ಕೂಡ ಇವರ ಜನಪ್ರಿಯತೆ ತುಂಬಾ ಹೆಚ್ಚು ಎಂದು ಹೇಳಬಹುದು. ಇವರು ತುಂಬ ಕಡುಬಡತನದಿಂದ ಬಂದಿದ್ದಾರೆ. ಇವೆರಡು ಇದ್ದರೂ ಕೂಡ ದುನಿಯಾ ವಿಜಯ್ ಅವರು ಸ್ಯಾಂಡಲ್ ವುಡ್ ನಲ್ಲಿ ತುಂಬಾನೇ ಜನಪ್ರಿಯ ನಟರಾಗಿ ಬೆಳೆದಿದ್ದಾರೆ.
ಏಕೆಂದರೆ ಅವರಲ್ಲಿ ಒಂದು ಕಲಾ ಶಕ್ತಿ ಇದೆಯೆಂದು ಹೇಳಬಹುದು. ಒಂದಾನೊಂದು ಕಾಲದಲ್ಲಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ದುನಿಯಾ ವಿಜಯ್ ಅವರು ಜೂನಿಯರ್ ಆರ್ಟಿಸ್ಟ್ ಆಗಿ ಫೈಟ್ ಮಾಸ್ಟರ್ ಆಗಿ ಮತ್ತು ಸ್ಟಂಟ್ ಮ್ಯಾನ್ ಆಗಿ ಕೆಲಸವನ್ನು ಮಾಡುತ್ತಿದ್ದರು. ಆದರೆ ಅವರ ದುನಿಯಾ ಚಿತ್ರದ ಮೂಲಕ ಇವರು ತುಂಬ ಯಶಸ್ಸನ್ನು ಸಾಧಿಸಿದರು.
ಈ ಸಿನಿಮಾ ಸಾಕಷ್ಟು ನಟರಿಗೆ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಬಹುದು. ಮೊನ್ನೆಯಷ್ಟೇ ಬಿಡುಗಡೆಯಾಗಿರುವ ದುನಿಯಾ ವಿಜಯ್ ಅವರ ನಿರ್ದೇಶನದ ಮತ್ತು ನಟನೆಯ ಸಲಗ ಚಿತ್ರವು ಕೂಡ ಸೂಪರ್ ಹಿಟ್ ಎಂದು ಹೇಳಬಹುದು. ಇನ್ನೂ ದುನಿಯಾ ವಿಜಯ್ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಈಗ ತೆಲುಗಿನಲ್ಲಿ ಕೂಡ ನಟಿಸುವುದಕ್ಕೆ ಅವಕಾಶ ದೊರಕಿದೆ.
ಹೌದು ಲೆಜೆಂಡ್ ಖ್ಯಾತ ನಟ ಬಾಲಕೃಷ್ಣ ಅವರ 107 ಸಿನಿಮಾದಲ್ಲಿ ವಿಲನ್ ಆಗಿ ನಟಿಸುವುದಕ್ಕೆ ಅವಕಾಶ ದೊರಕಿದೆ. ಇನ್ನೂ ಇದಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ. ಇದನ್ನು ಕೇಳಿದರೆ ಎಲ್ಲರೂ ಬೆರಗಾಗುವುದಂತೂ ನಿಜ. ಇವರು ಹೀರೋ ಆಗಿ ತೆಗೆದುಕೊಳ್ಳುವ ಸಂಭಾವನೆಗಿಂತ ತೆಲುಗಿನಲ್ಲಿ ವಿಲನ್ ಆಗಿ ನಟಿಸುವುದಕ್ಕೆ ಹೆಚ್ಚು ಸಂಭಾವನೆ ಪಡೆದಿದ್ದಾರೆ.
ಹೌದು ದುನಿಯಾ ವಿಜಯ್ ಅವರು ಹೀರೋ ಆಗಿ ನಟಿಸುತ್ತಿರುವುದಕ್ಕೆ ಬರೋಬ್ಬರಿ 4 ರಿಂದ 6 ಕೋಟಿ ರೂ. ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈಗ ತೆಲುಗಿನಲ್ಲಿ ಅದರಲ್ಲೂ ಬಾಲಕೃಷ್ಣ ಅವರ ಸಿನಿಮಾದಲ್ಲಿ ವಿಲನ್ ಆಗಿ ನಟನೆ ಮಾಡುತ್ತಿರುವುದಕ್ಕೆ ಇವರಿಗೆ ಬರೋಬ್ಬರಿ 7.5 ಕೋಟಿ ರೂ. ಗಳ ದೊಡ್ಡ ಮೊತ್ತದ ಸಂಭಾವನೆ ಸಿಗಲಿದೆ. ದುನಿಯಾ ವಿಜಯ್ ಅವರ ಇಷ್ಟು ವರ್ಷಗಳ ಪರಿಶ್ರಮಕ್ಕೆ ಈಗ ಒಂದು ದೊಡ್ಡ ಪ್ರತಿಫಲ ಸಿಗಲಿದೆ ಎಂದು ಹೇಳಲಾಗಿದೆ….