ಖ್ಯಾತ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಮದುವೆಯಲ್ಲಿ ವಿರಾಟ್ ಕೊಹ್ಲಿ ಡಾನ್ಸ್,, ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ ಇಲ್ಲಿದೆ ನೋಡಿ !!
ಆಸ್ಟ್ರೇಲಿಯದ ಪ್ರೊಫೆಶನಲ್ ಕ್ರಿಕೆಟಿಗ ಆಗಿರುವ ಗ್ಲೆನ್ ಜೇಮ್ಸ್ ಮ್ಯಾಕ್ಸ್ ವೆಲ್ ಅವರು ಅಕ್ಟೋಬರ್ 14 1988 ರಂದು ಆಸ್ಟ್ರೇಲಿಯದಲ್ಲಿ ಇರುವ ಕೀವ್ ನಲ್ಲಿ ಜನಿಸಿದರು. ಇವರ ತಂದೆ ಹೆಸರು ನೇಲ್ ಮ್ಯಾಕ್ಸ್ ವೆಲ್ ಮತ್ತು ತಾಯಿಯ ಹೆಸರು ಜಾಯ್ ಮ್ಯಾಕ್ಸ್ ವೆಲ್. ಗ್ಲೆನ್ ಜೇಮ್ಸ್ ಮ್ಯಾಕ್ಸ್ ವೆಲ್ ಅವರು ಆಸ್ಟ್ರೇಲಿಯದ ಕ್ರಿಕೆಟಿಗ ಆಗಿದ್ದು ಇವರು ಸಾಕಷ್ಟು ಟಿ20 ಮತ್ತು ಟೆಸ್ಟ್ ಮ್ಯಾಚ್ ಗಳನ್ನು ಆಡಿದ್ದಾರೆ.
ಇವರು ಆಲ್ ರೌಂಡರ್ ಆಗಿದ್ದು ರೈಟ್ ಹ್ಯಾಂಡೆಡ್ ಬ್ಯಾಟ್ಸ್ ಮನ್ ಆಗಿದ್ದಾರೆ. ಇದರ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದರೆ ಆರ್.ಸಿ.ಬಿ ಟೀಮ್ ನಲ್ಲಿ ಕೂಡ ಇವರು ಒಬ್ಬ ಪ್ಲೇಯರ್ ಆಗಿದ್ದಾರೆ. ಇನ್ನೂ ಗ್ಲೆನ್ ಮ್ಯಾಕ್ಸ್ ವೆಲ್ ಅವರು ನಮ್ಮ ಭಾರತದ ತಮಿಳುನಾಡಿನ ಹುಡುಗಿ ವಿನಿ ರಾಮನ್ ಅವರನ್ನು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ವಿವಾಹ ಮಾಡಿಕೊಂಡಿದ್ದಾರೆ.
ಇವರ ನಿಶ್ಚಿತಾರ್ಥ ಕಳೆದ ವರ್ಷ ಫೆಬ್ರವರಿ 26 2020 ರಂದು ಜರುಗಿತ್ತು. ಈಗ ಇವರಿಬ್ಬರೂ ಇದೇ ವರ್ಷ ಮಾರ್ಚ್ 18 2022 ರಂದು ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಮದುವೆಯಾಗಿದ್ದು ನಮ್ಮ.
ಭಾರತದ ಹುಡುಗಿಯನ್ನೇ. ಗ್ಲೆನ್ ಜೇಮ್ಸ್ ಮ್ಯಾಕ್ಸ್ ವೆಲ್ ಅವರು ಭಾರತಕ್ಕೆ ಈಗ ಅಳಿಯ ಆಗಿದ್ದಾರೆ. ಹೌದು ವಿನಿ ರಾಮನ್ ಅವರು ತಮಿಳುನಾಡಿನ ರಾಜ್ಯಕ್ಕೆ ಸೇರಿದ್ದು ಇವರು ಮಾರ್ಚ್ 3 1993 ರಂದು ಜನಿಸಿದ್ದಾರೆ.
ವಿನಿ ರಾಮನ್ ಅವರು ಆಸ್ಟ್ರೇಲಿಯಾದಲ್ಲಿ ಮೆಡಿಕಲ್ ಸೈನ್ಸ್ ಅನ್ನು ಮುಗಿಸಿ ಅಲ್ಲೇ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಇವರ ಮದುವೆ ಚೆನ್ನೈನಲ್ಲಿ ಜರುಗಿತು. ಇವರ ಮದುವೆಗೆ ಸಾಕಷ್ಟು ಸ್ನೇಹಿತರು ಬಂಧು ಮಿತ್ರರು ಮತ್ತು ಕ್ರಿಕೆಟಿಗರು.
ಆಹ್ವಾನ ಮಾಡಿದ್ದರು. ಅದರಲ್ಲಿ ನಮ್ಮ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಗ್ಲೆನ್ ಮ್ಯಾಕ್ಸ್ ವೆಲ್ ಮದುವೆಗೆ ಬಂದು ಅಲ್ಲಿ ತಮ್ಮ ಸ್ನೇಹಿತರ ಜೊತೆಗೆ ಡಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ವೈರಲ್ ಆಗಿದೆ……