Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕೊರೋನಾ ಬಗ್ಗೆ ಅಪ್ಪು ಹೇಳಿದ ಮಾತು ನಿಜ ಎನ್ನಿಸುತ್ತದೆ..!! ಅಂದು ಅಪ್ಪು ಹೇಳಿದ ಈ ಮಾತನ್ನು ಕೇಳಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ !!

0

ಅಪ್ಪು ಅವರ ಯುವರತ್ನ ಚಿತ್ರವು ಬಿಡುಗಡೆಯಾಗುವ ಮುನ್ನ ಅವರು ಮಾಧ್ಯಮದ ಮುಂದೆ ಒಂದು ಸಂದರ್ಶನದಲ್ಲಿ ಕೊರೋನಾ ಬಗೆ ಹೇಗೆ ಎಚ್ಚರಿಕೆಗಳನ್ನು ಪಾಲಿಸಬೇಕು ಎಂದು ಕೇಳಿದಾಗ ಅಪ್ಪು ಅವರು ಏನು ಹೇಳಿದ್ದಾರೆ ನೋಡಿ. ಕೊರೋನಾ ಹಾವಳಿ ಈಗ ಎಲ್ಲಾ ಕಡೆ ತುಂಬ ಇದೆ. ಅದರ ಬಗ್ಗೆ ಅಷ್ಟಾಗಿ ಭಯಪಡುವ ಯೋಚನೆಯಿಲ್ಲ.

ಅದನ್ನು ಬಿಟ್ಟು ನಾವು ಪ್ರತಿದಿನ ಮಾಸ್ಕ್ ಗಳನ್ನು ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದಕ್ಕೆ ಆಗಲಿಲ್ಲ ಎಂದರೆ ಮಾಸ್ಕ್ ಗಳನ್ನು ಆದರೂ ತಪ್ಪದೆ ಧರಿಸಬೇಕು ಮತ್ತು ತಪ್ಪದೇ ನಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.

ಒಂದು ವೇಳೆ ಕೊರೋನಾ ಲಕ್ಷಣಗಳು ಕಾಣಿಸಿದರೆ ಮನೆಯಲ್ಲೇ ಅದಕ್ಕೆ ಚಿಕ್ಕ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಹೇಗೆಂದರೆ ನಮ್ಮ ದೇಹದ ಉಷ್ಣವನ್ನು ಪರಿಶೀಲನೆ ಮಾಡಿಕೊಳ್ಳಬೇಕು, ಬಿಸಿ ನೀರು ಕುಡಿಯಬೇಕು, ಅದಕ್ಕೆ ಸಂಬಂಧಪಟ್ಟ ಆರೋಗ್ಯದ ಸಲಹೆಗಳನ್ನು ನಾವು ಪಾಲಿಸಬೇಕು.

ಕೊರೋನಾ ಬಂದ ಮೇಲೆ ಚಿಕಿತ್ಸೆಯನ್ನು ಪಡೆಯುವುದಕ್ಕಿಂತ ಅದರ ಮುಂಚೆಯೇ ನಾವು ಈ ರೀತಿಯ ಎಚ್ಚರಿಕೆಗಳನ್ನು ಪಾಲಿಸಿದರೆ ಯಾವ ಕಾಯಿಲೆ ಕೂಡ ನಮ್ಮ ಬಳಿ ಬರುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಈಗಲೂ ಕೂಡ ಮತ್ತೆ ಕೊರೋನಾ ಮತ್ತೆ ಶುರುವಾಗಿದೆ. ಹಾಗಾಗಿ ಮನೆಯಲ್ಲಿಯೇ ಕೆಲವು ಎಚ್ಚರಿಕೆಗಳನ್ನು ಪಾಲಿಸಬೇಕು ಮತ್ತು ಹೊರಗೆ ಹೋದರೆ ಮಾಸ್ಕ್ ಗಳನ್ನು ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.

ಇನ್ನೂ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಹೇಳಬೇಕು ಎಂದರೆ ಇವರು ಚಿಕ್ಕ ವಯಸ್ಸಿನಲ್ಲೇ ಸಿನಿಮಾ ಕ್ಷೇತ್ರದಲ್ಲಿ ಇದ್ದು ನಟಿಸಿ ಆ ವಯಸ್ಸಿನಲ್ಲಿ ಜನಪ್ರಿಯರಾಗಿ ತುಂಬಾನೇ ಗುರುತಿಸಿಕೊಂಡಿದ್ದರು. ಎಲ್ಲಾ ನಟರು ನಟಿಸಿ ಒಂದು ಹಂತಕ್ಕೆ ಬಂದ ಮೇಲೆ ಜನಪ್ರಿಯರಾಗುತ್ತಾರೆ. ಆದರೆ ಪುನೀತ್ ಅವರು ಹಾಗೆ ಅಲ್ಲ ಬಾಲನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಆಗಲೇ ಅಭಿಮಾನಿಗಳ ಸಂಘವನ್ನು ಬೆಳೆಸಿಕೊಂಡಿದ್ದರು.

ಪುನೀತ್ ರಾಜ್ ಕುಮಾರ್ ಅವರು ಮಾರ್ಚ್ 17 1975 ರಂದು ಜನಿಸಿದ್ದಾರೆ. ಇನ್ನೂ ಇವರು ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಕಿರಿಯ ಮಗ. ಪುನೀತ್ ಅವರಿಗೆ ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಪೂರ್ಣಿಮಾ ಮತ್ತು ಲಕ್ಷ್ಮಿ ಎನ್ನುವ ಸಹೋದರರು ಸಹೋದರಿಯರು ಇರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ.

ಪುನೀತ್ ರಾಜ್ ಕುಮಾರ್ ಅವರು 1976 ರಲ್ಲಿ ಪ್ರೇಮದ ಕಾಣಿಕೆ ಚಿತ್ರದಲ್ಲಿ ಕೇವಲ 1 ವರ್ಷ ಮಗು ಇದ್ದಾಗಲೇ ತೆರೆಯ ಮೇಲೆ ಕಾಣಿಸಿಕೊಂಡರು. ಇವರು ಬಾಲನಟರಾಗಿ ಸುಮಾರು 10 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಅಪ್ಪು ಚಿತ್ರದ ಮೂಲಕ ಇವರು ನಾಯಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದು 2002 ರಲ್ಲಿ ಬಿಡುಗಡೆಯಾಗಿತ್ತು.

ತದನಂತರ ಅಭಿ, ವೀರಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜ್ಜಯ್ಯ, ಅರಸು, ಮಿಲನ, ಬಿಂದಾಸ್, ವಂಶಿ, ರಾಜ್, ರಾಮ್, ಪೃಥ್ವಿ, ಜಾಕಿ, ಹುಡುಗರು, ಪರಮಾತ್ಮ, ಅಣ್ಣಾಬಾಂಡ್, ಯಾರೇ ಕೂಗಾಡಲಿ, ನಿನ್ನಿಂದಲೇ, ಪವರ್, ರಣ ವಿಕ್ರಮ, ಚಕ್ರವ್ಯೂಹ, ದೊಡ್ಮನೆ ಹುಡುಗ, ರಾಜಕುಮಾರ, ಅಂಜನಿಪುತ್ರ, ನಟಸಾರ್ವಭೌಮ, ಯುವರತ್ನ ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರು ಕೇವಲ ನಟ ಮಾತ್ರವಲ್ಲ ಸಾಕಷ್ಟು ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇದರ ಜೊತೆಗೆ ಇವರು ಕನ್ನಡದ ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿದ್ದರು ಮತ್ತು ಜಡ್ಜ್ ಕೂಡ ಆಗುದ್ದರು. ಪುನೀತ್ ಅವರು ಡಿಸೆಂಬರ್ 1 1999 ರಂದು ಅಶ್ವಿನಿ ಅವರನ್ನು ವಿವಾಹವಾಗಿದ್ದರು.

ಇವರಿಗೆ ಧೃತಿ ಮತ್ತು ವಂದನಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ದುರದೃಷ್ಟವಶಾತ್ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ಅಕ್ಟೋಬರ್ 29 2021 ರಂದು ನಿಧನ ಹೊಂದಿದರು. ಇವರ ಮರಣವು ನಮ್ಮ ಕರ್ನಾಟಕ ಸಿನಿ ಇಂಡಸ್ಟ್ರಿಗೆ ಒಂದು ದೊಡ್ಡ ನಷ್ಟ ಎಂದು ಹೇಳಬಹುದು

ಇನ್ನೂ ಪುನೀತ್ ಅವರಿಗೆ ಸಮಾಜಿಕ ಕಳಕಳಿಯ ಮೇಲೆ ತುಂಬಾ ಆಸಕ್ತಿ ಇದೆ. ಹಾಗಾಗಿ ಇವರು 24 ಉಚಿತ ಶಾಲೆ 16 ವೃದ್ಧಾಶ್ರಮ 19 ಗೋಶಾಲೆ 1800 ಮಕ್ಕಳ ಸಂಪೂರ್ಣ ಶಿಕ್ಷಣ ಮತ್ತು ಮೈಸೂರಿನಲ್ಲಿ ಹೆಣ್ಣುಮಕ್ಕಳಿಗಾಗಿ ಶಕ್ತಿಧಾಮವನ್ನು ನಡೆಸುತ್ತಿದ್ದಾರೆ……

Leave A Reply