Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕೋಟಿ ಕೋಟಿ ಕೊಟ್ಟರೂ ಬಟ್ಟೆ ಬಿಚ್ಚಲ್ಲ ಎಂದ ಖ್ಯಾತ ನಟಿ ಕೀರ್ತಿ ಸುರೇಶ್..!! 

0

ಈಗಿನ ಕಾಲದಲ್ಲಿ ಬರುತ್ತಿರುವ ಸಿನಿಮಾಗಳು ತುಂಬಾನೇ ಬದಲಾಗಿವೆ ಎಂದು ಹೇಳಬಹುದು. ಆಗಿನ ಕಾಲದಲ್ಲಿ ಸಿನಿಮಾದ ನಟಿಯರು ಮೈತುಂಬ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದರು. ಆದರೆ ಈಗೀಗ ಬರುತ್ತಿರುವ ನಟಿಯರು ಕೇವಲ ತಮ್ಮ ದೈಹಿಕ ಪ್ರದರ್ಶನದಿಂದ ಜನಪ್ರಿಯತೆಯನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಹಾಗಂತ ಎಲ್ಲಾ ನಟಿಯರು ಹೀಗೆ ಇದ್ದಾರೆ ಎಂದು ಹೇಳಲಿಕ್ಕೆ ಆಗುವುದಿಲ್ಲ.

ಅದರಲ್ಲಿ ಕೆಲ ನಟಿಯರು ತಮ್ಮ ಅಭಿನಯದ ಮೂಲಕ ಕೂಡ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಅದರಲ್ಲಿ ಕೀರ್ತಿ ಸುರೇಶ್ ಅವರ ಬಗ್ಗೆ ನಾವು ಮಾತನಾಡುತ್ತೇವೆ. ಕೀರ್ತಿ ಸುರೇಶ್ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಹೆಸರನ್ನು ಗೂಗಲ್ನಲ್ಲಿ ಹೊಡೆದು ನೋಡಿದರೆ ಅವರ ಪ್ರತಿಯೊಂದು ಫೋಟೋಗಳು ಕೂಡ ತುಂಬ ಸೊಗಸಾಗಿ ಇರುತ್ತವೆ.

ಅಂದರೆ ಅದರಲ್ಲಿ ಯಾವುದೇ ರೀತಿಯ ಅಸ್ಸಯ್ಯ ಆಗಿರುವ ಬಟ್ಟೆಗಳನ್ನು ಅವರು ಹಾಕಿರುವುದಿಲ್ಲ ಸೀರೆ ಚೂಡಿದಾರ್ ಈ ರೀತಿಯ ಸಾಂಪ್ರದಾಯಿಕ ಬಟ್ಟೆಗಳನ್ನೇ ಅವರು ಯಾವಾಗಲೂ ಹಾಕಿಕೊಳ್ಳುತ್ತಾರೆ. ಇನ್ನು ತೆಲುಗಿನಲ್ಲಿ ಮಹಾನಟಿ ಚಿತ್ರವನ್ನು ಸಾಕಷ್ಟು ಜನರು ನೋಡೆ ಇರುತ್ತಾರೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಅವರು ಮಾಡಿದ ನಟನೆ ಅದ್ಭುತ ಎಂದು ಹೇಳಬಹುದು.

ಹೌದು ಏಕೆಂದರೆ ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರು ಹಿರಿಯ ನಟಿ ಸಾವಿತ್ರಿ ಅವರ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ಈ ಸಿನಿಮಾದ ಮೂಲಕ ಕೀರ್ತಿ ಸುರೇಶ್ ಅವರು ತುಂಬಾನೇ ಜನಪ್ರಿಯ ಆದರು. ಇನ್ನೂ ಕೀರ್ತಿ ಸುರೇಶ್ ಅವರು ಸ್ವತಃ ಒಂದು ಸಂದರ್ಶನದಲ್ಲಿ ಹೇಳಿದಂತೆ ಅವರಿಗೆ ಅವರದೇ ಆದ ಸಿದ್ಧಾಂತ ಇದೆ.

ಅದು ಏನೆಂದರೆ ನನಗೆ ನಟನೆ ಮಾಡುವುದಕ್ಕೆ ತುಂಬ ಇಷ್ಟ ಆದರೆ ಯಾವುದೇ ಕಾರಣಕ್ಕೂ ನಾನು ಬಟ್ಟೆಯನ್ನು ಬಿಚ್ಚಿ ನಟನೆ ಮಾಡಿ ತೆರೆಯ ಮೇಲೆ ಕಾಣಿಸುವುದಿಲ್ಲ. ಏಕೆಂದರೆ ಅಭಿಮಾನಿಗಳು ನನ್ನ ನಟನೆಯನ್ನು ನೋಡಬೇಕು ನನ್ನ ಅಭಿನಯದ ಮೂಲಕ ನಾನು ಎಲ್ಲರನ್ನು ಗೆಲ್ಲುತ್ತೇನೆ. ಇದು ಆದರೆ ಆಗಲಿ ಇಲ್ಲದಿದ್ದರೆ ಪರವಾಗಿಲ್ಲ. ಸಿನಿಮಾದಲ್ಲಿ ಎಷ್ಟೇ ಕೋಟಿ ಕೊಟ್ಟರೂ ಕೂಡ ನಾನು ಬಟ್ಟೆ ಬಿಚ್ಚುವುದಿಲ್ಲ ಎಂದು ಹೇಳಿದ್ದಾರೆ.

ಈ ಸಿದ್ಧಾಂತದ ಮುಖಾಂತರ ಕೀರ್ತಿ ಸುರೇಶ್ ಅವರು ಯಾವುದೇ ಸಿನಿಮಾಗಳಲ್ಲಿ ನೋಡಿದರೂ ಕೂಡ ಒಳ್ಳೆಯ ಬಟ್ಟೆಗಳನ್ನು ಧರಿಸಿರುತ್ತಾರೆ. ಈಗಿನ ಕಾಲದ ನಟಿಯರಲ್ಲಿ ಕೀರ್ತಿ ಸುರೇಶ್ ಅವರು ಎಷ್ಟು ಚೆನ್ನಾಗಿ ಈ ರೀತಿ ಸಿದ್ಧಾಂತ ಮಾಡಿಕೊಂಡಿದ್ದಾರೆ ಎಂದರೆ ತುಂಬಾ ಖುಷಿ ಎನಿಸುತ್ತದೆ. ಇನ್ನು ಕೀರ್ತಿ ಸುರೇಶ್ ಅವರು ನಿರ್ಮಾಪಕ ಜಿ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಸುರೇಶ್ ಅವರ ಮಗಳು.

ಕೀರ್ತಿ ಸುರೇಶ್ ಅವರು ಅಕ್ಟೋಬರ್ 17 1992 ರಂದು ಚೆನ್ನೈನಲ್ಲಿ ಜನಿಸಿದ್ದಾರೆ. ಕೀರ್ತಿ ಸುರೇಶ್ ಅವರು 2000 ರಲ್ಲಿ ಮಲಯಾಳಂ ನಲ್ಲಿ ಪೈಲೆಟ್ ಚಿತ್ರದ ಮೂಲಕ ಬಾಲ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದಾದ ಮೇಲೆ ಇನ್ನೂ 2 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿ 2013 ರಲ್ಲಿ ಮಲಯಾಳಂನ ಗೀತಾಂಜಲಿ ಚಿತ್ರದ ಮೂಲಕ ನಾಯಕಿ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದಾದ ಮೇಲೆ ಸಾಕಷ್ಟು ತಮಿಳು ತೆಲುಗು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ……

Leave A Reply