ಬಿಗ್ ಬಾಸ್ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎಂಬುದು ಎಲ್ಲರಿಗೂ ಸಹ ತಿಳಿದಿರುವ ವಿಷಯ. ಬಿಗ್ ಬಾಸ್ ಎಂದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇಷ್ಟ ಪಟ್ಟು ನೋಡುವ ರಿಯಾಲಿಟಿ ಶೋ. ಬಿಗ್ ಬಾಸ್ ಪ್ರಸಾರವಾಗುವ ವೇಳೆಗೆ ಕೆಲಸವೆಲ್ಲ ಮುಗಿಸಿ ಟಿವಿ ಮುಂದೆ ಕೂತು ತಮ್ಮ ನೆಚ್ಚಿನ ಸ್ಪರ್ಧಿಗಳ ಬಿಗ್ ಬಾಸ್ ಜೀವನವನ್ನು ನೋಡುತ್ತಾ ಅವರನ್ನು ಬೆಂಬಲಿಸುತ್ತಾ ಈ ಶೋ ಅನ್ನು ಆನಂದಿಸುವವರಿಗೇನೂ ಕಡಿಮೆಯಿಲ್ಲ. ಬಿಗ್ ಬಾಸ್ ಕೇವಲ ರಿಯಾಲಿಟಿ ಶೋ ಆಗಿ.
ಉಳಿದಿಲ್ಲ ಬದಲಿಗೆ ನೋಡುಗರ ನೆಚ್ಚಿನ ಶೋ ಆಗಿ ಮನರಂಜಿಸುತ್ತಾ ಎಲ್ಲರ ಮನೆ ಮನಗಳಲ್ಲಿ ತನ್ನದೇ ಆದ ಜಾಗ ಬಿಗ್ ಬಾಸ್ ಶೋ ಪಡೆದುಕೊಂಡಿದೆ. ಬಿಗ್ ಬಾಸ್ ಕೇವಲ ಒಂದು ರಿಯಾಲಿಟಿ ಶೋ ಆಗಿರದೆ ಅದೆಷ್ಟೋ ಜನರ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.
ಹೌದು ಅದೆಷ್ಟೋ ಜನರು ಬಿಗ್ ಬಾಸ್ ಮೂಲಕ ಜೀವನ ಕಂಡುಕೊಂಡಿದ್ದಾರೆ. ಬಿಗ್ ಬಾಸ್ ಗೆ ಬಂದು ಜನರಿಗೆ ಪರಿಚಿತರಾಗಿ ಅದೆಷ್ಟೋ ಜನರ ಪ್ರತಿಭೆ ಬೆಳಕಿಗೆ ಬಂದಿದೆ. ಇನ್ನು ಬಿಗ್ ಬಾಸ್ ಇಷ್ಟು ಜನಪ್ರಿಯರಾಗಲು ಬಲು ಮುಖ್ಯ ಕಾರಣ ಎಂದರೆ ಅದು ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್ ಅವರು. ಇವರು ಶೋ ನಡೆಸಿ ಕೊಡುವ ರೀತಿಯೇ ಅದ್ಭುತ.
ಅಂದಹಾಗೆ ಇದೀಗ ಬಿಗ್ ಬಾಸ್ ನಲ್ಲಿ ಭಾಗವಹಿಸಿ ಅದರಲ್ಲಿ ಗೆದ್ದು ಆಧುನಿಕ ರೈತ ಎಂದೇ ಕರೆಸಿಕೊಳ್ಳುವ ಶಶಿ ಕುಮಾರ್ ಅವರು ಬಿಗ್ ಬಾಸ್ ಮೂಲಕ ಭಾರೀ ಜನಪ್ರಿಯತೆ ಗಳಿಸಿದರು. ಇದೀಗ ಶಶಿ ಕುಮಾರ್ ಅವರು ಹಸೆಮಣೆ ಏರಲಿದ್ದು ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂದಹಾಗೆ ಬಿಗ ಬಾಸ್ ಮೂಲಕ ಅಭಿಮಾನಿಗಳನ್ನು ಗಳಿಸಿದ ಇವರ ಮದುವೆ ಬಗ್ಗೆ ಅಭಿಮಾನಿಗಳು ಕೇಳುತ್ತಿದ್ದರು.
ಇದೀಗ ಅದಕ್ಕೆಲ್ಲಾ ಉತ್ತರಿಸಿರುವ ಶಶಿ ಕುಮಾರ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಮೂಲದ ಇಂಜಿನಿಯರ್ ಆಗಿರುವ ಸ್ವಾತಿ ಎಂಬುವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಶಶಿ ಅವರು ಇದೇ ಆಗಸ್ಟ್ 6 ರಂದು ಹಸೆಮಣೆ ಏರಲಿದ್ದಾರೆ.
ಅರೇಂಜ್ ಮ್ಯಾರೇಜ್ ಆಗುತ್ತಿರುವ ಶಶಿ ಅವರು ಎರಡೂ ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂದಹಾಗೆ ಮೆಹಬೂಬ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಶಶಿ ಅವರು ಮುಂದೆ ನಟನೆ ಮತ್ತು ಕೃಷಿ ಎರಡನ್ನೂ ನಿಭಾಯಿಸುವ ಕನಸನ್ನು ಹೊಂದಿದ್ದಾರೆ. ಶಶಿ ಅವರ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಆಶಿಸೋಣ…..